Home » Bomb Blast: ವಿವಾಹಿತ ಮಹಿಳೆಯ ಮನೆಗೆ ಪಾರ್ಸೆಲ್ ಬಾಂಬ್ ಕಳುಹಿಸಿದ ಮಾಜಿ ಪ್ರಿಯಕರ : ಬಾಂಬ್ ಸಿಡಿದು ಪತಿ-ಮಗಳು ಬಲಿ

Bomb Blast: ವಿವಾಹಿತ ಮಹಿಳೆಯ ಮನೆಗೆ ಪಾರ್ಸೆಲ್ ಬಾಂಬ್ ಕಳುಹಿಸಿದ ಮಾಜಿ ಪ್ರಿಯಕರ : ಬಾಂಬ್ ಸಿಡಿದು ಪತಿ-ಮಗಳು ಬಲಿ

0 comments

Bomb Blast: ಗುಜರಾತಿನಲ್ಲಿ ಗುರುವಾರ ನಡೆದ ಪಾರ್ಸೆಲ್ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗಳು ಮೃತಪಟ್ಟ ಘಟನೆಯಲ್ಲಿ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಮೃತರ ಪತ್ನಿಯ ಮಾಜಿ ಪ್ರಿಯಕರ ಆಕೆಯ ಮನೆಗೆ ಬಾಂಬ್ ಪಾರ್ಸೆಲ್ ಮಾಡಿದ್ದನ್ನು ಪೊಲೀಸರು ಇದೀಗ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Mangaluru: ಮಂಗಳೂರು; ವಿದ್ಯಾರ್ಥಿಗಳ ಗಲಾಟೆ- ಸಿಕ್ಕ ಸಿಕ್ಕ ವಸ್ತುಗಳಿಂದ ರಸ್ತೆಯಲ್ಲಿ ಬಡಿದಾಟ-ವಿಡಿಯೋ ವೈರಲ್‌

ಪೊಲೀಸರ ಪ್ರಕಾರ, ಜೀತುಭಾಯಿ ಹೀರಾಭಾಯಿ ವಂಜಾರ್ (32) ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಡಾಲಿಯಲ್ಲಿ ವಾಸಿಸುತ್ತಿದ್ದ. ಗುರುವಾರ, ಅವರು ತಮ್ಮ ಮನೆಗೆ ಪಾರ್ಸಲ್ ಬಂದಿದೆ. ವಂಜಾರ್ ಪಾರ್ಸಲ್ ಓಪನ್ ಮಾಡಿದ್ದು ಅದರಲ್ಲಿದ್ದ ಟೇಪ್ ರೆಕಾರ್ಡರ್ ಸ್ವಿಚ್ ಆನ್ ಮಾಡಿದ ತಕ್ಷಣ ಭಾರೀ ಸ್ಪೋಟ ಸಂಭವಿಸಿದ್ದು, ಜೀತುಭಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರ ಪುತ್ರಿ ಭೂಮಿಕಾ (12) ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾಳೆ.

ಇದನ್ನೂ ಓದಿ: Kadaba: ಔತಣಕೂಟದಲ್ಲಿ ಯುವಕ-ಯುವತಿ ಜತೆಗಿರುವ ಫೋಟೋ ತೆಗೆದ ಆರೋಪ- ಹಲ್ಲೆ, ಪ್ರಕರಣ ದಾಖಲು

ಜೀತುಬಾಯಿ ಅವರ ಇತರ ಇಬ್ಬರು ಪುತ್ರಿಯರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸಮಯದಲ್ಲಿ ಮೃತನ ಪತ್ನಿ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ಹಿಂದೆ ವಿವಾಹಿತೆಯ ಮಾಜಿ ಗೆಳೆಯ ಜಯಂತಿಭಾಯಿ ಬಾಲುಸಿಂಗ್ ವಂಜಾರ್ ಕೈವಾಡ ಇದೆ ಎಂದು ಎಂದು ಪೊಲೀಸರು ಗುರುತಿಸಿದ್ದಾರೆ. ಆರೋಪಿಯು ತನ್ನ ಪ್ರಿಯತಮೆ ಬೇರೆಯವನು ಮದುವೆಯಾಗುವುದನ್ನು ಸಹಿಸಲಾಗದೆ ಆಕೆಯನ್ನು ಕೊಲ್ಲಲು ಬಾಂಬ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನಕ್ಕೆ ಹೋಗಿ ಈ ಬಾಂಬ್‌ಗೆ ಬೇಕಾದ ಸಾಮಗ್ರಿಗಳನ್ನು ಪಡೆದುಕೊಂಡಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ. ಟೇಪ್ ರೆಕಾರ್ಡರ್ ಬಾಂಬ್ ಅನ್ನು ಜಿಲೆಟಿನ್ ಕಡ್ಡಿಗಳು ಮತ್ತು ಸ್ವಿಚ್ ಆನ್ ಮಾಡಿದಾಗ ಸ್ಪೋಟಿಸಲು ಡಿಟೋನೇಟರ್ ಬಳಸಿ ತಯಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಈ ಪಾರ್ಸೆಲ್ ಬಾಂಬ್ ತಂದ ರಿಕ್ಷಾವನ್ನು ಪೊಲೀಸರು ಗುರುತಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

You may also like

Leave a Comment