Home » Acid Attack: ವರನ ಮೇಲೆ ಮದುವೆ ಮೆರವಣಿಗೆಯಲ್ಲೇ ಆಸಿಡ್‌ ಎರಚಿದ ಪ್ರಿಯತಮೆ

Acid Attack: ವರನ ಮೇಲೆ ಮದುವೆ ಮೆರವಣಿಗೆಯಲ್ಲೇ ಆಸಿಡ್‌ ಎರಚಿದ ಪ್ರಿಯತಮೆ

by Mallika
0 comments
Acid Attack

Acid Attack: ಉತ್ತರ ಪ್ರದೇಶದ ಬಲ್ಲಿಯಾ ಎಂಬಲ್ಲಿ ಮದುವೆ ಮೆರವಣಿಗೆಯಲ್ಲಿ ಜುಂ ಅಂತ ಹೋಗುತ್ತಿದ್ದ ವರನ ಮೇಲೆ ಮಹಿಳೆಯೊಬ್ಬಳು ಆಸಿಡ್‌ ದಾಳಿ ನಡೆಸಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯನ್ನು ಕೂಡಲೇ ವರನ ಸಂಬಂಧಿಕರು ಹಿಡಿದಿದ್ದು, ಅಮಾನುಷವಾಗಿ ಥಳಿಸಿರುವ ವೀಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ:  Actress Amulya: ನಟಿ ಅಮೂಲ್ಯ ಮಾವನ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ, ಮದ್ಯ ಸೀಜ್ ‌

ಈ ಘಟನೆ ಮಂಗಳವಾರ ಬಲ್ಲಿಯಾದಲ್ಲಿ ಇರುವ ಬನ್ಸ್ದಿಹ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ದುಮಾರಿ ಗ್ರಾಮದಲ್ಲಿ ನಡೆದ ಮದುವೆ ಮೆರವಣಿಗೆಯಲ್ಲಿ ನಡೆದಿದೆ. ಆಸಿಡ್‌ ದಾಳಿಯಿಂದ ವರನಿಗೆ ಸುಟ್ಟ ಗಾಯಗಳಾಗಿದೆ.

ಇದನ್ನೂ ಓದಿ:  Kundapura: ಬಡಗುತಿಟ್ಟಿನ ಯಕ್ಷಗಾನ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ವರನ ಹೆಸರು ರಾಕೇಶ್‌ ಬಿಂದ್‌ ಎಂದಾಗಿದ್ದು, ಈತ ಮದುವೆ ಮೆರವಣಿಗೆಯೊಂದಿಗೆ ಹೊರಡಲು ತಯಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅದೇ ಗ್ರಾಮದ ಯುವತಿಯೋರ್ವಳು ವಧುವಿನ ವೇಷ ಧರಿಸಿ ಆತನ ಬಳಿಗೆ ಬಂದಿದ್ದು, ರಾಕೇಶನ ಬಳಿ ತನ್ನಿಂದ ದೂರವಾಗದಂತೆ ಮನವರಿಕೆ ಮಾಡಲು ಪ್ರಯತ್ನ ಪಟ್ಟಿದ್ದಾಳೆ. ಆದರೆ ರಾಕೇಶ ಆಕೆಯ ಮಾತನ್ನು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಬಾಟಲಿಯನ್ನು ತೆಗೆದುಕೊಂಡು ವರನ ಮುಖದ ಮೇಲೆ ಆಸಿಡ್‌ ಎರಚಿದ್ದಾಳೆ. ವರನ ಹತ್ತಿರ ಇದ್ದ ಮೂವರು ಮಹಿಳೆಯರಿಗೂ ಸುಟ್ಟ ಗಾಯಗಳಾಗಿದೆ.

ವರನ ಜೊತೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ವರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಆತ ಮದುವೆ ಮಂಟಪಕ್ಕೆ ಬಂದಿದ್ದು, ಅಲ್ಲಿ ಮದುವೆ ಕಾರ್ಯ ಪೂರ್ಣಗೊಂಡಿದೆ.

ಇತ್ತ ವರನ ಸಂಬಂಧಿಕರ ಕೈಗೆ ಸಿಕ್ಕಿಬಿದ್ದ ಮಹಿಳೆಯನ್ನು ಚೆನ್ನಾಗಿ ಥಳಿಸಿ ಮೆರವಣಿಗೆ ಮಾಡಲಾಗಿದೆ. ಅಲ್ಲದೇ ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಪೊಲೀಸರು ಮಹಿಳೆಯನ್ನು ಬಂಧನ ಮಾಡಿದ್ದು, ವಿಚಾರಣೆ ಮಾಡುತ್ತಿದ್ದಾರೆ.

 

You may also like

Leave a Comment