Home » Bengaluru: ಬೆಂಗಳೂರು ಕೆಫೆ ಸ್ಪೋಟ ಪ್ರಕರಣ :‌ ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

Bengaluru: ಬೆಂಗಳೂರು ಕೆಫೆ ಸ್ಪೋಟ ಪ್ರಕರಣ :‌ ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ ಘೋಷಿಸಿದ ಎನ್ಐಎ

2 comments

Bengaluru: ಬೆಂಗಳೂರು ಕೆಫೆ ಸ್ಫೋಟ ಪ್ರಕರಣದ ಇಬ್ಬರು ಶಂಕಿತರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.

ಇದನ್ನೂ ಓದಿ: S L Bhairappa : ರಾಜ್ಯದಲ್ಲಿ ‘ಕಮಲ ಹೆಚ್ಟು ಅರಳಲ್ಲ’- ಲೋಕಸಭಾ ಫಲಿತಾಂಶದ ಬಗ್ಗೆ ಸಾಹಿತಿ ಎಸ್ ಎಲ್ ಭೈರಪ್ಪ ಅಚ್ಚರಿ ಭವಿಷ್ಯ !!

ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಅಳವಡಿಸಿದ ಶಂಕಿತ ಮುಸಾವಿ‌ರ್ ಹುಸೇನ್ ಶಾಜಿಬ್ ಮತ್ತು ಪ್ರಕರಣದಲ್ಲಿ ಸಂಚು ರೂಪಿಸಿದ್ದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಅವರ ಮಾಹಿತಿಗಾಗಿ ಎನ್‌ಐಎ ಬಹುಮಾನ ಘೋಷಿಸಿದೆ. ಇವರಿಬ್ಬರೂ ಈಗಾಗಲೇ 2020ರ ಭಯೋತ್ಪಾದನೆ ಪ್ರಕರಣದಲ್ಲಿ ಬೇಕಾಗಿದ್ದಾರೆ ಎಂದು ಎನ್ಐಎ ತಿಳಿಸಿದೆ.

ಇಬ್ಬರು ಶಂಕಿತರ ಬಗ್ಗೆ ಮಾಹಿತಿಯನ್ನು ಹೊಂದಿರುವ info.blr.nia@gov.in ಅಥವಾ ಕರೆ ಮೂಲಕ ಏಜೆನ್ಸಿಯನ್ನು ಸಂಪರ್ಕಿಸಬಹುದು ಎಂದು ಎನ್ಐಎ ಹೇಳಿದೆ. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: Forest and Revenue Joint Survey: ಅರಣ್ಯ ಸುತ್ತ-ಮುತ್ತ ಕೃಷಿ ಮಾಡೋ ರೈತರಿಗೆ ಭೂಮಿ ಮಂಜೂರು ; ಸದ್ಯದಲ್ಲೇ ಈ ಜಿಲ್ಲೆಗಳ ರೈತರಿಗೆ ಹಕ್ಕು ಪತ್ರ ವಿತರಣೆ !!

ಎನ್‌ಐಎ ತಂಡವು ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ, ಮಾರ್ಚ್ 28 ರಂದು ಪ್ರಕರಣದ ಸಹ ಸಂಚುಕೋರರಲ್ಲಿ ಒಬ್ಬರಾದ ಮುಝಮ್ಮಿಲ್ ಶರೀಫ್ ಅವರನ್ನು ಬಂಧಿಸಿತ್ತು.

ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗೆ ಶರೀಫ್ ಬೆಂಬಲವನ್ನು ನೀಡಿದ್ದಾನೆ ಎಂದು ಎನ್‌ಐಎ ಹೇಳಿದೆ.

You may also like

Leave a Comment