Home » Zameer Ahmed Khan : ಎರಡು ವಡೆ ಹೆಚ್ಚಿಗೆ ತಿಂದು ಎದೆ ನೋವು ತರಿಸಿಕೊಂಡ ಸಚಿವ ಜಮೀರ್ ಅಹ್ಮದ್!!

Zameer Ahmed Khan : ಎರಡು ವಡೆ ಹೆಚ್ಚಿಗೆ ತಿಂದು ಎದೆ ನೋವು ತರಿಸಿಕೊಂಡ ಸಚಿವ ಜಮೀರ್ ಅಹ್ಮದ್!!

1 comment
Zameer Ahmed Khan

Zameer Ahmed Khan: ಬೆಳಗ್ಗಿನ ತಿಂಡಿ ತಿನ್ನುವಾಗ ರುಚಿ ಇದ್ದವೆಂದು ಎರಡು ವಡೆ ಹೆಚ್ಚಿಗೆ ತಿಂದೆನು, ಇದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾಗಿ ಎದೆ ನೋವು ಕಾಣಿಸಿಕೊಂಡಿತು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ನಿನ್ನೆ ದಿನ(ಏ.15) ಚಿತ್ರದುರ್ಗಕ್ಕೆ ಚುನಾವಣೆ ಪ್ರಚಾರಕ್ಕೆಂದು (Election Campaign) ಸಚಿವ ಜಮೀರ್ ಅಹ್ಮದ್ ಖಾನ್ ಅವರು ಆಗಮಿಸಿದ್ದರು. ಈ ವೇಳೆ ಸಚಿವ ಜಮೀರ್ (Minister BZ Zameer Ahmed Khan )ಅವರಿಗೆ ಎದೆ ನೋವು (Chest Pain) ಕಾಣಿಸಿಕೊಂಡಿದೆ ಕೂಡಲೇ ಅವರನ್ನು ಚಿತ್ರದುರ್ಗ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಪಡೆದ ಕೆಲ ನಿಮಿಷಗಳಲ್ಲೇ ಜಮೀರ್ ಅವರು ಚೇತರಿಸಿಕೊಂಡು ಮತ್ತೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ತಮಗೆ ಕಾಣಿಸಿಕೊಂಡ ಎದೆನೋವು ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ನಿನ್ನೆ ಬೆಳಗ್ಗೆ ಬೆಂಗಳೂರಿನಿಂದ ತುಮಕೂರಿಗೆ ಬಂದಿದ್ದೆನು. ಆಗ ಮಾಜಿ ಶಾಸಕ ರಫೀಕ್ ಮನೆಯಲ್ಲಿ ಬೆಳಗ್ಗಿನ ತಿಂಡಿಗೆ ಆಹ್ವಾನಿಸಿದ್ದರು. ಅವರ ಮನೆಯಲ್ಲಿ ರುಚಿಯಿದ್ದವು ಎಂದು ಎರಡು ವಡೆ ಹೆಚ್ಚಿಗೆ ತಿಂದೆನು. ಹೀಗಾಗಿ ಗ್ಯಾಸ್ಟ್ರಿಕ್‌ ಆಯಿತು. ಈ ಸಮಸ್ಯೆಯಿಂದ ಎದೆ ನೋವು ಕಾಣಿಸಿಕೊಂಡಿತು ಎಂದು ತಿಳಿಸಿದ್ದಾರೆ.

ಅಲ್ಲದೆ ಆಸ್ಪತ್ರೆಗೆ ಬಂದ ತಕ್ಷಣ ನಾನು ಎಲ್ಲಾ ಚೆಕಪ್ ಮಾಡಿಸಿಕೊಂಡೆ. ರಕ್ತ ಪರೀಕ್ಷೆ ಕೂಡ ಮಾಡಿಸಿದೆ. ಎಲ್ಲದೂ ನಾರ್ಮಲ್ ಇದೆ. ವೈದ್ಯರು ಏನೂ ತೊಂದರೆ ಇಲ್ಲ ಎಂದಿದ್ದಾರೆ. ದೇವರ ದಯೆ ಏನೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಜಮೀರ್ ಆರೋಗ್ಯವಾಗಿದ್ದು ಮತ್ತೆ ಚುನಾವಣಾ ಪ್ರಚಾರಕ್ಕೆ ದುಮುಕಿದ್ದಾರೆ.

You may also like

Leave a Comment