Home » Odisha: ಮಗುಚಿದ 50 ಜನರಿದ್ದ ದೋಣಿ; ಸ್ಥಳೀಯ ಮೀನುಗಾರರಿಂದ ಹಲವರ ರಕ್ಷಣೆ; ಇಬ್ಬರ ಸಾವು, ಎಂಟು ಮಂದಿ ನಾಪತ್ತೆ

Odisha: ಮಗುಚಿದ 50 ಜನರಿದ್ದ ದೋಣಿ; ಸ್ಥಳೀಯ ಮೀನುಗಾರರಿಂದ ಹಲವರ ರಕ್ಷಣೆ; ಇಬ್ಬರ ಸಾವು, ಎಂಟು ಮಂದಿ ನಾಪತ್ತೆ

1 comment

Odisha: ದೋಣಿಯೊಂದು ಮಗುಚಿದ್ದು, ಪರಿಣಾಮ ಇಬ್ಬರು ಸಾವಿಗೀಡಾದ ಘಟನೆಯೊಂದು ನಡೆದಿದೆ. ಜೊತೆಗೆ ಎಂಟು ಮಂದಿ ನಾಮಪತ್ತೆಯಾಗಿದ್ದಾರೆ. ಈ ಘಟನೆ ನಡೆದಿರುವುದು ಒಡಿಶಾ ರಾಜ್ಯದಲ್ಲಿ. ಶುಕ್ರವಾರ ಈ ಘಟನೆ ನಡೆದಿದ್ದು, ಜಾರ್ಸುಗುಡ ಜಿಲ್ಲೆಯ ಮಹಾನದಿ ಎಂಬಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Arvind Kejriwal: ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಜಾಮೀನಿಗಾಗಿ ಮಾವು ಸೇವನೆ- ಇಡಿ ಆರೋಪ

ಸ್ಥಳೀಯ ಮೀನುಗಾರರಿಂದ 35 ಪ್ರಯಾಣಿಕರ ರಕ್ಷಣೆ ಮಾಡಲಾಗಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ.

ಈ ದುರ್ಘಟನೆಯು ಪಥರ್ಸೇನಿ ಕುಡಾದಿಂದ ಬರ್ಗರ್‌ ಜಿಲ್ಲೆಯ ಬಂಜಿಪಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಡೆದಿದೆ. ದೋಣಿಯಲ್ಲಿ ಸುಮಾರು 50 ಜನರಿದ್ದು, ಜಾರ್ಸುಗುಡಾ ಜಿಲ್ಲೆಯ ರೆಂಗಾಲಿ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾರದಾ ಘಾಟ್‌ ತಲುಪುವ ಮೊದಲೇ ಬೋಟ್‌ ಪಲ್ಟಿಯಾಗಿರುವ ಕುರಿತು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Lakshmi Rai: ಹುಡುಗರಿಗೆಲ್ಲಾ ನನ್ನ ನಾಟಿ ಫೋಟೋ ಕಳಿಸಿದ್ದೇನೆ – ನಟಿ ಲಕ್ಷ್ಮೀ ರೈ !!

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಾ ಎಂಟು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಮೃತ ಕುಟುಂಬಗಳಿಗೆ ಒಡಿಶಾ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದು, ನಾಲ್ಕು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

 

You may also like

Leave a Comment