Home » Uttarpradesh: ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ವ್ಯಕ್ತಿ ಸಾವು; ಬ್ರೈನ್‌ ಸ್ಟ್ರೋಕ್‌ ಶಂಕೆ

Uttarpradesh: ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ವ್ಯಕ್ತಿ ಸಾವು; ಬ್ರೈನ್‌ ಸ್ಟ್ರೋಕ್‌ ಶಂಕೆ

1 comment
Uttarakhand

Uttarpradesh: ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆಯೊಂದು ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.

ಇದನ್ನೂ ಓದಿ: Cocoa Price Rise: ಕರಾವಳಿ ಜನಕ್ಕೆ ಜಾಕ್ ಪಾಟ್ – ಚಿನ್ನದ ಬೆಲೆ ಪಡೆದ ಕೊಕ್ಕೋ !!

ದೀಪಕ್‌ ಗುಪ್ತ (32) ಎಂಬಾತನೇ ಮೃತ ವ್ಯಕ್ತಿ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೀಪಕ್‌ ಗುಪ್ತಾ ಜಿಮ್‌ನಲ್ಲಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿರುವವರು ಆಸ್ಪತ್ರೆಗೆ ಅವರನ್ನು ಕರೆದೊಯ್ದಿದ್ದು, ವೈದ್ಯರು ಮೃತ ಹೊಂದಿರುವುದಾಗಿ ಹೇಳಿದ್ದಾರೆ. ದೀಪಕ್‌ ಬ್ರೈನ್‌ ಸ್ಟ್ರೋಕ್‌ಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೆ ಜಿಮ್‌ನಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದೀಪಕ್‌ ತಲೆಗೆ ಕೈ ಹಿಡಿದುಕೊಂಡಿರುವುದು ಕಂಡಿದೆ.

ಇದನ್ನೂ ಓದಿ: Astro Tips: ಒಂದೇ ಬಾರಿಗೆ 3 ಚಪಾತಿ ಅಥವಾ ರೊಟ್ಟಿಯನ್ನು ತಟ್ಟೆಗೆ ಹಾಕಿಕೊಳ್ಳಬಾರದು! ಕೆಟ್ಟದ್ದರ ಸಂಕೇತವಿದು

ಈ ಕುರಿತು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ವರದಿ ಬಂದ ಬಳಿಕ ನಿಖರ ಮಾಹಿತಿ ಹೊರಬರಲಿದೆ ಎಂದು ಹೇಳಲಾಗಿದೆ.

 

You may also like

Leave a Comment