Home » Kareena Kapoor Khan: ಕರೀನಾ ಕಪೂರ್ ಗೆ ಮುಳ್ಳಾದ “ಪ್ರೆಗ್ನೆನ್ಸಿ ಬೈಬಲ್” ಪುಸ್ತಕ : ಕರೀನಾಗೆ ಹೈಕೋರ್ಟ್ ನಿಂದ ನೋಟಿಸ್ ಜಾರಿ

Kareena Kapoor Khan: ಕರೀನಾ ಕಪೂರ್ ಗೆ ಮುಳ್ಳಾದ “ಪ್ರೆಗ್ನೆನ್ಸಿ ಬೈಬಲ್” ಪುಸ್ತಕ : ಕರೀನಾಗೆ ಹೈಕೋರ್ಟ್ ನಿಂದ ನೋಟಿಸ್ ಜಾರಿ

2 comments
Kareena Kapoor Khan

Kareena Kapoor Khan: ಬಾಲಿವುಡ್ ಬ್ಯೂಟಿ ಕ್ವೀನ್ ನಟಿ ಕರೀನಾ ಕಪೂರ್ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ಇದೀಗ ನೋಟಿಸ್‌ ಜಾರಿ ಮಾಡಿದೆ. ಇದ್ದಕ್ಕಿದ್ದಂತೆ ಕರೀನಾ ಕಪೂರ್ ಮೇಲೆ ಈ ರೀತಿ ನೋಟಿಸ್ ಬರೋದಕ್ಕೆ ಕಾರಣ ಏನು ಗೊತ್ತಾ? ಬನ್ನಿ ತಿಳಿಯೋಣ.

‘ಕರೀನಾ ಕಪೂರ್(Kareena Kapoor)ಅವರು ಇತ್ತೀಚೆಗೆ ಪ್ರೆಗ್ನೆನ್ಸಿಯ ಕುರಿತಾಗಿ “ಪ್ರೆಗ್ನೆನ್ಸಿ ಬೈಬಲ್”(Pregnancy Bible) ಎಂಬ ಪುಸ್ತಕ ಬರೆದಿದ್ದರು. ಆದರೆ ಈ ಪುಸ್ತಕದ ಕುರಿತಂತೆ ನಟಿ ಕರೀನಾ ವಿರುದ್ಧ ಲಾಯರ್ ಒಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲ್ಲಿಸಿದ್ದಾರೆ. ಈ ಅರ್ಜಿ ಸಲ್ಲಿಸುವ ಮುಖ್ಯ ಕಾರಣ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್‌” ಎಂಬ ಪದವನ್ನು ತಪ್ಪಾಗಿ ಬಳಸಿದ್ದಕ್ಕಾಗಿ ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣ ಸಂಬಂಧ ಕರೀನಾ ಕಪೂರ್‌ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕರೀನಾ ಕಪೂರ್ ವಿರುದ್ಧ ಪ್ರಕರಣ ದಾಖಲಿಸುವಂತೆ ವಕೀಲ ಕ್ರಿಸ್ಟೋಫರ್ ಆಂಥೋನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Sperms: ವೀರ್ಯ ಸೇವನೆಯಿಂದ ಹೀಗೆಲ್ಲಾ ಆಗುತ್ತಾ?

ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್”ಎಂಬ ಪದವನ್ನು ಏಕೆ ಬಳಸಲಾಗಿದೆ ಎಂದು ನ್ಯಾಯಾಲಯ ಕರೀನಾ ಅವರನ್ನು ಪ್ರಶ್ನಿಸಿದೆ. ವಾದ ಮುಂ ದುವರಿಸಿದ ವಕೀಲ ಆಂಟನಿ ಪುಸ್ತಕವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದು ಈ ಹಿನ್ನೆಲೆಯಲ್ಲಿ” ಆ ಪುಸ್ತಕ ಮಾರಾಟಗಾರರಿಗೂ ನ್ಯಾಯಾಲಯನೋಟಿಸ್ ಜಾರಿ ಮಾಡಿದೆ.

ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್” ಪದವನ್ನು ಬಳಸುವುದರಿಂದ ಕ್ರಿಶ್ಚಿಯನ್ಸ್‌ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆಂಟನಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಕ್ರಿಶ್ಚಿಯನ್ನರಿಗೆ ಬೈಬಲ್ ಅತ್ಯಂತ ಪವಿತ್ರ ಗ್ರಂಥವಾಗಿದ್ದು, ಕರೀನಾ ಕಪೂರ್‌ ತನ್ನ ಗರ್ಭಾವಸ್ಥೆಯನ್ನು ಬೈಬಲ್‌ನೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ನಟಿ ಕರೀನಾ ತಮ್ಮ ಪುಸ್ತಕದ ಪ್ರಚಾರಕ್ಕಾಗಿ ಈ ಪದವನ್ನು ಬಳಸಿದ್ದಾರೆ ಎಂದು ಅಂಟನಿ ಆರೋಪಿಸಿದ್ದಾರೆ. ಈ ಪುಸ್ತಕವನ್ನು 2021 ರಲ್ಲಿ ಪ್ರಕಟಿಸಲಾಗಿತ್ತು.

ಇದನ್ನೂ ಓದಿ: Gastrointestinal Disease: ಕರುಳು ಸಂಬಂಧಿ ರೋಗ ತೀವ್ರ ಹೆಚ್ಚಳ: ಆರೋಗ್ಯ ಇಲಾಖೆಯಿಂದ ರಾಜ್ಯದಲ್ಲಿ ವಿಶೇಷ ಕ್ರಮ ಜಾರಿ!

You may also like

Leave a Comment