Home » K S Eshwarappa: ಅಖಿಲೇಶ್ ಯಾದವ್ ರಿಂದ ಬಂತು ಕರೆ, BSP ಸೇರ್ಪಡೆ ಆಗ್ತಾರಾ ಈಶ್ವರಪ್ಪ ?!

K S Eshwarappa: ಅಖಿಲೇಶ್ ಯಾದವ್ ರಿಂದ ಬಂತು ಕರೆ, BSP ಸೇರ್ಪಡೆ ಆಗ್ತಾರಾ ಈಶ್ವರಪ್ಪ ?!

1 comment
K S Eshwarappa

K S Eshwarappa: ಬಿಜೆಪಿಯ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದಿರುವ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಿಂದ ಪಕ್ಷೇತರವಾಗಿ ಸ್ಪರ್ಧಿಸೋದು ಫಿಕ್ಸ್ ಆಗಿದೆ. ಬ್ರಹ್ಮ ಬಂದರೂ ನಿರ್ಧಾರ ಬದಲಿಸಲ್ಲ ಎಂದಿದ್ದಾರೆ. ರಾಜಕೀಯ ವಲಯದಲ್ಲೂ ಈಶ್ವರಪ್ಪ(K S Eshwarappa) ಸ್ಪರ್ಧೆ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಅವರನ್ನು ಮೋದಿ ಮತ್ತು ಶಾ ಅವರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೇ? ಎಂಬ ವಿಚಾರ ಮುನ್ನಲೆಗೆ ಬಂದಿದೆ. ಈ ಬೆನ್ನಲ್ಲೇ ಈಶ್ವರಪ್ಪರಿಗೆ ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಅವರಿಂದ ಕರೆ ಕೂಡ ಬಂದಿದೆ.

ಹೌದು, ಸಮಾಜವಾದಿ ಪಕ್ಷದ(BSP) ಅಖಿಲೇಶ್ ಯಾದವ್(Akhilesh Yadav) ದೂರವಾಣಿ ಕರೆ ಮಾಡಿದ್ದರು ಎಂದು ಸ್ವತಃ ಈಶ್ವರಪ್ಪನವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಫೋನ್ ಬಂದಾಗ ನಾನು ನಾನು ಸ್ವೀಕರಿಸಲಿಲ್ಲ. ‘ಕಾಲ್ ಮೀ ಅರ್ಜೆಂಟ್’ ಅಂತಾ ಮೆಸೇಜ್ ಮಾಡಿದ್ದರು. ನಾನು ಪ್ರತಿಕ್ರಿಯೆ ಕೊಡಲಿಲ್ಲ. ಬಹುಶಃ ಅವರ ಪಕ್ಷದಿಂದ ಟಿಕೆಟ್​ಗಾಗಿ ಕರೆ ಮಾಡಿರಬಹುದು ಎಂದರು.

ಬಳಿಕ ಮಾತನಾಡಿದ ಅವರು ಎಂದಿಗೂ ನಾನು ಪಕ್ಷ ಬಿಡುವುದಿಲ್ಲ, ಹಿಂದುತ್ವ ನನ್ನ ತಾಯಿ ಅಂದುಕೊಂಡಿರುವವನು ನಾನು. ಹಿಂದುತ್ವಕ್ಕೆ ಮೋಸ ಮಾಡಲ್ಲ ಎಂದು ಈಶ್ವರಪ್ಪ ಹೇಳಿದರು. ಟಿಕೆಟ್ ಕೊಡಲು ಅಖಿಲೇಶ್ ಯಾದವ್ ಪೋನ್ ಮಾಡಿದರೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಮತ್ತೆ ಏನು ಹೆಣ್ಣು ಕೊಟ್ಟು ಮದುವೆ ಮಾಡಲು ಮಾಡಿದರಾ ಎಂದು ನಗಾಡಿದರು.

ಇದನ್ನೂ ಓದಿ: Dakshina Kannada (Kadaba): ಗೋ ಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು!! ರಾಜ್ಯ ಹೆದ್ದಾರಿ ತಡೆದು ಆಕ್ರೋಶ, ಮಧ್ಯರಾತ್ರಿ ಸ್ಥಳಕ್ಕಾಗಮಿಸಿದ ಶಾಸಕರುಗಳ ಸಹಿತ ಎಸ್ಪಿ

You may also like

Leave a Comment