Home » Kerala: ಬಹಿರಂಗವಾಗಿ ನಕ್ಸಲರ ತಂಡ ಪತ್ತೆ; ಚುನಾವಣೆ ಬಹಿಷ್ಕಾರಕ್ಕೆ ಕರೆ

Kerala: ಬಹಿರಂಗವಾಗಿ ನಕ್ಸಲರ ತಂಡ ಪತ್ತೆ; ಚುನಾವಣೆ ಬಹಿಷ್ಕಾರಕ್ಕೆ ಕರೆ

0 comments
Kerala

Kerla: ವಯನಾಡು ಜಿಲ್ಲೆಯ ಕಂಬಮಲೆ ಅರಣ್ಯ ಹಾಗೂ ಮಕ್ಕಮಳೆ ಅರಣ್ಯದಲ್ಲಿ ನಕ್ಸಲರು ಪತ್ತೆಯಾಗಿರುವ ಮಾಹಿತಿಯೊಂದು ಲಭ್ಯವಾಗಿದೆ. ಲೋಕಸಭಾ ಚುನಾವಣಾ ವೇಳೆ ನಾಲ್ವರು ನಕ್ಸಲರ ತಂಡವೊಂದು ಗ್ರಾಮಕ್ಕೆ ಮಾವೋವಿಸ್ಟ್‌ ಜಿಂದಾಬಾದ್‌ ಎಂಬ ಘೋಷಣೆಯನ್ನು ಕೂಗಿದ್ದು, ಚುನಾವಣೆಯನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ:  Acid Attack: ವರನ ಮೇಲೆ ಮದುವೆ ಮೆರವಣಿಗೆಯಲ್ಲೇ ಆಸಿಡ್‌ ಎರಚಿದ ಪ್ರಿಯತಮೆ

ಗ್ರಾಮಸ್ಥರ ಜೊತೆ ಮಾತನಾಡಿ, ನಲುವತ್ತು ವರ್ಷದಿಂದ ಸರಕಾರವು ಕಂಬಮಲೆ ಅರಣ್ಯ ತಪ್ಪಲಿನ ಜನರ ಸಮಸ್ಯೆಯನ್ನು ಅರ್ಥ ಮಾಡಿಲ್ಲ. ಹಾಗಾಗಿ ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಿ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ:  JEE Mains 2 Result: ಜೆಇಇ ಮೈನ್ಸ್ 2 ಫಲಿತಾಂಶ ಪ್ರಕಟ, JEE ಅಡ್ವಾನ್ಸ್ಡ್ ಬರೆಯಲು ಕಟ್ ಆಫ್ ಮಾರ್ಕ್ ಚೆಕ್ ಮಾಡಲು ಇಲ್ಲಿದೆ ಲಿಂಕ್ !

ಸ್ಥಳೀಯರ ಮಾಹಿತಿ ಪ್ರಕಾರ ಈ ತಂಡವು ಕೇರಳ ರಾಜ್ಯಕ್ಕೆ ಬಹಳಷ್ಟು ವರ್ಷಗಳಿಂದ ಬೇಕಾಗಿರುವ ತಲೆಮರೆಸಿಕೊಂಡಿರುವ ನಕ್ಸಲರು ಎಂಬ ಮಾಹಿತಿ ನೀಡಿದ್ದಾರೆ. ಕಂಬಮಲೆ ಎಂಬ ಪ್ರದೇಶದಲ್ಲಿ ಟೀ ಎಸ್ಟೇಟ್‌ ಇದ್ದು, ಇಲ್ಲಿ ಕೂಲಿ ಕಾರ್ಮಿಕರ ನಡುವೆ ನಕ್ಸಲರು ಮಾತುಕತೆ ನಡೆಸಿದ ಕುರಿತು ವೀಡಿಯೋ ಪೊಲೀಸರಿಗೆ ದೊರಕಿದೆ.

You may also like

Leave a Comment