Grandma feed alcohol to infant: ಅಜ್ಜಿಯೊಬ್ಬರು ಹಸುಳೆ ಮಗುವಿಗೆ ಕುಡಿಯುವ ಹಾಲಿನಲ್ಲಿ ಆಲ್ಕೋಹಾಲ್ (Grandma feed alcohol to infant) ಬೆರೆಸಿರುವ ಘಟನೆ ನಡೆದಿದೆ. ಕೇವಲ ನಾಲ್ಕು ತಿಂಗಳ ಮಗು ಹಾಲಿನ ಜತೆ ಆಲ್ಕೋಹಾಲ್ ಸೇವಿಸಿ ಇದೀಗ ಕೋಮಾಗೆ ಜಾರಿದೆ.
ನಾಲ್ಕು ತಿಂಗಳ ಹಾಲು ಕುಡಿಯುವ ಮಗುವಿಗೆ ಹಾಲು ಕುಡಿಸಲು ಅಜ್ಜಿ ಹೊರಟಿದ್ದು, ಆಕೆ ತಪ್ಪಾಗಿ ಹಾಲಿನ ಪುಡಿಗೆ ನೀರು ಬೆರೆಸುವ.ಬದಲು ತಪ್ಪಾಗಿ ಆಲ್ಕೋಹಾಲ್ ಬೆರೆಸಿದ್ದಾಳೆ. ಬಣ್ಣದ ಬಾಟಲಿಯಲ್ಲಿ ನೀರಿನ ಬದಲು ವೈನ್ ಇದ್ದು ಅಜ್ಜಿ ಅದನ್ನೇ ನೀರೆಂದು ಭಾವಿಸಿದ್ದಾಳೆ. ಹಾಲಿನ ಪುಡಿಯೊಂದಿಗೆ ವೈನ್ ಮಿಶ್ರ ಮಾಡಿ ಮಗುವಿಗೆ ಕುಳಿತಿದ ನಂತರ ಸ್ವಲ್ಪ ಹೊತ್ತಿನಲ್ಲಿ ಮಗು ಅಳಲು ಆರಂಭಿಸಿದೆ. ಅಜ್ಜಿಗೆ ಅನುಮಾನ ಬಂದು ತಾನು ಕುಡಿಸಿದ ಹಾಲಿನ ವಾಸನೆಯನ್ನು ತೆಗೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಆಲ್ಕೋಹಾಲ್ ಮಿಶ್ರಣ ಹಾಕಿರುವುದು ಆಕೆಯ ಗಮನಕ್ಕೆ ಬಂದಿದೆ. ಇದರಿಂದ ಆಘಾತಕ್ಕೊಳಗಾದ ಅಜ್ಜಿ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಘಟನೆ ದಕ್ಷಿಣ ಇಟಲಿಯ ಬ್ರಿಂಡಿಸಿಯ ಫ್ರಾಂಕಾವಿಲ್ಲಾ ಫೊಂಟಾನಾದಲ್ಲಿ ಸಂಭವಿಸಿದೆ.
ಕೋಮಾದಲ್ಲಿ ಮಗು
ಆಸ್ಪತ್ರೆಯ ಸಾಗಿಸುಸುವಷ್ಟರಲ್ಲಿ ಅದಾಗಲೇ ಮಗುವಿನ ದೇಹದ ಮೇಲೆ ಆಲ್ಕೋಹಾಲ್ ಪರಿಣಾಮ ಉಂಟು ಮಾಡಿತ್ತು. ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಗು ಮೊದಲು ನಿದ್ರೆಗೆ ಮತ್ತು ಆ ನಂತರ ಕೋಮಾಗೆ ಜಾರಿತ್ತು. ಈಗ ವೈದ್ಯರ ನಿರಂತರ ಚಿಕಿತ್ಸೆ ನಂತರ ಮಗು ಚೇತರಿಸಿಕೊಂಡಿದ್ದು, ಮಗುವನ್ನು ಪೀಡಿಯಾಟ್ರಿಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿ ಮಗುವಿನ ಹೊಟ್ಟೆಯಲ್ಲಿದ್ದ ಎಲ್ಲಾ ಪದಾರ್ಥಗಳನ್ನು ಹೀರಿ ಹಾಕಲಾಗಿದೆ. ಸದ್ಯಕ್ಕೆ ಮಗುವಿನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿಗೆ ಬೇಜವಾಬ್ದಾರಿಯಿಂದ ಆಲ್ಕೋಹಾಲ್ ಬೆರೆಸಿದ ಅಜ್ಜಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಲು ಹೊರಟಿದ್ದಾರೆ.
ಇದನ್ನೂ ಓದಿ: Karwar: ಗಂಡನ ಜತೆ ಕ್ಷುಲ್ಲಕ ಜಗಳ: ಕೋಪದಲ್ಲಿ ಮೊಸಳೆ ಇದ್ದ ನಾಲೆಗೆ ಮಗು ಎಸೆದ ತಾಯಿ !
