Home » Heart Attack: ಅಕ್ಕನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಬಲಿಯಾದ ತಂಗಿ !!

Heart Attack: ಅಕ್ಕನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಬಲಿಯಾದ ತಂಗಿ !!

0 comments
Heart Attack

Heart Attack: ಹೃದಯಘಾತ ಮೊದಲೆಲ್ಲ ಪ್ರಾಯ ಆದವರಿಗೆ ಬಂದೆರಗುತ್ತಿತ್ತು. ಆದರೆ ಇಂದು ಚಿಕ್ಕವರು, ದೊಡ್ಡವರು ಎಂದು ನೋಡದೆ ಎಲ್ಲರಿಗೂ ಇದು ಅಟ್ಯಾಕ್ ಆಗುತ್ತಿದೆ. ಹಾಗೆ ನೋಡಿದರೆ ಇಂದು ಯುವ ಜನರಿಗೇ ಹೆಚ್ಚು ಹೃದಯಾಘಾತ ಆಗುತ್ತಿದೆ ಎನ್ನಬಹುದು. ಅಂತೆಯೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು ಅಕ್ಕನ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತದಿಂದ(Heart Attack) ಕುಸಿದು ಬಿದ್ದು ತಂಗಿ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ:  Bengaluru: ಗ್ರಾಹಕನ ಗುಪ್ತಾಂಗ ಟಚ್‌ ಮಾಡಿದ ಡೆಲಿವರ್‌ ಬಾಯ್‌

https://x.com/SachinGuptaUP/status/1784539218448199936?t=4DoKHRh-H_rCceRlzobdFQ&s=08

ಉತ್ತರ ಪ್ರದೇಶದ ಮೀರತ್‌ನಲ್ಲಿ (Uttar Pradesh’s Meerut) ಅಕ್ಕನ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಯುವತಿ ಮೃತಪಟ್ಟ ದಾರುಣ ಘಟನೆ ನಡೆದಿದೆ ಎನ್ನಲಾಗಿದೆ. ಮೃತಳನ್ನು ರಿಮ್ಶಾ (18) ಎಂದು ಗುರುತಿಸಲಾಗಿದೆ. ಅದು ಕೂಡ ಮದುವೆಯ ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಎಲ್ಲರೂ ಸಖತ್ ಸ್ಟೆಪ್ ಹಾಕುತ್ತಿದ್ದು ಇದ್ದಕ್ಕಿದ್ದಂತೆ ಈ ಘಟನೆ ನಡೆದಿದೆ. ಇದೀಗ ರಿಮ್ಶಾ ಡ್ಯಾನ್ಸ್ ಮಾಡುತ್ತಾ ಕುಸಿದು ಬೀಳುತ್ತಿರುವ‌ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ:  Prajwal Revanna: 16 ರಿಂದ 50 ವರ್ಷದ ಸುಮಾರು 300 ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ !! ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ

ವಿಡಿಯೋದಲ್ಲಿ ಏನಿದೆ?

ರಿಮ್ಶಾ ತನ್ನ ಕುಟುಂಬ ಸದಸ್ಯರೊಂದಿಗೆ ಡ್ಯಾನ್ಸ್‌ ಮಾಡುತ್ತಿರುತ್ತಾಳೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ಆಕೆಗೆ ತಲೆಸುತ್ತು ಬಂದಂತೆ ಆಗಿದ್ದು, ಎದೆ ಹಿಡಿದುಕೊಂಡು ಅಲ್ಲೇ ಇದ್ದ ಪುಟ್ಟ ಹುಡುಗನ ಕೈ ಹಿಡಿದುಕೊಳ್ಳಲು ಪ್ರಯತ್ನಿಸುತ್ತಾಳೆ. ನಂತರ ಅಲ್ಲೇ ಕುಸಿದು ಬೀಳುತ್ತಾಳೆ. ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಏನೂ ಪ್ರಯೋಜನ ಆಗಿಲ್ಲ.

You may also like

Leave a Comment