Home » Dakshina Kannada: ಸುಬ್ರಹ್ಮಣ್ಯ : ತೋಟದಲ್ಲಿ ಕಟ್ಟಿದ್ದ ಕರುವನ್ನು ಬಿಡಿಸಲು ಹೋದ ಮಹಿಳೆಯ ಮೇಲೆ ಮರ ಬಿದ್ದು ಮೃತ್ಯು

Dakshina Kannada: ಸುಬ್ರಹ್ಮಣ್ಯ : ತೋಟದಲ್ಲಿ ಕಟ್ಟಿದ್ದ ಕರುವನ್ನು ಬಿಡಿಸಲು ಹೋದ ಮಹಿಳೆಯ ಮೇಲೆ ಮರ ಬಿದ್ದು ಮೃತ್ಯು

by Praveen Chennavara
0 comments

Dakshina Kannada: ಸುಬ್ರಹ್ಮಣ್ಯ : ಗಾಳಿ ಮಳೆಗೆ ತೋಟದಲ್ಲಿ ಕಟ್ಟಿದ್ದ ಕರುವನ್ನು ಬಿಡಿಸಲು ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ಮರಬಿದ್ದು ಮಹಿಳೆ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿ ನಡೆದಿದೆ.

ಕುಲ್ಕುಂದ ಬಸವನಮೂಲೆ ದಿ. ಶೇಷಪ್ಪ ಗೌಡ ಅವರ ಪತ್ನಿ ಮೀನಾಕ್ಷಿ (67) ಎಂಬ ಮಹಿಳೆ ಮೇಲೆ ಮರ ಬಿದ್ದು ಸಾವನಪ್ಪಿದ್ದವರು.

ಸ್ಥಳಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ,ಕಂದಾಯ ಅಧಿಕಾರಿ, ಸುಬ್ರಹ್ಮಣ್ಯ ಪೊಲೀಸ್‌ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

You may also like

Leave a Comment