Home » Kannadati Anu: ಪುನೀತ್ ಕೆರೆಹಳ್ಳಿಯಿಂದ ಕನ್ನಡತಿ ಅಕ್ಕ ಅನುಗೆ ಬ್ಯಾಡ್ ಕಮೆಂಟ್ !!

Kannadati Anu: ಪುನೀತ್ ಕೆರೆಹಳ್ಳಿಯಿಂದ ಕನ್ನಡತಿ ಅಕ್ಕ ಅನುಗೆ ಬ್ಯಾಡ್ ಕಮೆಂಟ್ !!

313 comments
Kannadati Anu

Kannadati Anu: ಕನ್ನಡ ಶಾಲೆಗಳ ಉಳಿವಿಗಾಗಿ ಕಂಕಣ ಕಟ್ಟಿ, ತಂಡ ಕಟ್ಟಿಕೊಂಡು ಹೋರಾಡುತ್ತಾ ತನ್ನ ಬದುಕನ್ನೇ ಮುಡಿಪಾಗಿಟ್ಟಿರುವ ಕನ್ನಡತಿ ಅಕ್ಕ ಅನು(Kannadati Anu) ಗೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯಿಂದ ಬ್ಯಾಡ್ ಕಮೆಂಟ್ಗಳು ಬರುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:  Chikkamagaluru: ಬಿಜೆಪಿ ಕಾರ್ಯಕರ್ತರಿಂದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ !!

ಕನ್ನಡತಿ ಅಕ್ಕ ಎಂದೇ ಖ್ಯಾತಿ ಹೊಂದಿರುವ ಅನು ಅವರೇ ಸ್ವತಃ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಲೈವ್ ಬಂದಿದ್ದು, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ‘ಪುನೀತ್ ಕೆರೆಹಳ್ಳಿ(Puneet Kerehalli) ಎಂಬ ಸಹೋದರ ಎಲ್ಲರಿಗೂ ಪರಿಚಯವಿದೆ. ಆ ಸಹೋದರನಿಂದ ತುಂಬಾ ಬ್ಯಾಡ್ ಕಮೆಂಟ್ ಅನುಭವಿಸುವ ಕೆಟ್ಟ ಪರಿಸ್ಥಿತಿ ನನಗೆ ನಿರ್ಮಾಣ ಆಗಿದೆ’ ಎಂದು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:  Government Job: ಪರೀಕ್ಷೆ ಇಲ್ಲದೆ ಸರ್ಕಾರಿ ಉದ್ಯೋಗ ಪಡೆಯಬಹುದು, ಲೈಫ್ ಸೆಟಲ್ ಬಿಡಿ!

ವಿಡಿಯೋದಲ್ಲಿ ಮಾತನಾಡಿದ ಅವರು ನಾನು ಕನ್ನಡದವಳು, ಭಾರತೀಯಳು. ಸಮಾಜ ಸೇವೆ ಮಾಡುತ್ತಿರುವ ಕಾರಣ ಎಲ್ಲಾ ಧರ್ಮಗಳ ಧರ್ಮಗುರುಗಳ ಪರಿಚಯವಿದೆ. ಎಲ್ಲರೂ ನನ್ನನ್ನು ಆಶೀರ್ವದಿಸುತ್ತಾರೆ. ಈ ಸಂದರ್ಭದಲ್ಲಿ ಏನಾದರೂ ತಪ್ಪಾಗಿದ್ದರೆ ನಿಮ್ಮ ಸಹೋದರಿ, ಸ್ನೇಹಿತೆ, ಮನೆ ಮಗಳೆಂದು ನನಗೆ ತಿದ್ದಿ ಬುದ್ದಿ ಹೇಳಿ. ಅದು ಬಿಟ್ಟು ಬ್ಯಾಡ್ ಬ್ಯಾಡ್ ಆಗಿ ಕಮೆಂಟ್(Bad Comment) ಮಾಡಬೇಡಿ. ಇದರಿಂದ ನಮ್ಮ ಆತ್ಮಸ್ಥೈರ್ಯ ಕುಂದಿ ಹೋಗುತ್ತೆ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ಪುನೀತ್ ಕೆರೆಹಳ್ಳಿಯವರೆ ನಿಮ್ಮ ಸಿದ್ದಾಂತ ಬೇರೆ ಇರಬಹುದು, ನಮ್ಮ ಸಿದ್ದಾಂತವೇ ನಮಗೆ ಎಲ್ಲರೂ ಬೇಕು. ನಿಮ್ಮ ವಿಚಾರಗಳಿಂದ ನಮ್ಮನ್ನು ತುಳಿಯಬೇಡಿ. ನಿಮ್ಮಿಂದ ಸಾಕಷ್ಟು ಕೆಟ್ಟ ಕಮೆಂಟ್ ಬಂದಿದೆ. ತುಂಬಾ ನೋವಾಗಿದೆ ಎಂದಿದ್ದಾರೆ.

You may also like

Leave a Comment