Viral news: ಮಧ್ಯಾರಾತ್ರಿ ಅಂದರೆ ಯಾರಿಗೇ ಆದರೂ ಒಂದು ಸಣ್ಣ ಶಬ್ದ ಆದರೂ ನಿದ್ದೆಯಲ್ಲಿದ್ದರು ಎದ್ದು ಕೂರುತ್ತಾರೆ. ಯಾಕಂದ್ರೆ ಮಧ್ಯ ರಾತ್ರಿಯ ಸಣ್ಣ ಸಣ್ಣ ಸದ್ದು ಸಹ ಭಯಕ್ಕೆ ಕಾರಣವಾಗುತ್ತದೆ. ಅಂತೆಯೇ ಇಲ್ಲೊಂದು ಮಹಿಳೆ ತನ್ನ ಮನೆಯಲ್ಲಿ ಮಧ್ಯ ರಾತ್ರಿ ತಮಗಾದ ಒಂದು ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Urfi Javed: ಅಯ್ಯೋ ಟಾಪ್‌ಲೆಸ್, ಬ್ಯಾಕ್ ಲೆಸ್ ಎಲ್ಲಾ ಆಯ್ತು! ಇದ್ಯಾವ ನೀಲಿ ಬಿಕಿನಿ! ಜಸ್ಟ್ ಇಲ್ಲೊಮ್ಮೆ ತಿರುಗಿ ನೋಡಿ!
ಹೌದು, ದೆಹಲಿಯ ಮಹಿಳೆಯೊಬ್ಬರು ರಾತ್ರಿ ತಮಗಾದ ಅನುಭವವನ್ನು ರೆಡಿಟ್ಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮಹಿಳೆ ಸಹ ಒಂದು ದಿನ ಮಧ್ಯ ರಾತ್ರಿ ಯಲ್ಲಿ ವಿಚಿತ್ರ ಸದ್ದಿಗೆ ಹೆದರಿದ್ದರು. ಭಯಕ್ಕೆ ನಿದ್ದೆ ಬಾರದೆ ಇದ್ದ ಕಾರಣ ಪತಿಯನ್ನು ಕೂಡಾ ಎಬ್ಬಿಸಿದ್ದರು. ಆನಂತರ ಪತಿಯ ಬಳಿ ಏನದು ಶಬ್ದ, ಕಳ್ಳರು ಬಂದಿರಬಹುದೇ, ಅಥವಾ ದೆವ್ವ ಗಳ ಕಾಟವೇ ಎಂದು ಅನುಮಾನ ಪಟ್ಟರು. ನಂತರ ಅಡುಗೆಮನೆಯಿಂದ ಬರುತ್ತಿರೋ ಧ್ವನಿ ಎಂಬುದನ್ನು ಖಚಿತಪಡಿಸಿಕೊಂಡು ಭಯದಿಂದಲೇ ಅತ್ತ ಮೆಲ್ಲನೇ ಹೆಜ್ಜೆ ಇಟ್ಟರು.

ಇದನ್ನೂ ಓದಿ: Body Hairs Turns White: ನಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಕೂದಲು ಮೊದಲು ಬೆಳ್ಳಗಾಗುತ್ತದೆ?
ವಿಚಿತ್ರ ಅಂದರೆ ಅಲ್ಲಿ ಹೋಗಿ ನೋಡಿದಾಗ ಆ ಧ್ವನಿ ಏನು ಎಂದು ಅಂತ ಅಡುಗೆಮನೆಯಲ್ಲಿ ಹುಡುಕಿದಾಗ, ಅಡುಗೆಮನೆಯೊಳಗೆ ಹಾಕಿದ್ದ ಎಕ್ಸಾಸ್ಟ್ ಫ್ಯಾನ್ನಲ್ಲಿ ಬೆಕ್ಕು ಸಿಲುಕಿರೋದು ಇಬ್ಬರ ಗಮನಕ್ಕೆ ಬಂದಿದೆ. ನಂತರ ಅಲ್ಲಿಂದ ಬೆಕ್ಕನ್ನು ಹೊರಗೆ ತರಲು ದಂಪತಿ ಹರ ಸಾಹಸ ಪಟ್ಟರಾದರೂ ಕೊನೆಗೆ ಬೆಕ್ಕಿಗೆ ಮೀನಿನ ತುಂಡುಗಳನ್ನು ನೀಡಿದ್ದು, ಮೀನಿನ ಆಸೆಗೆ ಬೆಕ್ಕು ಹೊರಗೆ ಬಂದಿದೆ.

ಸದ್ಯ ಬೆಕ್ಕು ಎಕ್ಸಾಸ್ಟ್ ಫ್ಯಾನ್ ನಲ್ಲಿ ಸಿಲುಕಿರೋ ಫೋಟೋಗಳನ್ನು ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಂತರ ಅದು ಸುರಕ್ಷಿತವಾಗಿ ಹೊರಗೆ ಬಂದಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆ ಬೆಕ್ಕು ಇನ್ಮುಂದೆ ನಮ್ಮ ಮನೆಯಲ್ಲಿರಲಿದೆ ಎಂದು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಸದ್ಯ ಬೆಕ್ಕನ್ನು ಕಾಪಾಡಿದ ಮಹಿಳೆಗೆ ಆತ್ಮ ತೃಪ್ತಿಯೊಂದಿಗೆ, ಆಕೆಗೆ ಸಾವಿರಾರು ಪಾಸಿಟಿವ್ ಕಾಮೆಂಟ್ ಗಳು ಬಂದಿವೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ (Viral news) ಆಗಿದೆ.
