Home » Mangalore: ಮಂಗಳೂರು ಅರ್ಚಕ ಆತ್ಮಹತ್ಯೆ: ದೇವಸ್ಥಾನದ ಬಾಗಿಲು ತೆರೆಯದ ಹಿನ್ನೆಲೆ ಹುಡುಕಾಡಿದಾಗ ಘಟನೆ ಬೆಳಕಿಗೆ !

Mangalore: ಮಂಗಳೂರು ಅರ್ಚಕ ಆತ್ಮಹತ್ಯೆ: ದೇವಸ್ಥಾನದ ಬಾಗಿಲು ತೆರೆಯದ ಹಿನ್ನೆಲೆ ಹುಡುಕಾಡಿದಾಗ ಘಟನೆ ಬೆಳಕಿಗೆ !

by ಹೊಸಕನ್ನಡ
0 comments
Mangalore

Mangalore: ಅರ್ಚಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ವಿಜಯ್ ಭಟ್ ಎಂಬವರು ದೇವಸ್ಥಾನದ ಹಿಂಭಾಗದಲ್ಲಿ ತಾನು ವಾಸವಾಗಿದ್ದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 29 ವರ್ಷ ಪ್ರಾಯದ ಶಿರಸಿ ಮೂಲದ ವಿಜಯ ಭಟ್ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅಲ್ಲದೇ ಅವರಿಗೆ ಮೂರು ತಿಂಗಳ ಮಗು ಕೂಡ ಇದ್ದು, ಅವರು ತಮ್ಮ ರೂಮಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ದೇವಸ್ಥಾನಕ್ಕೆ ಎಂದಿನಂತೆ ಭಕ್ತರು ಪೂಜೆಗಾಗಿ ಬಂದಾಗ ಅರ್ಚಕರು ಮಾತ್ರ ಬಂದಿರಲಿಲ್ಲ. ಕ್ಷೇತ್ರಕ್ಕೆ ಬಂದ ಭಕ್ತರು ಕಾದು ಕೊನೆಗೆ ಅರ್ಚಕರನ್ನು ಕರೆಯಲು ಅವರ ರೂಮಿನ ಬಳಿ ಹೋದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಈಗ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Prajwal Revanna: ದುಬೈ ನಿಂದ ಮಂಗಳೂರಿಗೆ ಪ್ರಜ್ವಲ್ ಆಗಮನ – ಬಂಧಿಸಲು ರೆಡಿಯಾದ SIT !!

You may also like

Leave a Comment