Home » Millionaires: ಅಬ್ಬಬ್ಬಾ ವಿಶ್ವದಲ್ಲೇ ನಂ.1 ಕೋಟ್ಯಧಿಪತಿಗಳು ನಮ್ಮ ರಾಜ್ಯದಲ್ಲೇ ಇದ್ದಾರೆ ಅಂದ್ರೆ ನೀವ್ 100% ನಂಬಲೇ ಬೇಕು!

Millionaires: ಅಬ್ಬಬ್ಬಾ ವಿಶ್ವದಲ್ಲೇ ನಂ.1 ಕೋಟ್ಯಧಿಪತಿಗಳು ನಮ್ಮ ರಾಜ್ಯದಲ್ಲೇ ಇದ್ದಾರೆ ಅಂದ್ರೆ ನೀವ್ 100% ನಂಬಲೇ ಬೇಕು!

0 comments
Millionaires

Millionaires: ಸಂಪತ್ತು ಕೂಡಿಟ್ಟು ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ವಿಶ್ವದಲ್ಲೇ ನಂ.1 ಕೋಟ್ಯಧಿಪತಿಗಳು (Millionaires) ನಮ್ಮ ರಾಜ್ಯದಲ್ಲೇ ಇದ್ದಾರೆ ಅಂದ್ರೆ ನೀವ್ 100% ನಂಬಲೇ ಬೇಕು! ಮಾಹಿತಿ ಪ್ರಕಾರ ಈಗಾಗಲೇ ಕಳೆದ 10 ವರ್ಷದಲ್ಲಿ ಬೆಂಗಳೂರಿನಲ್ಲಿ ಕೋಟ್ಯಧೀಶರ ಸಂಖ್ಯೆ ದುಪಟ್ಟಾಗಿದೆ ಎಂದು ಎಚ್ ಆ್ಯಂಡ್ ಪಿ ಕಂಪನಿ ಹೇಳಿದೆ.

ಇದನ್ನೂ ಓದಿ: Google Pay: ನೀವು ಗೂಗಲ್ ಪೇ ಬಳಸುತ್ತೀರಾ? ಹಾಗಾದ್ರೆ ನಿಮಗಾಗಿ ಇಲ್ಲಿದೆ ಸೂಪರ್ ಅವಕಾಶ!

ವಿಪ್ರೋ ಹಾಗೂ ಇನ್ಫೋಸಿಸ್‌ನಂತಹ ಕಂಪನಿಗಳ ತವರು ಆಗಿರುವ ಬೆಂಗಳೂರು ಸಂಪತ್ತು ದುಪ್ಪಟ್ಟು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಇನ್ನು ಬೆಂಗಳೂರಿನ ಜತೆ ವಿಯೆಟ್ನಾಂನ ಹೊಚಿಮಿನ್ ಹಾಗೂ ಸ್ಕಾಟ್ಸ್‌ಡೇಲ್, ಅಮೆರಿಕದ ಅರಿಜೋನಾ ಸ್ಥಾನ ಪಡೆದಿವೆ.

ಇದನ್ನೂ ಓದಿ: K.Vasanth Bangera: ಹುಟ್ಟೂರಿಗೆ ಬಂದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ಪ್ರಸ್ತುತ ಅಮೆರಿಕ ಮೂಲದ ಹಾಆ್ಯಂಡ್ ಪಾರ್ಟ್‌ನರ್ಸ್ ಸಂಸ್ಥೆಯು ವಿಶ್ವದ ಟಾಪ್-10 ಕೋಟ್ಯಧೀಶರ ನಗರಗಳ ಪಟ್ಟಿ ಹಾಗೂ ಸಂಪತ್ತು ಹೆಚ್ಚಳದಲ್ಲಿ ಮುಂಚೂಣಿಯಲ್ಲಿರುವ ನಗರಗಳ ಪಟ್ಟಿಯನ್ನು ಪ್ರಕಟಿಸಿದ್ದು, ಟಾಪ್-10 ಕೋಟ್ಯಧೀಶರ ನಗರಗಳ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್ ವಿಶ್ವದಲ್ಲೇ ಮೊದಲ ಸ್ಥಾನ ಗಳಿಸಿದೆ. ಅಂತೆಯೇ ಕಳೆದ 10 ವರ್ಷದಲ್ಲಿ ಕೋಟ್ಯಧೀಶರ ಸಂಖ್ಯೆ ದುಪ್ಪಟ್ಟು ಆದ ನಗರಗಳ ಪೈಕಿ ಜಗತ್ತಿನಲ್ಲೇ ಬೆಂಗಳೂರು ಮೊದಲ ಸ್ಥಾನ ಗಳಿಸಿದೆ.

ಸರಿ ಸುಮಾರು 10 ಲಕ್ಷ ಡಾಲರ್ (8 ಕೋಟಿ ರು.) ಅಥವಾ ಅದಕ್ಕಿಂತ ಹೆಚ್ಚಿನ ಸಂಪತ್ತು ಗಳಿಸಿದವರು ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದಾರೆ. ಇನ್ನು ವಿಶ್ವದ ಟಾಪ್-10 ಕೋಟ್ಯಧೀಶ ನಗರಗಳ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿರುವ ನ್ಯೂಯಾರ್ಕ್ ನಂತರ ಟೋಕಿಯೋ, ಅಮೆರಿಕದ ದ ಬೇ ಏರಿಯಾ, ಲಂಡನ್, ಸಿಂಗಾಪುರ, ಲಾಸ್ ಏಂಜಲೀಸ್, ಹಾಂಕಾಂಗ್, ಬೀಜಿಂಗ್, ಶಾಂಫ್ಟ್, ಸಿಡ್ನಿ ಸ್ಥಾನ ಪಡೆದಿವೆ.

You may also like

Leave a Comment