Home » Belthangady: ಸಾಕು ನಾಯಿಯಿಂದ ಮನೆ ಮಾಲಕಿ ಮೇಲೆ ಹಠಾತ್‌ ದಾಳಿ; ತಲೆಭಾಗ ಸೀಳಿ, ಕೈಗೆ ಕಚ್ಚಿ ಗಂಭೀರ ಗಾಯ

Belthangady: ಸಾಕು ನಾಯಿಯಿಂದ ಮನೆ ಮಾಲಕಿ ಮೇಲೆ ಹಠಾತ್‌ ದಾಳಿ; ತಲೆಭಾಗ ಸೀಳಿ, ಕೈಗೆ ಕಚ್ಚಿ ಗಂಭೀರ ಗಾಯ

1 comment
Belthangady

Belthangady: ಮನೆಯ ಸಾಕುನಾಯಿಯೊಂದು ತನ್ನ ಮನೆ ಮಾಲಕಿ ಜೊತೆ ಇರುವಾಗ ಏಕಾಏಕಿ ದಾಳಿ ಮಾಡಿ ತಲೆಭಾಗವನ್ನು ಸೀಳಿ ಹಾಕಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ನಡೆದಿದೆ.

ತಲೆಭಾಗ ಸೀಳಿ ಹಾಕಿ, ಕೈಗೆ ಗಂಭೀರ ಗಾಯ ಮಾಡಿದ ಘಟನೆಯು ಎ.18 ರಂದು ಮಧ್ಯಾಹ್ನ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿರುವ ಕುರಿತು ವರದಿಯಾಗಿದೆ.

ಓಂಕಾರ್‌ ನಿವಾಸಿ ದಿ.ರಾಮ್‌ ದಾಸ್‌ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬ ಮಹಿಳೆಯೇ ಸಾಕು ನಾಯಿಯಿಂದ ದಾಳಿಗೊಳಗಾದವರು.

ತಮ್ಮ ಮನೆಯಲ್ಲಿಯೇ ಸಾಕಿದ್ದ ಸಾಕು ನಾಯಿ ಜೊತೆ ಎಂದಿನಂತೆ ಮುದ್ದಾಡುತ್ತಿದ್ದ ಪೂರ್ಣಿಮಾ ಅವರು , ಕಾಲು ಜಾರಿ ನೆಲಕ್ಕೆ ಬಿದಿದ್ದು, ಈ ಸಂದರ್ಭದಲ್ಲಿ ನಾಯಿ ಮಹಿಳೆಯ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ, ಕೈಗೆ ಕಚ್ಚಿದೆ. ಮನೆ ಮಂದಿ ಕೂಡಲೇ ಬೆಳ್ತಂಗಡಿ ಸರಕಾರ ಆಸ್ಪತ್ರೆಗೆ ಮೊದಲು ದಾಖಲು ಮಾಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: S*X ನನ್ನ ಶಕ್ತಿಯ ರಹಸ್ಯ’ ಎಂದ ಪ್ರಬಲ ಸಂಸದೆ !!ವಿಡಿಯೋ ವೈರಲ್

You may also like

Leave a Comment