Home » PM Modi: ಮೋದಿ ರೋಡ್ ಶೋ ವೇಳೆ ಮಹಿಳೆಗೆ ನಂಬರ್ ನೀಡಿದ ಯುವಕ : ಎರಡು ಯುವ ಗುಂಪುಗಳ ನಡುವೆ ವಾಗ್ವಾದ

PM Modi: ಮೋದಿ ರೋಡ್ ಶೋ ವೇಳೆ ಮಹಿಳೆಗೆ ನಂಬರ್ ನೀಡಿದ ಯುವಕ : ಎರಡು ಯುವ ಗುಂಪುಗಳ ನಡುವೆ ವಾಗ್ವಾದ

2 comments
PM Modi

PM Modi: ಲೋಕಸಭಾ ಚುನಾವಣಾ ಹಿನ್ನೆಲೆ  ಪ್ರಧಾನಿ ಮೋದಿ ಅವರು ನೆನ್ನೆ ತಾನೆ ಕರ್ನಾಟಕಕ್ಕೆ ಆಗಮಿಸಿ, ಮೈಸೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ  ಬಳಿಕ ಮಂಗಳೂರಿನಲ್ಲಿ ನಡೆದ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಯುವಕನೋರ್ವ ಮಹಿಳೆಗೆ ನಂಬರ್ ನೀಡಿದ ಎಂಬ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ವಾಗ್ವಾದ ನಡೆದು, ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಬಂಟ್ಸ್ ಹಾಸ್ಟೆಲ್ ಸಮೀಪ ನಡೆದಿದೆ.

ಇದನ್ನೂ ಓದಿ: Dakshina Kannada: ಹಿಂದೂ ಸಂಘಟನೆ ಮುಖಂಡನ ಕುತ್ತಿಗೆಗೆ ಚಾಕು ಇರಿತ : ಸ್ನೇಹಿತನೆಂದಲೇ ದುಷ್ಕೃತ್ಯ : ಜೀವನ್ಮರಣ ಹೋರಾಟದಲ್ಲಿ ಹಿಂದೂ ಮುಖಂಡ

ಮೋದಿ ರೋಡ್ ಶೋ ಬಳಿಕ ಯುವಕನೊಬ್ಬ ಮಹಿಳೆಗೆ ನಂಬರ್ ನೀಡಿದ ವಿಚಾರವಾಗಿ ಯುವಕರ ನಡುವೆ ವಾಗ್ವಾದ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: American Style Restaurant: ಅಮೆರಿಕನ್ ಶೈಲಿಯ ರೆಸ್ಟೋರೆಂಟ್ ಇದು, ಆದರೆ ಎಲ್ಲಾ ಫುಡ್ ಗು ಬರಿ ರೂ.59 ರೂಪಾಯಿ ಅಷ್ಟೇ!

ಮೋದಿ ರೋಡ್ ಶೋ ವೇಳೆ, ಮೋದಿ ಅವರನ್ನು ನೋಡಲು ಅನೇಕ ಮಂದಿ ಮಹಿಳೆಯರು ಆಗಮಿಸಿದ್ದರು. ಈ ವೇಳೆ ಮಹಿಳೆಯೊರ್ವಳಿಗೆ ಯುವಕ ಚೀಟಿಯಲ್ಲಿ ನಂಬರ್ ನೀಡಿದ್ದು, ಈ ವಿಷಯ ತಿಳಿದ ಮಹಿಳೆಯ ಪತಿ ಹಾಗೂ ಇತರ ಯುವಕರು ಆ ಯುವಕನಿಗೆ ಮನಸ್ಸೋ ಇಚ್ಛೆ ತಳಿಸಿದ್ದಾರೆ.

ಸ್ವಲ್ಪ ಸಮಯದ ಬಳಿಕ ಅಲ್ಲಿಯೇ ಇದ್ದ ಕೆಲ ಸ್ಥಳೀಯ ಮುಖಂಡರು ಸೇರಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಒಂದು ವೇಳೆ ಇದು ವಿಕೋಪಕ್ಕೆ ತೆರಳಿದ್ದಾರೆ ಯುವಕ ತೀವ್ರ ಹಲ್ಲೆಗೊಳಗಾಗುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

You may also like

Leave a Comment