Home » BJP MP Dies : ಹೃದಯಾಘಾತಕ್ಕೆ ಬಿಜೆಪಿ ಸಂಸದ ಸಾವು !!

BJP MP Dies : ಹೃದಯಾಘಾತಕ್ಕೆ ಬಿಜೆಪಿ ಸಂಸದ ಸಾವು !!

0 comments
BJP MP Dies

BJP MP Dies : ಉತ್ತರ ಪ್ರದೇಶದ(UP) ಹತ್ರಾಸ್‌ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ರಾಜವೀರ್ ದಿಲೇರ್ (Hathras BJP MP Rajveer Diler) ಅವರು ಹೃದಯಾಘಾತದಿಂದ ಇಂದು(ಏ 24) ನಿಧನರಾಗಿದ್ದಾರೆ.

ದೊರೆತ ಮಾಹಿತಿ ಪ್ರಕಾರ ಸಂಸದ ರಾಜವೀರ್ ದಿಲೇರ್ ಅವರು ಅಲಿಘರ್‌ನಲ್ಲಿರುವ ತಮ್ಮ ನಿವಾಸದಲ್ಲಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಕಾಲ ಮೀರಿತ್ತು

ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಂದಹಾಗೆ ರಾಜವೀರ್ ದಿಲೇರ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯ(Parliament Election) ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಬಿಜೆಪಿ(BJP) ಟಿಕೆಟ್‌ ಕೊಡಲು ನಿರಾಕರಿಸಿತ್ತು. ಸಂಸದರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath)ಸಂತಾಪ ಸೂಚಿಸಿದ್ದಾರೆ.

You may also like

Leave a Comment