Home » Yadgiri: ನೇಹಾ ಹತ್ಯೆ ಬಳಿಕ ಫಯಾಜ್‌ ಅಂಡ್ ಗ್ಯಾಂಗ್ ನಿಂದ ಹಿಂದೂ ಯುವಕನ ಬರ್ಬರ ಹತ್ಯೆ !!

Yadgiri: ನೇಹಾ ಹತ್ಯೆ ಬಳಿಕ ಫಯಾಜ್‌ ಅಂಡ್ ಗ್ಯಾಂಗ್ ನಿಂದ ಹಿಂದೂ ಯುವಕನ ಬರ್ಬರ ಹತ್ಯೆ !!

0 comments

Yadgiri: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿ ಕಾಲೇಜಿನ ನೇಹಾ ಹತ್ಯೆ ಪ್ರಕರಣ(Neha Murder Case) ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿರುವಾಗಲೇ ರಾಜ್ಯದಲ್ಲಿ ಅನ್ಯಕೋಮಿನ ಯುವಕರಿಂದ ಮತ್ತೊಬ್ಬ ಹಿಂದೂ ಯುವಕನ ಕೊಲೆಯಾಗಿದೆ.

ಹೌದು, ಯಾದಗಿರಿ(Yadgiri) ನಗರದ ಶಹಾಪೂರ ಪೇಟ್ ಬಡಾವಣೆಯಲ್ಲಿ ಅನ್ಯಕೋಮಿನ ಫಯಾಜ್‌ ಅಂಡ್ ಗ್ಯಾಂಗ್‌ನಿಂದ ಹಿಂದೂ ಯುವಕ ರಾಕೇಶ್‌(Rakesh) ನಲ್ಲಿ ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕ ದಲಿತ ಸಮುದಾಯಕ್ಕೆ ಸೇರಿದ ರಾಕೇಶ್ (22) ಎಂದು ಗುರುತಿಸಲಾಗಿದೆ. ಈತನನ್ನು ಫಯಾಜ್(Fayaz) ಹಾಗೂ ಸಹಚರರಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅಚ್ಚರಿ ಏನಂದ್ರೆ ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಹಾಪೂರ(Shahapur) ಪೇಟ್ ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ಹಿಂದೂ ಯುವಕ ರಾಕೇಶ್‌ನ ಕೊಲೆಯಾದ್ರೂ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ. ಮೃತ ದೇಹವನ್ನು 18 ಗಂಟೆಗಳ ಬಳಿಕ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಹಿಂದು ಯುವಕನ‌ ಹತ್ಯೆ ಮರೆಮಾಚಲು ಪೊಲೀಸ್ ಇಲಾಖೆ ಯತ್ನ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಂದ ದೊಡ್ಡ ಮಟ್ಟದ ಪ್ರತಿಭಟನೆ ವ್ಯಕ್ತವಾಗಬಹುದು ಎಂಬ ಸುಳಿವು ಸಿಕ್ಕ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಪೊಲೀಸರು ಮೃತ ರಾಕೇಶನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡೊದ್ದಾರೆ.

ಕೊಲೆ ಯಾಕೆ ಮಾಡಲಾಗಿದೆ ಎಂಬ ಹೆಚ್ಚನ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ತನಿಖೆ ಬಳಿಕ ಎಲ್ಲಾ ಅಂಶ ಬಯಲಾಗಲಿದೆ. ಆದರೆ ದಿನಬೆಳಗಾದರೆ ಈ ರೀತಿಯ ಕೊಲೆಗಳು ಆಗೋದನ್ನು ಗಮನಿಸಿದರೆ ನಮ್ಮ ಸಮಾಜ ಎತ್ತ ಕಡೆ ಸಾಗುತ್ತಿದೆ? ಯುವಜನತೆಯ ಮುಂದಿನ ಭವಿಷ್ಯವೇನು? ಎಂದು ಕಳವಳವಾಗುತ್ತದೆ.

You may also like

Leave a Comment