Home » Bengaluru: ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Bengaluru: ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

1 comment
Bengaluru

Bengaluru: ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಇಂದು ನಡೆದಿದೆ. ತಾಯಿ ಸುಕನ್ಯಾ (48), ಮಕ್ಕಳಾದ ನಿಖಿತ್‌, ನಿಶಿತ್‌ (28) ಮೃತರು.

ಇದನ್ನೂ ಓದಿ: Karnataka High Court: ಅಪಾಯಕಾರಿ ಶ್ವಾನ ತಳಿಗಳನ್ನು ನಿಷೇದಿಸಿದ್ದ ಕೇಂದ್ರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ

ಈ ಘಟನೆ ಜೆಪಿ ನಗರದಲ್ಲಿ ಮೂರನೇ ಹಂತದಲ್ಲಿ ನಡೆದಿದೆ. ಈ ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Puttur: ಮದುವೆ ನಿರಾಕರಣೆ ಮಾಡಿದಳೆಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಫೋಟೋ ವೈರಲ್‌ ಮಾಡಿದ ಯುವಕ; ಪ್ರಕರಣ ದಾಖಲು

ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಈ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. ನಿನ್ನೆ ಸಂಜೆ ಬ್ಯಾಂಕ್‌ ಸಿಬ್ಬಂದಿಗಳು ಮನೆಗೆ ಆಗಮಿಸಿ ಸಾಲದ ಹಣ ವಾಪಾಸು ಕೇಳಿದ್ದರು. ಇವರು ಬರುವಾಗ ಗಂಡ ಮನೆಯಲ್ಲಿ ಇರಲಿಲ್ಲ.

ಬ್ಯಾಂಕ್‌ ಸಿಬ್ಬಂದಿಗಳ ಟಾರ್ಚರ್‌ಗೆ, ಮರ್ಯಾದೆಗೆ ಅಂಜಿ ಸುಕನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

You may also like

Leave a Comment