Home » Prajwal Revanna Case: ಗನ್ ಪಾಯಿಂಟಲ್ಲೇ ಎಲ್ಲಾ ಕೃತ್ಯ – ಅಶ್ಲೀಲ ವೀಡಿಯೋ ಕುರಿತು ಸಂತ್ರಸ್ತೆ ಆರೋಪ

Prajwal Revanna Case: ಗನ್ ಪಾಯಿಂಟಲ್ಲೇ ಎಲ್ಲಾ ಕೃತ್ಯ – ಅಶ್ಲೀಲ ವೀಡಿಯೋ ಕುರಿತು ಸಂತ್ರಸ್ತೆ ಆರೋಪ

0 comments
Prajwal Revanna Case

Prajwal Revanna Case: 2021ರಿಂದ 2024ರ ನಡುವಣ ಅವಧಿಯಲ್ಲಿ ಸಂಸದರ ವಸತಿ ಕೊಠಡಿಯಲ್ಲಿ ಬಲವಂತದಿಂದ ಲೈಂಗಿಕ ದೌರ್ಜನ್ಯ ಎಸಗಿದ ಪ್ರಜ್ವಲ್ ರೇವಣ್ಣ ಇದನ್ನು ಅವರ ಮೊಬೈಲ್‌ ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ವಿಚಾರವನ್ನು ಹೊರಗಡೆ ಯಾರಿಗಾದರೂ ಹೇಳಿದರೆ ವಿಡಿಯೊ ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ. ಇದರಲ್ಲಿ ನನ್ನ ಮುಖವಿಲ್ಲ, ನಿನ್ನ ಮುಖ ಮಾತ್ರ ಕಾಣುತ್ತಿದೆ. ಹೀಗಾಗಿ, ನಿನ್ನದೇ ಮರ್ಯಾದೆ ಹಾಳಾಗಲಿದೆ ಎಂದು ಹೆದರಿಸುತ್ತಿದ್ದರು.

ಇದನ್ನೂ ಓದಿ: Subramanya: 10 ದಿನಗಳ ಹಿಂದೆ‌ ಮದುವೆಯಾಗಿದ್ದ ಯುವಕ ಸಿಡಿಲು ಬಡಿದು ಸಾವು

ಈ ವಿಡಿಯೊ ಮುಂದಿಟ್ಟುಕೊಂಡು ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜತೆಗೆ, ಪದೇಪದೆ ವಿಡಿಯೊ ಕರೆ ಮಾಡಿ ಬಟ್ಟೆ ಬಿಚ್ಚುವಂತೆ ಪೀಡಿಸಿ ಮಾನಸಿಕ ಹಿಂಸೆ ನೀಡಿದ್ದಾರೆ,” ಎಂದು ಸಂತ್ರಸ್ತೆ ಎಸ್‌ಐಟಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Belthangady: ಫಲಿಸದ ಪ್ರಯತ್ನ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ನಂದಕುಮಾರ್ ವಿಧಿವಶ !

“2021ರಲ್ಲಿ ಕ್ಷೇತ್ರದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೀಟು

ಕೊಡಿಸುವ ವಿಚಾರಕ್ಕೆ ಸಂಸದರ ಅಧಿಕೃತ ವಸತಿ ನಿವಾಸದಲ್ಲಿ ಭೇಟಿಯಾಗಿದ್ದೆ. ಕೊಠಡಿಗೆ ಒಂಟಿಯಾಗಿ ಕರೆದೊಯ್ದ ಪ್ರಜ್ವಲ್, ಬಲವಂತದಿಂದ ಬಟ್ಟೆ ಬಿಚ್ಚಿಸಿದ್ದರು. ಇದಕ್ಕೆ ಒಪ್ಪದೆ ಕಿರುಚಾಡಲು ಪ್ರಯತ್ನಿಸಿದಕ್ಕೆ ನನ್ನ ಬಳಿ ಗನ್ ಇದ್ದು, ನಿನ್ನ ಹಾಗೂ ನಿನ್ನ ಗಂಡನನ್ನು ಮುಗಿಸುತ್ತೇನೆ ಎಂದು ಹೆದರಿಸಿದ್ದರು. ನಿನ್ನ ಗಂಡನಿಂದ ನನ್ನ ತಾಯಿಗೆ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೈತಪ್ಪಿ ಹೋಯಿತು. ನಿನ್ನ ಗಂಡ ರಾಜಕೀಯವಾಗಿ ಬೆಳೆಯಬೇಕಾದರೆ ನಾನು ಹೇಳಿದಂತೆ ಕೇಳಬೇಕು. ಅವನನ್ನು ಸಹ ಕೊಲ್ಲುತ್ತೇನೆ ಎಂದು ಪದೇಪದೆ ಬೆದರಿಕೆ ಹಾಕುತ್ತಿದ್ದರು” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

“ಆರೋಪಿ ಪ್ರಜ್ವಲ್ ಹಾಕಿದ್ದ ಜೀವ ಬೆದರಿಕೆ ಹಾಗೂ ಬ್ಲ್ಯಾಕ್‌ಮೇಲ್‌ಗೆ ಹೆದರಿ ದೂರು ನೀಡಿರಲಿಲ್ಲ. ಆದರೆ, ತನಿಖೆಗೆ ಎಸ್‌ಐಟಿ ರಚನೆ ಆಗಿರುವ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದೇನೆ,” ಎಂದು ಸಂತ್ರಸ್ತೆ ವಿವರಿಸಿದ್ದಾರೆ.

You may also like

Leave a Comment