Home » Live In Relation: ಇನ್ಮುಂದೆ ಮುಸ್ಲಿಮರಿಗೆ ಲಿವ್‌ ಇನ್ ರಿಲೇಶನ್‌ಶಿಪ್‌ನ ಹೊಸ ಕಾನೂನು ಜಾರಿ; ಹೈಕೋರ್ಟ್ ಮಹತ್ವದ ತೀರ್ಪು!

Live In Relation: ಇನ್ಮುಂದೆ ಮುಸ್ಲಿಮರಿಗೆ ಲಿವ್‌ ಇನ್ ರಿಲೇಶನ್‌ಶಿಪ್‌ನ ಹೊಸ ಕಾನೂನು ಜಾರಿ; ಹೈಕೋರ್ಟ್ ಮಹತ್ವದ ತೀರ್ಪು!

1,213 comments
Live In Relation

Live In Relation: ಸಮಾಜದಲ್ಲಿ ಶಾಂತಿ ಕಾಪಾಡಲು ಮತ್ತು ಸಾಮಾಜಿಕ ರಚನೆಯನ್ನು ಕಾಪಾಡಿಕೊಳ್ಳಲು ಮುಸ್ಲಿಂ ವ್ಯಕ್ತಿಗೆ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇರಲು ಕೋರ್ಟ್ ಮತ್ತು ಅವರ ಇಸ್ಲಾಂ ಧರ್ಮದಲ್ಲಿ ಸಮ್ಮತಿ ಇಲ್ಲ. ಹೌದು, ಅಲಹಾಬಾದ್ ಹೈಕೋರ್ಟ್ (Allahabad High Court) ಆದೇಶದ ಪ್ರಕಾರ ಇಸ್ಲಾಂ ಧರ್ಮವನ್ನು ಪಾಲಿಸುವ ಯಾವುದೇ ಮುಸ್ಲಿಂ ಪುರುಷನು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ (Live In Relationship) ವಾಸಿಸುವ ಹಕ್ಕನ್ನು ಇಲ್ಲ , ಇಂತಹ ಸಂಬಂಧಗಳಿಗೆ ಇಸ್ಲಾಂ (Islam) ಅವಕಾಶವನ್ನೂ ನೀಡುವುದಿಲ್ಲ ಎಂದು ಆದೇಶ ನೀಡಿದೆ.

ಇದನ್ನೂ ಓದಿ: Puttur: ಮದುವೆ ಸಮಾರಂಭದಲ್ಲಿ ಕರೆಯೋಲೆ ಇಲ್ಲದೆ ಎಂಟ್ರಿ ನೀಡಿದ ವ್ಯಕ್ತಿಗಳು; ಹುಡುಗಿಯರ ಫೋಟೋ ಕ್ಲಿಕ್‌; ಬಿತ್ತು ಧರ್ಮದೇಟು

ಈಗಾಗಲೇ ವಿವಾಹ ಆಗಿರುವ ಮುಸ್ಲಿಂ ವ್ಯಕ್ತಿಯೊಬ್ಬ ಮೊಹಮ್ಮದ್ ಶಾದಾಬ್ ಖಾನ್ ಮತ್ತು ಸ್ನೇಹಾ ದೇವಿ ಎಂಬಿಬ್ಬರು ‘ಲಿವ್‌ ಇನ್‌ ರಿಲೇಶನ್‌ಶಿಪ್‌’ನಲ್ಲಿರುವಾಗ ಭದ್ರತೆ ಒದಗಿಸುವಂತೆ ಅರ್ಜಿಯಲ್ಲಿ ಇಬ್ಬರೂ ಕೋರಿದ್ದರು. ಈ ಪ್ರಕರಣದ ವಿಚಾರಣೆಯ ವೇಳೆ ಅರ್ಜಿದಾರ ಮೊಹಮ್ಮದ್ ಶಾದಾಬ್ ಖಾನ್ 2020 ರಲ್ಲಿ ಫರೀದಾ ಖಾತೂನ್ ಅವರನ್ನು ವಿವಾಹವಾಗಿದ್ದಾನೆ. ಅಲ್ಲದೇ ಆ ದಂಪತಿಗೆ ಮಗಳು ಕೂಡ ಇದ್ದಾಳೆ ಎಂಬುದು ನ್ಯಾಯಾಲಯದ ಮುಂದೆ ಬೆಳಕಿಗೆ ಬಂದಿತು.

ಇದನ್ನೂ ಓದಿ: Pune: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಯುವತಿಯ ಬೆತ್ತಲೆ ವೀಡಿಯೋ ಮಾಡಿ ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ

ಕೋರ್ಟ್ ವಿಚಾರಣೆ ಸಮಯದಲ್ಲಿ ಅರ್ಜಿದಾರರು ತಾವು ವಯಸ್ಕರಾಗಿದ್ದು, ತಮ್ಮ ಸ್ವಂತ ಇಚ್ಛೆಯ ‘ಲಿವ್-ಇನ್ ಸಂಬಂಧ’ದಲ್ಲಿ ವಾಸಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದರು. ಅದಲ್ಲದೆ ಯುವತಿಯ ಸಹೋದರ ಬಹ್ರೈಚ್‌ನ ವಿಶೇಶ್ವರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಅಪಹರಣದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್‌ಐಆರ್ ಅನ್ನು ಪ್ರಶ್ನಿಸಿ ಅರ್ಜಿದಾರರ ಶಾಂತಿಯುತ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ಆದೇಶ ಹೊರಡಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ಪ್ರಸ್ತುತ ನ್ಯಾಯಾಲಯವು ಪ್ರಕರಣದ ಸತ್ಯಗಳನ್ನು ಪರಿಗಣಿಸಿದ ನಂತರ, ಸಂವಿಧಾನದ 21ನೇ ವಿಧಿಯು ಪದ್ಧತಿಗಳು ಮತ್ತು ಆಚರಣೆಯು ವ್ಯಕ್ತಿಗಳು ಯಾವುದೇ ಕಾರ್ಯವನ್ನು ಮಾಡುವುದನ್ನು ನಿಷೇಧಿಸುವ ಸಂದರ್ಭಗಳಲ್ಲಿ ರಕ್ಷಣೆಯ ಹಕ್ಕನ್ನು ನೀಡುವುದಿಲ್ಲ. ಏಕೆಂದರೆ ಸಂವಿಧಾನದ 13 ನೇ ವಿಧಿಯು ಪದ್ಧತಿ ಮತ್ತು ಸಂಪ್ರದಾಯಗಳನ್ನು ಸಹ ಗುರುತಿಸುತ್ತದೆ. ಇನ್ನು ವಿವಾಹಿತ ಮುಸ್ಲಿಂ ವ್ಯಕ್ತಿಗೆ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇರಲು ಇಸ್ಲಾಂ ಅನುಮತಿಸುವುದಿಲ್ಲವಾದ್ದರಿಂದ ಅರ್ಜಿದಾರರಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಜೀವಿಸುವಾಗ ಯಾವುದೇ ಭದ್ರತೆಯ ಹಕ್ಕು ಇರುವುದಿಲ್ಲ, ಅದರಲ್ಲೂ ಆತ ಸಂಗಾತಿಯನ್ನು ಹೊಂದಿರುವಾಗ ಲಿವಿಂಗ್ ರಿಲೇಷನ್‌ಗೆ ಅವಕಾಶವೇ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಹೇಳಿದೆ.

You may also like

Leave a Comment