Home » Kadaba: ಎದೆಹಾಲು ಉಣಿಸುವಾಗ ಮಗು ಆಕಸ್ಮಿಕ ಸಾವು; ಖಿನ್ನತೆಗೆ ಜಾರಿದ ತಾಯಿ ಆತ್ಮಹತ್ಯೆ

Kadaba: ಎದೆಹಾಲು ಉಣಿಸುವಾಗ ಮಗು ಆಕಸ್ಮಿಕ ಸಾವು; ಖಿನ್ನತೆಗೆ ಜಾರಿದ ತಾಯಿ ಆತ್ಮಹತ್ಯೆ

1 comment

Kadaba: ಎದೆಹಾಲು ಉಣಿಸುವಾಗ ಆಕಸ್ಮಿಕವಾಗಿ ಮೂರು ತಿಂಗಳ ಕಂದಮ್ಮ ಸಾವನ್ನಪ್ಪಿದ್ದ ಘಟನೆಯಿಂದ ಮಾನಸಿಕವಾಗಿ ನೊಂದ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕಡಬ ಠಾಣಾ ವ್ಯಾಪ್ತಿಯ ರಾಮಕುಂಜದಲ್ಲಿ ನಡೆದಿದೆ.

ರಾಮಕುಂಜ ಗ್ರಾಮದ ಶ್ರೀಮತಿ ವನಿತಾ (38) ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡವರು.

ಇದನ್ನೂ ಓದಿ: Ajmeer: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಶಾಲಾ ವಿದ್ಯಾರ್ಥಿನಿಗೆ ಬೋರ್ಡ್‌ ಪರೀಕ್ಷೆ ಬರೆಯಲು ನಿರಾಕರಿಸಿದ ಶಾಲೆ

ಮೂರು ವರ್ಷದ ಗಂಡು ಮಗುವಿದ್ದು, ಮೂರು ತಿಂಗಳ ಹಿಂದೆ ಎರಡನೇ ಹೆಣ್ಣು ಮಗುವಿನ ತಾಯಿಯಾಗಿದ್ದ ಇವರು, ಎದೆಹಾಲು ಉಣಿಸುವ ಸಮಯದಲ್ಲಿ ಮಗು ಮೃತ ಪಟ್ಟಿತ್ತು.  ಇದರಿಂದ ಮಾನಸಿಕವಾಗಿ ನೊಂದಿದ್ದ ಇವರು ಖಿನ್ನತೆಗೊಳಗಾಗಿದ್ದರು. ಚಿಕಿತ್ಸೆ ನೀಡುವ ಸಲುವಾಗಿ ಇವರ ಪತಿ ಇವರನ್ನು ತಾಯಿ ಮನೆ ರಾಮಕುಂಜದಲ್ಲಿ ಬಿಟ್ಟು ಹೋಗಿದ್ದರು.

ಆದರೆ ಎ.2 ರಂದು ಇವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಮೃತರ ತಮ್ಮ ದಿವಾಕರ ಕೆ ಎಂಬುವವರು ನೀಡಿದ ದೂರಿನಂತೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: MP ಎಲೆಕ್ಷನ್ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ನಡೆಯಲಿದೆ ವಿಧಾನಸಭಾ ಚುನಾವಣೆ ?!! ಯಾಕಾಗಿ ?

You may also like

Leave a Comment