Home » Bantwala: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

Bantwala: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

0 comments
Bantwala

Mangaluru: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವಿಗೀಡಾದ ಘಟನೆಯೊಂದು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ನಿನ್ನೆ (ರವಿವಾರ) ಸಂಜೆ ನಡೆದಿದೆ.

ಇದನ್ನೂ ಓದಿ: ED Raid: ಸಚಿವರ ಆಪ್ತ ಕಾರ್ಯದರ್ಶಿಯ ಸೇವಕನ ಮನೆಯಲ್ಲಿ ಬೆಟ್ಟದಷ್ಟು ಹಣ ಪತ್ತೆ; ಬೆಚ್ಚಿಬಿದ್ದ ಅಧಿಕಾರಿಗಳು

ಅಶ್ರಾ (11 ವರ್ಷ), ಮರಿಯಮ್‌ ನಾಶಿಯಾ(14ವರ್ಷ) ಮೃತ ಬಾಲಕಿಯರು. ನಾವೂರ ನಿವಾಸಿಯಾದ ಇಲ್ಯಾಸ್‌ ಅವರು ಇತ್ತೀಚೆಗೆ ಉಳ್ಳಾಲದಲ್ಲಿ ಮನೆ ಕಟ್ಟಿದ್ದು, ರವಿವಾರ ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆಂದು ಹೋಗಿದ್ದರು. ಸಂಜೆ ಸಮಯದಲ್ಲಿ ಮನೆಯವರ ಜೊತೆಗೆ ನಾವೂರದ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿದ್ದು, ಮನೆಯವರ ಮುಂದೆಯೇ ಮಕ್ಕಳು ನೀರಿನಲ್ಲಿ ಆಟ ಆಡುತ್ತಾ ಇದ್ದರು.

ಇದನ್ನೂ ಓದಿ: Prajwal Revanna: ಅಪಹೃತ ಮಹಿಳೆಯಿಂದ ಇಂದು ಅಥವಾ ನಾಳೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು; ಹೆಚ್ಚಿತು ಪ್ರಜ್ವಲ್‌ ಸಂಕಷ್ಟ

ಮನೆಯವರ ಮುಂದೆಯೇ ಈ ಎರಡು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ಮಕ್ಕಳು ನೀರಿನಲ್ಲಿ ಮುಳುಗುವುದನ್ನು ಕಂಡು ಈಜು ಬಾರದ ಕಾರಣ ಮಕ್ಕಳ ರಕ್ಷಣೆ ಮಾಡಲು ಆಗಲಿಲ್ಲ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.

You may also like

Leave a Comment