Home » Anushka Shetty: ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್! ಅಷ್ಟಕ್ಕೂ ಆಕೆ ಕೈ ಹಿಡಿಯೋ ಹುಡುಗ ಕನ್ನಡ ನಿರ್ಮಾಪಕರಂತೆ!

Anushka Shetty: ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್! ಅಷ್ಟಕ್ಕೂ ಆಕೆ ಕೈ ಹಿಡಿಯೋ ಹುಡುಗ ಕನ್ನಡ ನಿರ್ಮಾಪಕರಂತೆ!

1 comment
Anushka Shetty

Anushka Shetty: ಮಂಗಳೂರಿನ ಚೆಲುವೆ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಅನುಷ್ಕಾ ಶೆಟ್ಟಿಗೆ (Anushka Shetty) ಈಗಾಗಲೇ 42 ವರ್ಷವಾದ್ರೂ ಇನ್ನು ಮದುವೆಯಾಗಿಲ್ಲ. ಹಾಗಾಗಿ ಅನುಷ್ಕಾ ಶೆಟ್ಟಿ ಯಾವಾಗ ಮದುವೆ ಆಗ್ತಾರೆ ಎಂದು ಎಲ್ಲರ ಪ್ರಶ್ನೆ. ಇದೀಗ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿಯೊಂದು ವೈರಲ್ ಆಗ್ತಿದೆ.

ಇದನ್ನೂ ಓದಿ: Husband – wife: ಮದುವೆ ಸಂಭ್ರಮದಲ್ಲಿ ಮಗುವನ್ನು ಕಾರಿನಲ್ಲೇ ಮರೆತ ದಂಪತಿ: ಮುಂದಾಗಿದ್ದು ದೊಡ್ಡ ಅನಾಹುತ !

ಈ ಮೊದಲು ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಬಾಹುಬಲಿ ಸಿನಿಮಾ ಮಾಡಿದ ಬಳಿಕ ಇಬ್ಬರ ನಡುವೆ ಪ್ರೀತಿ ಮೂಡಿದೆ ಎನ್ನುವ ಸುದ್ದಿ ಹರಡಿತ್ತು . ಇಷ್ಟು ದಿನಗಳ ಕಾಲ ನಟಿ ಅನುಷ್ಕಾ ಶೆಟ್ಟಿ ಹೆಸರು ಬಾಹುಬಲಿ ನಟ ಪ್ರಭಾಸ್ ಜೊತೆ ಕೇಳಿ ಬರುತ್ತಿತ್ತು. ಆದ್ರೆ ಇದೀಗ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: Chikkamagaluru: ಬೇಟೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡೇಟು ತಗುಲಿ ಯುವಕ ಸಾವು

ಹೌದು, ಶೀಘ್ರದಲ್ಲೇ ಅನುಷ್ಕಾ ಶೆಟ್ಟಿ ಹಸೆಮಣೆ ಏರಲಿದ್ದಾರೆ. ಟಾಲಿವುಡ್ ಅಂಗಳದಲ್ಲಿ, ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ ನಡೆಯಲಿದೆ ಎಂಬ ಸುದ್ದಿ ಹರಡಿದೆ. ಅಷ್ಟೇ ಅಲ್ಲದೇ ಶೀಘ್ರದಲ್ಲೇ ನಿರ್ಮಾಪಕನ ಜೊತೆ ಅನುಷ್ಕಾ ನಿಶ್ಚಿತಾರ್ಥ ಕೂಡ ನಡೆಯಲಿದೆ ಎನ್ನಲಾಗ್ತಿದೆ.

ಆದ್ರೆ ಅನುಷ್ಕಾ ಮದುವೆ ಸುದ್ದಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಅನುಷ್ಕಾ ಶೆಟ್ಟಿ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಈ ವರ್ಷಾಂತ್ಯದಲ್ಲಿ ಅನುಷ್ಕಾ ಮದುವೆ ನಡೆಯಲಿದೆಯಂತೆ.

ಅನುಷ್ಕಾ ಶೆಟ್ಟಿ ‘ಅಕ್ಕಿನೇನಿ ನಾಗಾರ್ಜುನ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಅದರ ನಂತರ, ಅವರು ತಮ್ಮ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರನ್ನು ಮನಗೆದ್ದು, ಸಾಲು ಸಾಲು ಆಫರ್ಗಳನ್ನು ಪಡೆದರು. ಟಾಪ್ ನಟರ ಜೊತೆ ನಟಿಸಿ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಬಹಳ ದಿನಗಳಿಂದ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದ ಅನುಷ್ಕಾ ಶೆಟ್ಟಿ ಇತ್ತೀಚಿಗೆ ಸ್ವಲ್ಪ ಸ್ಲೋ ಆಗಿದ್ದಾರೆ. ಯಾಕೆಂದರೆ ಆಕೆ ಮದುವೆಗೆ ರೆಡಿಯಾಗಿದ್ದಾಳೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ.

You may also like

Leave a Comment