Home » Condom in Samosa: ಸಮೋಸಾದಲ್ಲಿ ಆಲೂಗಡ್ಡೆ ಬದಲು ಕಾಂಡೋಮ್, ತಂಬಾಕು, ಗುಟ್ಕಾ, ಕಲ್ಲುಗಳು ಪತ್ತೆ; ಕೇಸು ದಾಖಲು

Condom in Samosa: ಸಮೋಸಾದಲ್ಲಿ ಆಲೂಗಡ್ಡೆ ಬದಲು ಕಾಂಡೋಮ್, ತಂಬಾಕು, ಗುಟ್ಕಾ, ಕಲ್ಲುಗಳು ಪತ್ತೆ; ಕೇಸು ದಾಖಲು

by Mallika
0 comments
Condom in Samosa

Condom in Samosa: ಪುಣೆಯ ಆಟೊ ಸಂಸ್ಥೆಗೆ ಸರಬರಾಜಾಗಿದ್ದ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ, ಕಲ್ಲು ಸೇರಿದಂತೆ ವಿವಿಧ ಪದಾರ್ಥಗಳು ಪತ್ತೆಯಾಗಿದ್ದು, ಈ ಕುರಿತು ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಪ್ರಮುಖ ಆಟೋಮೊಬೈಲ್ ಕಂಪನಿಗೆ ಸರಬರಾಜು ಮಾಡಿದ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾಗಿದ್ದು, ಕೇಸು ದಾಖಲಾದ ನಂತರ, ಇದೀಗ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಬುಕ್ ಮಾಡಲಾದ ಸಮೋಸಾಗಳನ್ನು ಸರಬರಾಜು ಮಾಡಿದ ಉಪಗುತ್ತಿಗೆ ಸಂಸ್ಥೆಯ ಇಬ್ಬರು ಉದ್ಯೋಗಿಗಳು ಮತ್ತು ಮತ್ತೊಂದು ಕಂಪನಿಯ ಮೂವರು ಪಾಲುದಾರರು ಇದರಲ್ಲಿ ಸೇರಿದ್ದಾಗಿ ವರದಿಯಗಿದೆ.

ಆಟೊಮೊಬೈಲ್ ಸಂಸ್ಥೆಯ ಕ್ಯಾಂಟೀನ್‌ನಲ್ಲಿ ಆಹಾರ ಪದಾರ್ಥಗಳನ್ನು ಒದಗಿಸುವ ಜವಾಬ್ದಾರಿಯನ್ನು ಕ್ಯಾಟಲಿಸ್ಟ್ ಸರ್ವೀಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ವಹಿಸಿಕೊಂಡಿದೆ. ಮನೋಹರ್ ಎಂಟರ್‌ಪ್ರೈಸಸ್ ಎಂಬ ಮತ್ತೊಂದು ಉಪಗುತ್ತಿಗೆದಾರ ಸಂಸ್ಥೆಗೆ ಸಮೋಸಾ ನೀಡುವ ಗುತ್ತಿಗೆಯನ್ನು ಸಂಸ್ಥೆ ನೀಡಿದೆ ಎಂದು ಅವರು ಶನಿವಾರ ಹೇಳಿದರು.

ಘಟನೆಯ ಕುರಿತು ಮನೋಹರ್ ಎಂಟರ್‌ಪ್ರೈಸಸ್‌ನ ನೌಕರರನ್ನು ವಿಚಾರಣೆಗೆ ಒಳಪಡಿಸಿದಾಗ, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂಬ ಇಬ್ಬರು ಉದ್ಯೋಗಿಗಳು ಸಮೋಸಾಗಳಲ್ಲಿ ಕಾಂಡೋಮ್, ಗುಟ್ಖಾ ಮತ್ತು ಕಲ್ಲುಗಳನ್ನು ತುಂಬಿದ್ದರು ಎಂದು ತಿಳಿದುಬಂದಿದೆ ಎಂದು ಚಿಖ್ಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಇವರ ಮೇಲೆ ಐಪಿಸಿ ಸೆಕ್ಷನ್ 328 (ವಿಷದ ಮೂಲಕ ನೋವುಂಟುಮಾಡುವುದು) ಮತ್ತು 120 ಬಿ (ಅಪರಾಧದ ಪಿತೂರಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಅವರು ಹೇಳಿದರು. ಇಬ್ಬರೂ ಆರೋಪಿಗಳು ಎಸ್‌ಆರ್‌ಎ ಎಂಟರ್‌ಪ್ರೈಸಸ್‌ನ ಉದ್ಯೋಗಿಗಳಾಗಿದ್ದು, ಅದರ ಪಾಲುದಾರರಾದ ಮನೋಹರ್ ಎಂಟರ್‌ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಮಗೆ ತಿಳಿಸಿದರು.

ಇದನ್ನೂ ಓದಿ: RCB Fan: ತುರ್ತು ಎಂದು ಸುಳ್ಳು ಹೇಳಿ ಆಫೀಸ್’ಗೆ ರಜೆ ಹಾಕಿ ಮ್ಯಾಚ್ ನೋಡುವಾಗ ಟಿವಿಯಲ್ಲಿ ಬಾಸ್’ಗೆ ಸಿಕ್ಕಿಬಿದ್ದ RCB ಅಭಿಮಾನಿ !!

You may also like

Leave a Comment