Home » Ram Gopal Varma:  ಮಲಯಾಳಂ ನಟಿಯ ಅಂದಕ್ಕೆ ಮಾರಿಹೋದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ : ಅಸಲಿಗೆ ಯಾರು ಈ ಮೋಹಕ ಸುಂದರಿ?

Ram Gopal Varma:  ಮಲಯಾಳಂ ನಟಿಯ ಅಂದಕ್ಕೆ ಮಾರಿಹೋದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ : ಅಸಲಿಗೆ ಯಾರು ಈ ಮೋಹಕ ಸುಂದರಿ?

0 comments

Ram Gopal Varma:   ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ ಖ್ಯಾತ ತೆಲುಗು ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟ್ವಿಟ್ ಮತ್ತು ಪೋಸ್ಟ್‌ಗಳಿಂದ ವೈರಲ್‌ ಆಗಿದ್ದು, ಇತ್ತೀಚೆಗೆ ಹುಡುಗಿಯೊಬ್ಬಳ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಹುಡುಗಿ ಯಾರು ಗೊತ್ತಾ? ಗೊತ್ತಿದ್ದರೆ ಹೇಳಿ ಎಂದು ಪೋಸ್ಟ್ ಮಾಡಿದ್ದಾರೆ.

ಹುಡುಗಿ ಸಿಕ್ಕಿದ್ದಾಳೆ ಎಂದು ರಾಮ್ ಗೋಪಾಲ್ ವರ್ಮ ಅವರು  ಆಕೆಯ ಸಾಮಾಜಿಕ ಜಾಲತಾಣ ಖಾತೆಯ ವಿವರಗಳನ್ನು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಈಕೆ ಸೀರೆ ಧರಿಸಿ ರೀಲ್‌ಗಳಲ್ಲಿ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾಳೆ.

ರಾಮ್ ಗೋಪಾಲ್ ವರ್ಮ ಅವರು ಈ ಪೋಸ್ಟ್ ಮಾಡುತ್ತಿದ್ದಂತೆಯೇ, ಆ ಹುಡುಗಿ ಒಮ್ಮೆಲೇ ವೈರಲ್ ಆಗಿದ್ದಾಳೆ. ಹಾಗಾದರೆ ಆ ಹುಡುಗಿ ಯಾರು? ಎಂದು ಅನೇಕರು ಪ್ರಶ್ನೆ ಕೇಳಿದ್ದಾರೆ.

ಅಸಲಿಗೆ ಈಕೆಯ ಹೆಸರು ಶ್ರೀಲಕ್ಷ್ಮಿ ಸತೀಶ್‌ ಮಲಯಾಳಂ ನಟಿಯಾಗಿದ್ದು,  ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ರೀಲ್ಗಳನ್ನು ಪೋಸ್ಟ್ ಮಾಡುವ ಮೂಲಕ ಈಕೆ ಎಲ್ಲೆಡೆ ವೈರಲ್ ಆಗಿದ್ದಾಳೆ.

ರಾಮ್ ಗೋಪಾಲ್ ವರ್ಮಾ ಅವರ ವೀಡಿಯೊಗಳ ಪೋಸ್ಟ್ ವೈರಲ್ ಆಗಿದ್ದು , ಈ ವೈರಲ್ ಪೋಸ್ಟ್ ನಟಿಯನ್ನು ತಲುಪಿದೆ ಹಾಗೆಯೇ ಮಲಯಾಳಂ ನ್ಯೂಸ್‌ನಲ್ಲಿಯೂ ಈ ಸುದ್ದಿ ಹೊರಬೀಳುತ್ತಿದ್ದಂತೆ ಆರ್‌ಜಿವಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ ವಿಡಿಯೋವನ್ನು ಶ್ರೀಲಕ್ಷ್ಮಿ ಕೂಡ ಹಂಚಿಕೊಂಡಿದ್ದಾರೆ.

You may also like

Leave a Comment