Home » Belthangady: ಆಸ್ಪತ್ರೆಯಿಂದ ಬಂದ ಪರಿಚಯಸ್ತನಿಗೆ ಪ್ರೀತಿಯಿಂದ ಹೊಡೆದ ವೈದ್ಯಾಧಿಕಾರಿ – ಸ್ಥಳದಲ್ಲೇ ಸಾವನಪ್ಪಿದ ವ್ಯಕ್ತಿ !!

Belthangady: ಆಸ್ಪತ್ರೆಯಿಂದ ಬಂದ ಪರಿಚಯಸ್ತನಿಗೆ ಪ್ರೀತಿಯಿಂದ ಹೊಡೆದ ವೈದ್ಯಾಧಿಕಾರಿ – ಸ್ಥಳದಲ್ಲೇ ಸಾವನಪ್ಪಿದ ವ್ಯಕ್ತಿ !!

1 comment
Belthangady

Belthangady: ಪಶು ವೈದ್ಯಾಧಿಕಾರಿಯೊಬ್ಬರು ತನ್ನ ಪರಿಚಯಸ್ಥರಾದ ವ್ಯಕ್ತಿ ಗುಣಮುಖರಾಗದೆ ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ‌ ಬಂದುದಕ್ಕೆ ವಿಚಾರಸಿ ಪ್ರೀತಿಯಿಂದ ಹೊಡೆದಿದ್ದಾರೆ. ಆದರೆ ಹೊಡೆದ ರಭಸಕ್ಕೆ ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Stomach Pain: ಹೊಟ್ಟೆ ನೋವು ಅಂತ ನರಳಬೇಡಿ, ಈ ಸೂಪರ್ ಫುಡ್ ಗಳನ್ನು ಟ್ರೈ ಮಾಡಿ

ಹೌದು, ದ.ಕ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಕೊಕ್ಕಡ ಗ್ರಾಮದ ಜೋಡುಮಾರ್ಗ ಸರ್ಕಲ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತಪಟ್ಟ ವ್ಯಕ್ತಿ ಕೊಕ್ಕಡ(Kokkada) ಗ್ರಾಮದ ನಿವಾಸಿ ಕೃಷ್ಣ ಯಾನೆ ಕಿಟ್ಟ (58). ಮೃತ ಕೃಷ್ಣ ಅವರ ಪತ್ನಿ ಭಾರತಿ ಪಶು ವೈದ್ಯಾಧಿಕಾರಿ ಮೇಲೆ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಆರೋಪಿ ಪಶು ವೈದ್ಯರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Eyebrow Shape: ಹುಬ್ಬುಗಳ ಮೂಲಕ ವ್ಯಕ್ತಿತ್ವ ತಿಳಿದುಕೊಳ್ಳಿ; ಈ ಮೂಲಕ ನೀವು ಒಳ್ಳೆಯ ವ್ಯಕ್ತಿಯನ್ನು ಗುರುತಿಸಿ

ಏನಿದು ಘಟನೆ?:

ವಿಪರೀತ ಜ್ವರವಿದ್ದ ಹಿನ್ನೆಲೆಯಲ್ಲಿ ಕೃಷ್ಣ ಅವರು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು‌‌. ಚೇತರಿಕೆಯಾದ ಬಳಿಕ ಕೊಕ್ಕಡಕ್ಕೆ ವಾಪಸ್ ಆಗಿದ್ದರು. ಈ ವೇಳೆ ಅವರಿಗೆ ಆಪ್ತರಾಗಿದ್ದ ಪಶು ವೈದ್ಯಾಧಿಕಾರಿ ಡಾ‌.ಕುಮಾರ್ ಸಿಕ್ಕಿದ್ದಾರೆ‌. ಅವರು ಕೃಷ್ಣರೊಂದಿಗೆ ಮಾತನಾಡುತ್ತ ಇಷ್ಟು ಬೇಗ ಯಾಕೆ ಡಿಸ್ಚಾರ್ಜ್ ಆಗಿ‌ ಬಂದೆ. ಆರೋಗ್ಯ ಸುಧಾರಿಸುವವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿತ್ತು ಎಂದು ಬುದ್ಧಿ ಮಾತು ಹೇಳಿ ಒಂದು ಏಟು ಹೊಡೆದಿದ್ದಾರೆ ಎನ್ನಲಾಗಿದೆ. ಹೊಡೆದ ರಭಸಕ್ಕೆ ಕೃಷ್ಣ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

You may also like

Leave a Comment