Home » Hassan Pen Drive Case: ಪ್ರಜ್ವಲ್‌, ರೇವಣ್ಣ ಆ ರೀತಿ ಮಾಡಿಲ್ಲ-ದೂರುದಾರೆಯ ಅತ್ತೆ

Hassan Pen Drive Case: ಪ್ರಜ್ವಲ್‌, ರೇವಣ್ಣ ಆ ರೀತಿ ಮಾಡಿಲ್ಲ-ದೂರುದಾರೆಯ ಅತ್ತೆ

0 comments
Hassan Pen Drive Case

Hassan Pen Drive Case: ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಿಸಿ ಸಂಸದ ಪ್ರಜ್ವಲ್‌ ರೇವಣ್ಣ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಅವರ ಮನೆ ಕೆಲಸದಾಕೆ ದೂರು ನೀಡಿದ್ದು, ತಂದೆ ಮಗನ ವಿರುದ್ಧ ಕ್ರಮ ಜರುಗಿಸಿ ವಿವಿದೆಡೆ ಪ್ರತಿಭಟನೆಗಳು ನಡೆಯುತ್ತಿದೆ.

ಆದರೆ ರೇವಣ್ಣ ಕುಟುಂಬ ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯ ಮಾಡಿಲ್ಲ ಎಂದು ದೂರುದಾರೆಯ ಸಂಬಂಧಿಕರು ಹೇಳಿರುವುದು ವರದಿಯಾಗಿದೆ.

ದೂರುದಾರೆಯ ಅತ್ತೆ ಗೌರಮ್ಮ ಸುದ್ದಿಗೋಷ್ಠಿ ನಡೆಸಿದ್ದು, ದೂರುದಾರೆಗೆ ಭವಾನಿ ರೇವಣ್ಣ ಅವರು ಸಹಾಯ ಮಾಡಿ ಕೆಲಸ ಕೊಡಿಸಿದ್ದರು. ರೇವಣ್ಣ ಕುಟುಂಬ ನಮ್ಮ ಮೇಲೆ ಯಾವುದೇ ದೌರ್ಜನ್ಯ ಮಾಡಿಲ್ಲ. ದೂರುದಾರೆಯನ್ನು ಕರೆದುಕೊಂಡು ಹೋಗಿ ಇರಿಸಿಕೊಳ್ಳಿ ಎಂದು ನಾವೇ ಭವಾನಿ ಅಮ್ಮನವರಿಗೆ ಹೇಳಿದ್ದೆವು. ಅವರು ಯಾವ ದೌರ್ಜನ್ಯ ಮಾಡಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನಾಲ್ಕು ವರ್ಷದಿಂದ ಅಲ್ಲೇ ಕೆಲಸ ಮಾಡಿಕೊಂಡಿದ್ದಳು. ಐದು ವರ್ಷದಿಂದ ಸಮಸ್ಯೆ ಇಲ್ಲದೇ ಈಗ ಯಾಕೆ ದೂರು ಕೊಟ್ಟಳು. ಯಾರದೋ ಒತ್ತಡದಿಂದ ಮಹಿಳೆ ದೂರು ನೀಡಿದ್ದಾಳೆ. ಭವಾನಿ ರೇವಣ್ಣ ನಮಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸರಿಯಾದ ಹೆಂಗಸಾಗಿದ್ದರೆ ಐದು ವರ್ಷದ ಹಿಂದೆಯೇ ಈ ಪ್ರಶ್ನೆ ಮಾಡಬಹುದಿತ್ತು. ಇಲ್ಲಿಯವರೆಗೆ ಯಾವುದೇ ವಿಷಯ ಪ್ರಸ್ತಾಪ ಮಾಡಿಲ್ಲ. ಈಗ ಯಾವುದೋ ದುರುದ್ದೇಶ ಮತ್ತು ಒತ್ತಡದಿಂದ ಈ ರೀತಿ ಮಾಡಿದ್ದಾರೆ, ದೂರುದಾರೆ ಕೊಟ್ಟ ದೂರಿನಲ್ಲಿ ಯಾವುದೇ ಸತ್ಯವಿಲ್ಲ. ಸರಿಯಾದ ತನಿಖೆ ಆಗಬೇಕು. ಈ ಪ್ರಕರಣದಿಂದ ನಮ್ಮ ಹಾಗೂ ರೇವಣ್ಣನವರ ಸಂಬಂಧ ಹಾಳಾಗುವ ಹಾಗೆ ಇದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: Udupi: ಓವರ್‌ಟೇಕ್‌ ಗಲಾಟೆ; ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

You may also like

Leave a Comment