Home » Devils Cry Revealed: ಮಗುವಿನ ಕೋಣೆಯಲ್ಲಿ ಕೇಳುತ್ತಿತ್ತು ದೆವ್ವದ ಸದ್ದು – ಭ್ರಮೆ ಎಂದ ಹೆತ್ತವರನ್ನೇ ಬೆಚ್ಚಿಬೀಳಿಸಿತು ಸತ್ಯ ಸಂಗತಿ !!

Devils Cry Revealed: ಮಗುವಿನ ಕೋಣೆಯಲ್ಲಿ ಕೇಳುತ್ತಿತ್ತು ದೆವ್ವದ ಸದ್ದು – ಭ್ರಮೆ ಎಂದ ಹೆತ್ತವರನ್ನೇ ಬೆಚ್ಚಿಬೀಳಿಸಿತು ಸತ್ಯ ಸಂಗತಿ !!

1 comment
Devils Cry Revealed

devils cry revealed: 3 ವರ್ಷದ ಪುಟ್ಟ ಬಾಲಕಿಯೊಬ್ಬಳು ತನ್ನ ಕೋಣೆಯಲ್ಲಿ ದೆವ್ವದ ಸದ್ದು ಕೇಳುತ್ತದೆ, ದೆವ್ವ ಹೆದರಿಸುತ್ತದೆ ಎಂದು ಭಯಭೀತಳಾಗಿದ್ದಳು. ಇದನ್ನು ಆಕೆ ತನ್ನ ಅಪ್ಪ ಅಮ್ಮನಿಗೂ ಹೇಳಿದ್ದಳು. ಆದರೆ ಇದನ್ನೆಲ್ಲಾ ನಂಬದ ಅವರು ಇದೆಲ್ಲಾ ಮಗಳ ಭ್ರಮೆ ಎಂದು ಸುಮ್ಮನಾಗಿದ್ದರು. ಆದರೆ ಕೊನೆಗೆ ತಿಳಿದ ಸತ್ಯ ಸಂಗತಿಯಿಂದ ಅವರೆಲ್ಲರೂ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: Udupi: ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಸಾವು

ಹೌದು, ಉತ್ತರ ಕೆರೊಲಿನಾದ(Uttara Carolina ) ಷಾರ್ಲೆಟ್ ನಗರದಲ್ಲಿರುವ ಕುಟುಂಬವೊಂದು ತೋಟದ ಮನೆಯಲ್ಲಿ ವಾಸವಾಗಿತ್ತು. ಅವರಿಗೆ ಸೈಲರ್‌(Sylar) ಎಂಬ ಮೂರು ವರ್ಷದ ಮಗಳಿದ್ದಳು. ಅವಳಿಗಾಗಿಯೇ ಒಂದು ಕೋಣೆ ಮಾಡಲಾಗಿತ್ತು. ಆ ಬಾಲಕಿ ತನ್ನ ಕೋಣೆಯ ಗೋಡೆಯಲ್ಲಿ ದೈತ್ಯಾಕಾರದ ದೆವ್ವವಿದೆ ಎಂದೆಲ್ಲ ಮಾತನಾಡುತ್ತಿದ್ದಳು. ತನ್ನ ಕೋಣೆಯಲ್ಲಿ ಭೂತ-ದೆವ್ವಗಳೇ ಶಬ್ಧ ಮಾಡಿದಂತೆನಿಸುತ್ತಿತ್ತು. ಸದಾ ವಿಚಿತ್ರ ಶಬ್ಧ ಕೇಳಿಸುತ್ತಲೇ ಇತ್ತು.

ಇದನ್ನೂ ಓದಿ: Bank Loan: ಪತಿ ರೂ.770 ಕಂತು ಕಟ್ಟದ್ದಕ್ಕೆ ಪತ್ನಿಯನ್ನು ಒತ್ತೆ ಇರಿಸಿದ ಐಡಿಎಫ್‌ಸಿ ಬ್ಯಾಂಕ್‌ ಸಿಬ್ಬಂದಿ

ಇದನ್ನು ಆಕೆ ಅಪ್ಪ ಅಮ್ಮನ ಬಳಿ ಹೇಳಿದಾಗ ಮಗಳು ಯಾವುದೋ ಸಿನಿಮಾ ನೋಡಿ ಹೀಗೆ ಮಾತನಾಡುತ್ತಿದ್ದಾಳೆ, ಇದೆಲ್ಲಾ ಅವಳ ಭ್ರಮೆ ಎಂದು ಆಕೆಗೆ ಏನಾದರೂ ಆಟಿಕೆಗಳನ್ನು ನೀಡಿ ಪುಸಲಾಯಿಸುತ್ತಿದ್ದರು, ಸುಮ್ಮನಾಗಿಸುತ್ತಿದ್ದರು. ಆದರೆ ಕೊನೆಗೆ ಭಯಾನಕ ಸತ್ಯ ಬಯಲಾಗಿದೆ. ಯಾಕೆಂದರೆ ಆ ಕೋಣೆಯಲ್ಲಿ ನಡೆದಿದ್ದೇ ಬೇರೆ.

ಆದೇನೆಂದರೆ ಮನೆಯಲ್ಲಿ ಕೀಟಗಳ ಕಾಟ ಎಂದು ಔಷದಿ ಸಿಂಪಡೆಣೆಗೆ ಸಿಬ್ಬಂದಿಗಳು ಬಂದಾಗ ದೆವ್ವದ ಅಸಲಿಯತ್ತು ಬಯಲಾಗಿದೆ. ಆ ಕೋಣೆಯಲ್ಲಿ ಸಾವಿರಾರು ಜೇನುನೊಣಗಳು ಗೂಡು ಕಟ್ಟಿ ವಾಸವಾಗಿವೆ. ದಿನವಿಡೀ ಈ ಜೇನುನೊಣಗಳು ಝೇಂಕರಿಸುವ ಸದ್ದು ಬಾಲಕಿಯನ್ನು ಭಯಪಡಿಸಿತ್ತು. ಅದನ್ನೇ ಆಕೆ ದೆವ್ವ ಎಂದುಕೊಂಡಿದ್ದಳು. ಇದನ್ನು ಕೇಳಿ ಆಕೆಯ ಅಪ್ಪ ಅಮ್ಮನೇ ಹೌಹಾರಿದ್ದಾರೆ. ಕೊನೆಗೆ ಆ ಸಿಬ್ಬಂದಿಗಳೇ ಜೇನುನೊಣಗಳನ್ನು ರಕ್ಷಿಸಿ ಕೊಂಡೊಯ್ದಿದ್ದಾರೆ.

You may also like

Leave a Comment