Home » Puttila parivara: ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ – ಬಿಜೆಪಿಯೊಂದಿಗೆ ‘ಪುತ್ತಿಲ ಪರಿವಾರ ವಿಲೀನ’ !!

Puttila parivara: ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ – ಬಿಜೆಪಿಯೊಂದಿಗೆ ‘ಪುತ್ತಿಲ ಪರಿವಾರ ವಿಲೀನ’ !!

1 comment
Puttila parivara

Puttila parivara: ಪ್ರತ್ಯೇಕ ಪರಿವಾರ, ಪ್ರತ್ಯೇಕ ಅಭ್ಯರ್ಥಿ ಘೋಷಣೆ ಮೂಲಕ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಕರಾವಳಿ ಭಾಗದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಅರುಣ್ ಕುಮಾರ್ ಪುತ್ತಿಲರ ನೇತೃತ್ವದ ‘ಪುತ್ತಿಲ ಪರಿವಾರ'(Puttila parivara) ಬಿಜೆಪಿಯೊಂದಿಗೆ ವಿಲೀನವಾಗಿದೆ. ಅರುಣ್ ಕುಮಾರ್ ಪುತ್ತಿಲರು(Arun kumar puttila) ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: Bengaluru: ಸಮಯ ಮುಗಿದರೂ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಹಾಕದವರಿಗೆ ದೊಡ್ಡ ಆಘಾತ- ಹೊಸ ಆದೇಶ !!

ಹೌದು, ಕರಾವಳಿ ಭಾಗದಲ್ಲಿ ಹೊಸ ಬಿರುಗಾಳಿ ಎಬ್ಬಿಸಲು ಮುಂದಾಗಿದ್ದ ಪುತ್ತಿಲ ಪರಿವಾರದ ರೋಷದ ನಡೆ ಶಮನವಾಗುವ ಸಮಯ ಬಂದಿದ್ದು, ಜನರಲ್ಲಿ ಹೊಸ ಬರವಸೆ ಮೂಡಿಸಿದ್ದ ಪುತ್ತಿಲ ಪರಿವಾರ ಇದೀಗ ಮೋದಿ ಪರಿವಾರ(Modi parivar)ದೊಂದಿಗೆ ರಾಜಿಮಾಡಿಕೊಂಡಿದೆ. ಅಲ್ಲದೆ ಕಮಲ ಪಡೆಯೊಂದಿಗೆ ತಮ್ಮ ಪರಿವಾರವನ್ನು ವಿಲೀನಗೊಳಿಸಿ ತಾವೂ ಬಿಜೆಪಿ(BJP) ಸೇರಲು ಮುಂದಾಗಿದ್ದಾರೆ. ದೊರೆತ ಮಾಹಿತಿಯಂತೆ ಇದೀಗ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗಿದ್ದು, ಅರುಣ್ ಕುಮಾರ್ ಪುತ್ತಿಲರು ಹಾಗೂ ಕೆಲ ಬೆಂಬಲಿಗರು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

ಅಂದಹಾಗೆ ಇಂದು(ಮಾರ್ಚ್, 14) ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಮಾತುಕತೆ ಬಳೆಕ  ಅಧ್ಯಕ್ಷ ವಿಜಯೇಂದ್ರ ಅವರೊಂದಿಗೆ ನಡೆದ ಮಾತುಕತೆ ನಡೆಸಿ, ಪುತ್ತಿಲರು ಬಿಜೆಪಿ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ. ಬಳಿಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಪ್ರತ್ಯೇಕ ಪರಿವಾರ, ಪ್ರತ್ಯೇಕ ತಂಡ, ಪ್ರತ್ಯೇಕ ಸ್ಪರ್ಧೆಯ ಮೂಲಕ ಕರಾವಳಿಲ್ಲಿ ಭಾರೀ ಭರವಸೆ ಮೂಡಿಸಿ, ಹೊಸ ಅಧ್ಯಾಯ ಬರೆಯಲು ಮುಂದಾಗಿದ್ದ ಪುತ್ತಿಲ ಪರಿವಾರವು ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ. ಬ್ರಿಜೇಶ್ ಚೌಟ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ ತಮ್ಮ ವಿರೋಧವನ್ನು ಶಮನ ಮಾಡಿಕೊಂಡಿದ್ದಾರೆ . ಇದರ ಬೆನ್ನಲ್ಲೇ ಅಂದರೆ ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಪುತ್ತೂರು ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ಅವರು ಅರುಣ್ ಕುಮಾ‌ರ್ ಪುತ್ತಿಲ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಚಲ ಸೃಷ್ಟಿಸಿದದ್ದ ಅರುಣ್ ಕುಮಾರ್ ಪುತ್ತಿಲ !!

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಮಾಡಿದ್ದರು. ಈ ಮೂಲಕ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಅರುಣ್ ಕುಮಾರ್ ಸದ್ದು ಮಾಡಿದ್ದರು. ಅಲ್ಲದೆ ಪುತ್ತಿಲ ಸ್ಪರ್ಧೆಯಿಂದ ಭದ್ರಕೋಟೆಯಲ್ಲಿಯೇ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಚುನಾವಣೆ ಬಳಿಕ ರಚನೆಗೊಂಡ ‘ಪುತ್ತಿಲ ಪರಿವಾರ’ ಇಡೀ ಕರಾವಳಿಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಏನೋ ಒಂದು ಭರವಸೆಯ ಹೊಸ ಬೆಳಕನ್ನು ಮೂಡಿಸಿತ್ತು. ಬಳಿಕ ಲೋಕಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡ್ತಾರೆ ಎಂದು ಪುತ್ತಿಲ ಪರಿವಾರ ಘೋಷಣೆ ಮಾಡಿತ್ತು. ಅನೇಕ ಸಭೆಗಳೂ ನಡೆದಿದ್ದವು. ಆದರೀಗ ಪುತ್ತಿಲರು ಮತ್ತೆ ಘರ್ ವಾಪ್ಸಿಯಾಗಿದ್ದಾರೆ.

You may also like

Leave a Comment