Home » Crime News: ಅತ್ತೆ ಮಾವನ ಮೇಲಿನ ಕೋಪಕ್ಕೆ ಕೊಡಲಿ ಎತ್ತಿಕೊಂಡು ಹೊರಟ ಸೊಸೆ, ಅಡಿಕೆ ಮರಗಳೆಲ್ಲ ಕಟ್ ಕಟ್ !

Crime News: ಅತ್ತೆ ಮಾವನ ಮೇಲಿನ ಕೋಪಕ್ಕೆ ಕೊಡಲಿ ಎತ್ತಿಕೊಂಡು ಹೊರಟ ಸೊಸೆ, ಅಡಿಕೆ ಮರಗಳೆಲ್ಲ ಕಟ್ ಕಟ್ !

1 comment
Crime News

Crime News: ಇತ್ತೀಚಿಗಿನ ಕಾಲದಲ್ಲಿ ಜನರು ಸಿಟ್ಟು ಬಂದರೆ ಯಾವ ಯಾವ ರೀತಿ ರಿಯಾಕ್ಟ್ ಮಾಡುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಚಿತ್ರ ವಿಚಿತ್ರ ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುತ್ತಾ ಇರುತ್ತವೆ. ಅಂತದ್ದೇ ಒಂದು ವಿಚಿತ್ರ ಘಟನೆ ಇಲ್ಲೊಂದು ಕಡೆ ನಡೆದಿದ್ದು ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ಸೊಸೆಯು ತನ್ನ ಅತ್ತೆ ಮಾವನ ಮೇಲಿನ ಕೋಪಕ್ಕೆ ವರ್ಷಗಟ್ಟಲೆ ಕಷ್ಟ ಪಟ್ಟು ನೆಟ್ಟಿದ್ದ ಅಡಿಕೆ ಮರ, ಸಸಿಯನ್ನೆಲ್ಲ ಕಡಿದು ಹಾಕಿದ್ದಾಳೆ.

ಇದನ್ನೂ ಓದಿ: Banana: ಬೇಸಿಗೆಯಲ್ಲಿ ಬಾಳೆಹಣ್ಣು ತಿಂದರೆ ಏನಾಗುತ್ತೆ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ರೂಪಾ ಕುಮಾರಸ್ವಾಮಿ ಅಡಿಕೆ ಮರಗಳನ್ನು ಕಡಿದು ಹಾಕಿದ ಆರೋಪಿತ ಸೊಸೆ. ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಗೆ ಮೂವರು ಪುತ್ರರಿದ್ದಾರೆ. ಹಿರಿಯ ಪುತ್ರ ಕುಮಾರಸ್ವಾಮಿಗೆ ರೂಪಾಳೊಂದಿಗೆ ಮದುವೆ ಮಾಡಿಸಲಾಗಿತ್ತು. ಆದರೆ ಮದುವೆಯಾದ ಬಳಿಕ ರೂಪಾ, ಹಲವಾರು ಬಾರಿ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಳು. ಅಲ್ಲದೇ ಮಾವ ಚಿದಾನಂದಸ್ವಾಮಿ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕೂಡ ಕಟ್ಟಿಸಿಕೊಂಡಿದ್ದಳು. ಸದ್ಯ ಈಕೆ ಮೂರು ವರ್ಷದ 40 ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕುವ ಮೂಲಕ ಸಿಟ್ಟು ಹೊರಹಾಕಿದ್ದಾಳೆ.

ಇದನ್ನೂ ಓದಿ: Sri Rama Navami: ಶ್ರೀರಾಮ ನವಮಿ ದಿನದಂದು ಈ ಕೆಲಸಗಳನ್ನು ಮಾಡಿ, ಜೀವನ ಬಂಗಾರವಾಗುತ್ತೆ!

You may also like

Leave a Comment