Home » Urfi Javed: ಉರ್ಫಿ ಹಾಲಿನಂತ ತ್ವಚೆ ಹೊಂದಲು ಮನೆಯಲ್ಲಿ ತಯಾರಿಸೋ ಈ ಫೇಸ್ ಪ್ಯಾಕ್ ಕಾರಣವಂತೆ !!

Urfi Javed: ಉರ್ಫಿ ಹಾಲಿನಂತ ತ್ವಚೆ ಹೊಂದಲು ಮನೆಯಲ್ಲಿ ತಯಾರಿಸೋ ಈ ಫೇಸ್ ಪ್ಯಾಕ್ ಕಾರಣವಂತೆ !!

1 comment
Urfi Javed

Urfi Javed: ಹುಡುಗರು ಅಥವಾ ಹುಡುಗಿಯರು ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ನಾನಾ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಗಳಲ್ಲಿ ಸಿಗುವ ಅನೇಕ ಕ್ರೀಂ ಗಳನ್ನು ಹಚ್ಚಿ ಸುಂದರವಾಗಿ(Beauty tips)ಕಾಣಲು ತವಕಿಸುತ್ತಾರೆ. ಆದರೆ ಇದೆಲ್ಲದೂ ಮುಖವನ್ನು ಇನ್ನಷ್ಟು ಹಾಳು ಮಾಡುತ್ತದೆ. ಆದರೆ ಕೆಲವರು ಮನೆಯಲ್ಲಿಯೇ ಸಿಗೋ ವಸ್ತುಗಳಿಂದ ಪ್ಯಾಕ್ ತಯಾರಿಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಅಂತೆಯೇ ಬಾಲಿವುಡ್ ನಟಿ ಉರ್ಫಿ ಜಾವೇದ್(Urfi Javed) ಹಾಲಿನಂತ ತ್ವಚೆ ಹೊಂದಲು ಮನೆಯಲ್ಲ ತಯಾರಿಸೋ ಈ ಫೇಸ್ ಪ್ಯಾಕ್ ಕಾರಣವಂತೆ.

ಇದನ್ನೂ ಓದಿ: Girls Life Style: ಹುಡುಗಿಯರು ಒಬ್ಬರೇ ಇದ್ದಾಗ ಏನೇನು ಮಾಡ್ತಾರೆ ?

ಹೌದು, ಕೆಲ ಸಿನಿಮಾ ನಟಿಯರ ಸೌಂದರ್ಯ ಎಂತವರಿಗೂ ಕಣ್ಣು ಕುಕ್ಕುತ್ತದೆ. ನಾವು ಅವರಂತೆ ಇರಬೇಕು, ಆ ತ್ವಚಿ ಪಡೆಯಬೇಕು ಎಂದು ಬಯಸುತ್ತಾರೆ. ಆದರೆ ಹೆಚ್ಚಿನವರಿಗೆ ಅವರ ಸೌಂದರ್ಯದ ಗುಟ್ಟು ಗೊತ್ತಿರುವುದಿಲ್ಲ. ಕೆಲವು ಸೆಲೆಬ್ರಿಗಳು ತಮ್ಮ ತ್ವಚೆ ಹೀಖಿರಲು ಏನು ಕಾರಣ ಎಂದು ಅದನ್ನು ರಿವೀಲ್ ಮಾಡುತ್ತಾರೆ. ಅಂತೆಯೇ ಇದೀಗ ಉರ್ಫಿ ಕೂಡ ತನ್ನ ತ್ವಚೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಇದಕ್ಕೆ ಅವರು ಮನೆಯಲ್ಲೇ ಮಾಡಿಕೊಳ್ಳೋ ಫೇಸ್‌ಪ್ಯಾಕ್ ಕಾರಣವಂತೆ. ಇದನ್ನು ಹೇಗೆ ತಯಾರಿಸೋದೆಂದು ಉರ್ಫಿ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: Intresting News: ನೀವು ಗಂಟೆಗಳ ಕಾಲ ಕುಳಿತು ಕೆಲಸ ಮಾಡುತ್ತೀರಾ? : ಇದು ಧೂಮಪಾನಕ್ಕಿಂತ ಹೆಚ್ಚು ಅಪಾಯಕಾರಿ

ಅಂದಹಾಗೆ ಉರ್ಫಿ ಚರ್ಮಕ್ಕಾಗಿ ತಾವು ಬಳಸುವ DIY ಹೈಡ್ರೇಟಿಂಗ್ ಫೇಸ್ ಪ್ಯಾಕ್ ಅನ್ನು ಹಂಚಿಕೊಂಡಿದ್ದಾರೆ. ಇದನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದು ಇಲ್ಲಿದೆ.

ಇದನ್ನು ಮಾಡಲು, ಅಕ್ಕಿ ತೊಳೆದ ನೀರು, ಮುಲ್ತಾನಿ ಮಿಟ್ಟಿ, ಜೇನುತುಪ್ಪ, ನಿಂಬೆ, ಕಾಫಿ ಮತ್ತು ಟೊಮೆಟೊ ತಿರುಳು ತೆಗೆದುಕೊಳ್ಳಿ. ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ ಮತ್ತು ನಿಮ್ಮ ಮುಖದ ಮೇಲೆ ಅನ್ವಯಿಸಿ. ಈ ಫೇಸ್ ಮಾಸ್ಕನ್ನು 15-20 ನಿಮಿಷಗಳ ಕಾಲ ಇರಿಸಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಸಾಧಿಸಿ.

ಏನು ಪ್ರಯೋಜನ?

• ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ

• ಚರ್ಮವನ್ನು ಸ್ವಚ್ಛಗೊಳಿಸುತ್ತದೆ

• ಸ್ಕಿನ್ ಟೋನ್ ಸುಧಾರಿಸುತ್ತದೆ

• ಕಿರಿಕಿರಿಯನ್ನು ಶಮನಗೊಳಿಸುತ್ತದೆ

• ರಂಧ್ರಗಳನ್ನು ಬಿಗಿಗೊಳಿಸುತ್ತದೆ

You may also like

Leave a Comment