Home » HD Revanna: ಅಶ್ಲೀಲ ವೀಡಿಯೋ ಪ್ರಕರಣ; ದೇವರ ಮೊರೆ ಹೋದ ಹೆಚ್‌ಡಿ ರೇವಣ್ಣ

HD Revanna: ಅಶ್ಲೀಲ ವೀಡಿಯೋ ಪ್ರಕರಣ; ದೇವರ ಮೊರೆ ಹೋದ ಹೆಚ್‌ಡಿ ರೇವಣ್ಣ

0 comments
HD Revanna

HD Revanna: ಅಶ್ಲೀಲ ವೀಡಿಯೋ ಪ್ರಕರಣ ಕುರಿತಂತೆ ಇದೀಗ ಮಾಜಿ ಸಚಿವ, ಜೆಡಿಎಸ್‌ ನಾಯಕ ಹೆಚ್‌ಡಿ ರೇವಣ್ಣ ದೇವರ ಮೊರೆ ಹೋಗಿದ್ದು. ರೇವಣ್ಣ ಅವರ ಮನೆಯಲ್ಲಿ ಇಂದು (ಬುಧವಾರ) ಹೋಮ, ಹವನ ನಡೆದಿದೆ. ರೇವಣ್ಣ ಅವರ ಹೊಳೆನರಸೀಪುರದ ಮನೆಯಲ್ಲಿ ಹೋಮ-ಹವನ ನಡೆದಿದೆ.

ಇದನ್ನೂ ಓದಿ:  Andhra Pradesh Election: ಕರ್ನಾಟಕ ಮಾದರಿ ಗ್ಯಾರಂಟಿ ಘೋಷಣೆ ಮಾಡಿದ ಆಂಧ್ರಪ್ರದೇಶ; ರೈತರಿಗೆ 20 ಸಾವಿರ, ನಿರುದ್ಯೋಗಿಗಳಿಗೆ 3 ಸಾವಿರ, ಮಹಿಳೆಯರಿಗೆ ರೂ. 1500 ಪಿಂಚಣಿ

ಹೋಮ ಹವನ ಮಾತ್ರವಲ್ಲದೇ ಬೆಳಗ್ಗೆಯಿಂದಲೇ ವಿವಿಧ ಪೂಜೆಗಳನ್ನು ಮಾಡಿಸಿದ್ದಾರೆ. ವಿವಿಧ ಕೆಲಸಗಳಿಗೆಂದು ರೇವಣ್ಣ ಅವರ ಹೊಳೆ ನರಸೀಪುರದ ಮನೆಗೆ ಜನ ಬರುತ್ತಲೇ ಇರುತ್ತಾರೆ. ಆದರೆ ಇಂದು ರೇವಣ್ಣ ಅವರ ಮನೆ ಖಾಲಿ ಖಾಲಿಯಾಗಿ ಬಣಗುಟ್ಟುತ್ತಿದೆ.

ಇದನ್ನೂ ಓದಿ:  Lucknow: ಸೋಷಿಯಲ್‌ ಮೀಡಿಯಾ ಲವ್‌; ಯುವತಿ ಎಂದು 45 ರ ಆಂಟಿ ಜೊತೆ 20 ರ ಯುವಕನ ಲವ್‌

ಮಂಗಳವಾರ ತಡರಾತ್ರಿ ಹೊಳೆನರಸೀಪುರ ನಿವಾಸಕ್ಕೆ ಬಂದಿದ್ದ ರೇವಣ್ಣ ಅವರು ಇಂದು ಬೆಳಗ್ಗೆನೇ ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವೇಶ್ವರ, ಲಕ್ಷ್ಮೀ ನರಸಿಂಹ ಸ್ವಾಮಿ ಸನ್ನಿಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.

ರೇವಣ್ಣ ಅವರು ಮೇ.4 ರಂದು ಎಸ್‌ಐಟಿ ತನಿಖೆಗೆ ಹಾಜರಾಗುವ ಸಾಧ್ಯತೆ ಇದೆ.

You may also like

Leave a Comment