Home » Muniratna: ‘ಸ್ವರ್ಗ ಬೇಕು ಅಂದ್ರೆ ಡಾ.ಮಂಜುನಾಥ್‌ಗೆ ಮತ ನೀಡಿ, ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಶಿ, ಮೇನಕೆ ನೋಡಬಹುದು’-ಶಾಸಕ ಮುನಿರತ್ನ ಹೊಸ ವರಸೆ !

Muniratna: ‘ಸ್ವರ್ಗ ಬೇಕು ಅಂದ್ರೆ ಡಾ.ಮಂಜುನಾಥ್‌ಗೆ ಮತ ನೀಡಿ, ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಶಿ, ಮೇನಕೆ ನೋಡಬಹುದು’-ಶಾಸಕ ಮುನಿರತ್ನ ಹೊಸ ವರಸೆ !

by ಹೊಸಕನ್ನಡ
1 comment
Muniratna

Muniratna:  ನೀವು ಸ್ವರ್ಗಕ್ಕೆ ಹೋಗಬೇಕು ಅಂತ ಆಸೆ ಇದ್ರೆ ಡಾ.ಮಂಜುನಾಥ್‌ಗೆ (Dr Manjunath) ನಿಮ್ಮ ಮತ ನೀಡಿ ಎಂದು ಶಾಸಕ ಮುನಿರತ್ನ(Munirathna) ಹೇಳಿದ್ದಾರೆ. ”ನೀವು ಒಂದು ತಪ್ಪು ಮತ ಹಾಕಿದ್ರೂ ನಿಮಗೆ ಯಮ ಕಾಣಿಸ್ತಾನೆ. ನರಕದಲ್ಲಿ ಯಮ ನಿಮ್ಮನ್ನು ಬಿಸಿ ಎಣ್ಣೆಗೆ ಅದ್ದುತ್ತಾನೆ ಎಂದು ಕನಕಪುರದಲ್ಲಿ (Kanakapura) ಕನಕಪುರದ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಭೆಯಲ್ಲಿ ಮಾತನಾಡುವಾಗ ಅವರು ಹೇಳಿದ್ದಾರೆ.

”ಡಾ.ಮಂಜುನಾಥ್ ಬಂದಿರೋದು ಸ್ವಾರ್ಥಕ್ಕಲ್ಲ, ಬದಲಿಗೆ ಜನಸೇವೆಗೆ. ರಾಜಕಾರಣಕ್ಕೆ ಬಂದರೆ ಜನಸೇವೆ ಮಾಡಬೇಕು. ಬೇರೆಯವರಿಗೆ ಮತ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗತ್ತೆ. ಈಗ ಡಾ.ಮಂಜುನಾಥ್ ಅವರ ಸೇವೆ 140 ಕೋಟಿ ಜನತೆಗೆ ಬೇಕು. ಇದೊಂದನ್ನು ಬರೆದಿಟ್ಟುಕೊಳ್ಳಿ. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯವೋ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗೋದು ಅಷ್ಟೇ ಸತ್ಯ. ಡಾ.ಮಂಜುನಾಥ್ ಅವರು ಮೋದಿ ಸಂಪುಟದಲ್ಲಿ ಸಚಿವರಾಗೋದು ಕೂಡಾ ಅಷ್ಟೇ ಸತ್ಯ” ಶಾಸಕ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ”ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಶಿ, ಮೇನಕೆ ನೋಡಬಹುದು. ನರಕಕ್ಕೆ ಯಾಕೆ ಹೋಗುತ್ತೀರಾ. ನಾನೇ ಕಠಾರಿವೀರ ಅನ್ನೋ ಒಂದು ಸಿನಿಮಾ ಮಾಡಿದ್ದೇನೆ. ಅದರಲ್ಲಿರುವ ಸ್ವರ್ಗ, ನರಕ ಹೇಗಿರುತ್ತೆ ಅಂತ ನೋಡಿ. ಈ ಚುನಾವಣೆ ರಾಮ ಮತ್ತು ರಾವಣರ ಯುದ್ಧ. ನಿಮಗೆ ಯಾರು ಬೇಕು? ರಾಮಬೇಕಾ? ರಾವಣ ಬೇಕಾ? ನಾವು ಈ ರಾಮನನ್ನು ಪಾರ್ಲಿಮೆಂಟ್‌ಗೆ ಕಳುಹಿಸಬೇಕು. ಬಿಜೆಪಿ ಹೃದಯದಲ್ಲಿ ಜೆಡಿಎಸ್ ಇದೆ. ಮತ ಹಾಕುವಾಗ ಜೆಡಿಎಸ್ ಇಲ್ಲ ಎಂದು ಗೊಂದಲಕ್ಕೀಡಾಗಬೇಡಿ. ಹೃದಯ ತಜ್ಞ ಡಾ. ಮಂಜುನಾಥ್ ಹೃದಯದಲ್ಲಿ ಜೆಡಿಎಸ್ ಇದೆ. ಹಾಗಾಗಿ ಬಿಜೆಪಿ ಚಿಹ್ನೆಗೆ ಮತ ಹಾಕಿ ಎಂದರು.

You may also like

Leave a Comment