Home » Bellulli Kabab Chandru: ಒಂದು ಫೋನ್ ಕಾಲ್ ರಿಸೀವ್ ಮಾಡದಿದ್ದಕ್ಕೆ 13 ಕೋಟಿ ಕಳ್ಕೊಂಡ ಬೆಳ್ಳುಳ್ಳಿ ಕಬಾಬ್ ಚಂದ್ರು !!

Bellulli Kabab Chandru: ಒಂದು ಫೋನ್ ಕಾಲ್ ರಿಸೀವ್ ಮಾಡದಿದ್ದಕ್ಕೆ 13 ಕೋಟಿ ಕಳ್ಕೊಂಡ ಬೆಳ್ಳುಳ್ಳಿ ಕಬಾಬ್ ಚಂದ್ರು !!

0 comments
Bellulli Kabab Chandru

Bellulli Kabab Chandru: ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿ ಕನ್ನಡಿಗರ ಮನೆಮಾತಾಗಿರುವ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಅವರು ಬರೀ ಒಂದೇ ಒಂದು ಫೋನ್ ಕಾಲ್ ರಿಸೀವ್ ಮಾಡದಿದ್ದಕ್ಕೆ ಬರೋಬ್ಬರಿ 13 ಕೋಟಿ ರೂ ಕಳ್ಕೊಂಡಿದ್ದಾರಂತೆ. ಅರೆ ಏನಿದು ಘಟನೆ?

ಹೌದು, ಇತ್ತೀಚೆಗೆ ಯೂಟ್ಯೂಬ್(You tube) ಚಾನೆಲ್‌ವೊಂದಕ್ಕೆ ಚಂದ್ರು(Bellulli Kabab Chandru) ಸಂದರ್ಶನ ನೀಡಿದ ಚಂದ್ರು ಅವರು ತನ್ನ ಜರ್ನಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಹೊಟೇಲ್ ಉದ್ಯಮಕ್ಕೆ ಇಳಿದಾಗ ಒಂದು ಕರೆ ಸ್ವೀಕರಿಸದೆ ಇದ್ದಿದ್ದಕ್ಕೆ ಬರೋಬ್ಬರಿ 13 ಕೋಟಿ ರೂಪಾಯಿ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ಏನಿದು ಘಟನೆ?
ಚಂದ್ರು ಡಾ.ರಾಜ್(ಅಣ್ಣಾವು) ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಬೆಳ್ಳುಳ್ಳಿ ಕಬಾಬ್ ಚಂದ್ರು ಅಂತ ಜನಪ್ರಿಯರಾಗಿದ್ದೇ ಒಂದು ರೋಚಕ ಕಥೆ. ಅಂದಹಾಗೆ ಅಣ್ಣಾವ್ರ ಕಂಪನಿ ಬಿಟ್ಟ ಬಳಿಕ ಚಂದ್ರು ಮಾಲಾಶ್ರೀ ಅವರಿಗೆ ಮೇಕಪ್ ಆರ್ಟಿಸ್ಟ್ ಆಗಿದ್ದರು. ಅಲ್ಲೂ ಪೂರೈಸಿ ಬಳಿಕ ಹೊಟೇಲ್ ಉದ್ಯಮಕ್ಕೆ ಕೈ ಹಾಕಿದ್ದರು. ಚಿಕ್ಕದೊಂದು ಗಾಡಿಯಲ್ಲಿ ಹೊಟೇಲ್‌ ನಡೆಸುತ್ತಾ ಮುಂದೆ ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರೆಗೂ ಬೆಳೆದಿದ್ದರು. ಬೆಂಗಳೂರಿನಲ್ಲಿ ಆಗ ಏಷ್ಯನ್ ಗೇಮ್ಸ್ ನಡೆಯುತ್ತಿತ್ತು. ಅಲ್ಲಿಗೆ ಊಟ, ತಿಂಡಿ ಸರಬರಾಜು ಮಾಡಲು ಚಂದ್ರುಗೆ 13 ಕೋಟಿ ರೂಪಾಯಿ ಆಫರ್ ಬಂದಿತ್ತು. ಆಗ ಮೊಬೈಲ್ ಫೋನ್ ಇರಲಿಲ್ಲ. ಪೇಜರ್‌ ಅಷ್ಟೇ ಇತ್ತು. ಹೀಗಾಗಿ ಪೇಜರ್ ಅನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದರು. ಈ ವೇಳೆ ಏಷ್ಯನ್ ಗೇಮ್ಸ್‌ಗೆ ಊಟದ ವ್ಯವಸ್ಥೆ ಮಾಡುವುದಕ್ಕೆ ಅಂತ ಬಂದಿದ್ದ ಡೀಲ್ ಮಿಸ್ ಆಗಿತ್ತಂತೆ !! ಈ ವಿಷಯವನ್ನು ಚಟಪಟ ಚಂದ್ರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಟ್ಟೆ ಬದಲಿಸಲು ಬಿಡುತ್ತಿರಲಿಲ್ಲ, ಮೇಕಪ್ ರೂಮಲ್ಲಿದ್ದಾಗಂತೂ… !! ಯಪ್ಪಾ.. ನಿರ್ಮಾಪಕನ ಅಸಲಿ ಮುಖ ಬಿಚ್ಚಿಟ್ಟ ನಟಿ ಕೃಷ್ಣ ಮುಖರ್ಜಿ

ಬಳಿಕ ಮಾತನಾಡಿದ ಅವರು ಇಂದು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್‌ ಆದ್ಮಲೆ ಹಗಲು ರಾತ್ರಿ ಎನ್ನದೆ ಫೋನ್ ಕಾಲ್‌ಗಳು ಬರುತ್ತವೆ. ಆದರೆ, ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ. ಫೇಕ್ ಕರೆಗಳಾಗಿದ್ದರೂ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

You may also like

Leave a Comment