Home » K S Eshwarappa: ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು, ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ – ಕೆ ಎಸ್ ಈಶ್ವರಪ್ಪ !!

K S Eshwarappa: ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು, ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ – ಕೆ ಎಸ್ ಈಶ್ವರಪ್ಪ !!

0 comments
K S Eshwarappa

K S Eshwarappa: ಯಡಿಯೂರಪ್ಪನವರ ಕುಟುಂಬ ರಾಜಕಾರಣದ ವಿರುದ್ಧ ತೊಡೆ ತಟ್ಟಿರುವ ಕೆ ಎಸ್ ಈಶ್ವರಪ್ಪನವರು(K S Eshwarappa)ಶಿವಮೊಗ್ಗದಿಂದ ಬಂಡಾಯ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದಾರೆ. ಆದರೀಗ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತನಾಡಿದ್ದಾರೆ. ಆದರೆ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ(BJP State president) ಸ್ಥಾನದಿಂದ ಕೆಳಗಿಳಿದರೆ ಮಾತ್ರ ಎಂದು ಹೇಳಿದ್ದಾರೆ.

ಇದನ್ನೂ ಓದಿ: Liquor Ban: ಎಣ್ಣೆ ಪ್ರಿಯರೇ ಗಮನಿಸಿ; ಎರಡು ದಿನ ಮದ್ಯದಂಗಡಿ ಬಂದ್‌

ಹೌದು, ಇತ್ತೀಚೆಗೆ ಬಿ ವೈ ವಿಜಯೇಂದ್ರ(B Y vijayendra)ಅವರು ಈಶ್ವರಪ್ಪನವರಿಗೆ ದಯವಿಟ್ಟು ನಿಮಗೆ ಕೈ ಮುಗಿಯುತ್ತೇನೆ, ಬೇಜಾರಿಗಿದ್ದರೆ ಕ್ಷಮಿಸಿ, ನಿಮ್ಮ ನಿರ್ಧಾರ ಬದಲಿಸಿ ಎಂದು ಹೇಳಿದ್ದರು. ಇದಕ್ಕೆ ಖಡಕ್ ಆಗಿ ಉತ್ತರಿಸಿರುವ ಈಶ್ವರಪ್ಪನವರು ‘ಸ್ಪರ್ಧೆಗಿಳಿಯದಂತೆ ನಿಮ್ಮಣ್ಣ ರಾಘವೇಂದ್ರಗೆ ಹೇಳು. ನೀನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು. ಆಗ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆಂದು’ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Karnataka Second PUC Result: ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಪ್ರಕಟ; ಯಾವ ಜಿಲ್ಲೆಗೆ ಎಷ್ಟು? 32 ಜಿಲ್ಲೆಗಳ ಪರ್ಸಂಟೇಜ್‌ ವಿವರ ಇಲ್ಲಿದೆ

ಅಲ್ಲದೆ ಕೇಂದ್ರದ ನಾಯಕರು ಈಶ್ವರಪ್ಪನವರ ಜೊತೆ ಮಾತಾಡುತ್ತಾರೆ ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವನು ಯಾರು? ಎಲ್ಲಾ ಅಧಿಕಾರ ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿ ಇರಬೇಕಾ? ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀನು ಬಿಟ್ಟು‌ಕೊಡು. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡ. ಎಲ್ಲರ ನೋವು ಪರಿಹಾರ ಆಗುತ್ತದೆ ಎಂದು ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

ಮುಂದುವರೆದು ಮಾತನಾಡಿದ ಅವರು ನಾನು ಈಗಲೂ ಬಿಜೆಪಿ ಕಾರ್ಯಕರ್ತನೇ. ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದೇನೆ. ನಾನು ಸ್ಪರ್ಧಿಸಿದರೆ ಬಿಜೆಪಿ ಏನು ಮಾಡಲು ಸಾಧ್ಯ? ಪಕ್ಷದಿಂದ ಹೊರಹಾಕಬಹುದು ಅಲ್ಲವೇ? ಅದಷ್ಟನ್ನೇ ನೀವು ಮಾಡಲು ಸಾಧ್ಯ. ಆದರೆ, ಈ ಬಾರಿ ನಾನು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ. ನನ್ನನ್ನು ಪಕ್ಷದಿಂದ ಹೊರಹಾಕಿದರೆ, ಗೆಲುವು ಬಳಿಕ ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆಂದು ಹೇಳಿದರು.

You may also like

Leave a Comment