Home » Crime News: ತಡರಾತ್ರಿ ಬೆಚ್ಚಿಬೀಳೀಸುವ ಘಟನೆ; ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಬರ್ಬರ ಹತ್ಯೆ

Crime News: ತಡರಾತ್ರಿ ಬೆಚ್ಚಿಬೀಳೀಸುವ ಘಟನೆ; ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಬರ್ಬರ ಹತ್ಯೆ

0 comments
Crime

Crime News: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲೇ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆಯೊಂದು ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಕಾರ್ಪೋರೇಟರ್‌ ಪುತ್ರಿ ನೇಹಾ ಕೊಲೆ ಕೃತ್ಯ ಹಸಿಯಾಗಿರುವಾಗಲೇ ಈ ಕೊಲೆ ಕೃತ್ಯ ಕೂಡಾ ನಡೆದಿದೆ.

ಇದನ್ನೂ ಓದಿ: VOTER ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಅಂತ ಚೆಕ್ ಮಾಡೋದು ಹೇಗೆ ?; ನಿಮ್ಮ ಮೊಬೈಲ್ ನಿಂದಲೇ ಇದು ಸಾಧ್ಯ !

ನಗರಸಭೆ ಉಪಾಧ್ಯಕರಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್‌ ಬಾಕಳೆ (27), ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.

ಇದನ್ನೂ ಓದಿ: Crime News: ತಡರಾತ್ರಿ ಬೆಚ್ಚಿಬೀಳೀಸುವ ಘಟನೆ; ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಬರ್ಬರ ಹತ್ಯೆ

ಕೊಪ್ಪಳ ಮೂಲದವರಾಗಿದ್ದವರು ಮೊದಲ ಮಹಡಿಯಲ್ಲಿ ಮಲಗಿದ್ದ ಪತಿ, ಪತ್ನಿ, ಮಗಳನ್ನು ಕೊಲೆ ಮಾಡಲಾಗಿದೆ. ಎ.17 ರಂದು ನಡೆದ ಪ್ರಕಾಶ್‌ ಬಾಕಳೆ ಪುತ್ರ ಕಾರ್ತಿಕ್‌ನ ಮದುವೆ ಫಿಕ್ಸ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಬಂಧಿಗಳು ಇವರು. ಮೇಲಿನ ಮಹಡಿಯಲ್ಲಿ ಸದ್ದು ಕೇಳಿದ ಕುಟುಂಬಸ್ಥರು ಅನುಮಾನದಿಂದ ಪೊಲೀಸರಿಗೆ ಫೊನ್‌ ಮಾಡಿದ್ದರು. ಪೊಲೀಸರಿಗೆ ಫೋನ್‌ ಮಾಡುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್‌ ಆಗಿದ್ದಾರೆ.

ಮೇಲ್ನೋಟಕ್ಕೆ ಇದೊಂದು ದರೋಡೆ ತಂಡ ಮಾಡಿದ ಕೃತ್ಯವೆಂದು ಕಂಡು ಬಂದರೂ, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment