Home » Illicit Relationship: ಪತ್ನಿಯ ಶೀಲದ ಮೇಲೆ ಶಂಕೆ : ಮೊಳೆಗಳಿಂದ ಗುಪ್ತಾಂಗಕ್ಕೆ ಹೊಡೆದು, ಹಿತ್ತಾಳೆಯ ಬೀಗ ಹಾಕಿ ಚಿತ್ರಹಿಂಸೆ ನೀಡಿದ ರಕ್ಕಸ ಪತಿ

Illicit Relationship: ಪತ್ನಿಯ ಶೀಲದ ಮೇಲೆ ಶಂಕೆ : ಮೊಳೆಗಳಿಂದ ಗುಪ್ತಾಂಗಕ್ಕೆ ಹೊಡೆದು, ಹಿತ್ತಾಳೆಯ ಬೀಗ ಹಾಕಿ ಚಿತ್ರಹಿಂಸೆ ನೀಡಿದ ರಕ್ಕಸ ಪತಿ

2 comments
Rape

Illicit Relationship: ವಿವಾಹೇತರ ಸಂಬಂಧ ಶಂಕಿಸಿ, ತನ್ನ ಹೆಂಡತಿಯ ಖಾಸಗಿ ಭಾಗಗಳಿಗೆ(women private part) ಕಬ್ಬಿಣದ ಮೊಳೆಗಳಿಂದ ಹೊಡೆದು, ಅವುಗಳ ಮೇಲೆ ಬೀಗವನ್ನು ಹಾಕಿ ಚಿತ್ರ ಹಿಂಸೆ ನೀಡಿದ ನರರೂಪ ರಕ್ಕಸ ಪತಿಯನ್ನು ಪೋಲಿಸರು ಮಹಾರಾಷ್ಟ್ರದ(Maharashtra ) ಪಿಂಪ್ರಿ-ಚಿಂಚ್ ವಾಡ್ ನಲ್ಲಿ ಬಂಧಿಸಿದ್ದಾರೆ.

ಮಹಿಳೆ(Women) ಐದು ದಿನಗಳ ಕಾಲ ಈ ಚಿತ್ರಹಿಂಸೆಯನ್ನು ಸಹಿಸಿಕೊಂಡಿದ್ದು, ಕೊನೆಗೆ ನೋವು ತಾಳಲಾರದೆ ತನ್ನ ಅತ್ತಿಗೆಗೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ನಂತರ ಆಕೆಯನ್ನು ಸ್ಥಳೀಯರ ಸಹಾಯದಿಂದ ಚಿಕಿತ್ಸೆಗಾಗಿ ಮುನ್ಸಿಪಲ್‌ ಆಸ್ಪತ್ರೆಗೆ(Municipal Hospital) ದಾಖಲಿಸಿ, ಆಕೆಯ ದೇಹದಿಂದ ಬೀಗ ಮತ್ತು ಮೊಳೆಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಮೇ 11ರಂದು ಆರಂಭವಾದ ಈ ಅಮಾನವೀಯ ಕೃತ್ಯ ಮೇ 16ರಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯನ್ನು ವಕಾಡ್ ಪೊಲೀಸರು(Police) ಬಂಧಿಸಿದ್ದಾರೆ.

ಪತಿ(30) ಪತ್ನಿ(28) ಇಬ್ಬರು ನೇಪಾಳ(Nepal) ಮೂಲದವರಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಅವರು ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ವಾಸಿಸುತ್ತಿದ್ದರು. ದುಷ್ಕರ್ಮಿ ಪತಿ ವಕಾಡ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.

ಪೊಲೀಸರ (police) ಪ್ರಕಾರ, ಆರೋಪಿ ವಿವಾಹೇತರ ಸಂಬಂಧವನ್ನು ಶಂಕಿಸಿ ಸಂತ್ರಸ್ತೆಗೆ ಪದೇ ಪದೇ ತಿಳಿಸಿದ್ದಾನೆ. ಮೇ 11ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಆಕೆಯ ಕೈಕಾಲುಗಳನ್ನು ಸ್ಕಾರ್ಫ್‌ನಿಂದ ಕಟ್ಟಿ ಥಳಿಸಿದ್ದು, ನಂತರ ರೇಜರ್ ಬ್ಲಡ್ ನಿಂದ ಆಕೆಯ ಖಾಸಗಿ ಅಂಗಗಳನ್ನು ಸೀಳಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ಈ ರೀತಿ ಅಮಾನುಷವಾಗಿ ಮಾಡುತ್ತಿದ್ದಾಗ ಕಬ್ಬಿಣದ ಮೊಳೆಗಳನ್ನು ತೆಗೆದುಕೊಂಡು ಪತ್ನಿಯ ಖಾಸಗಿ ಅಂಗಗಳಿಗೆ ಎರಡೂ ಕಡೆ ಚುಚ್ಚಿದ್ದಾನೆ. ಬಳಿಕ ಹಿತ್ತಾಳೆಯ ಬೀಗ ಹಾಕಿ ಕೀಯನ್ನು ಹೊರಗೆ ಎಸೆದಿದ್ದಾನೆ ಎಂದು ತಿಳಿಸಿದ್ದಾರೆ.

ಚಿತ್ರಹಿಂಸೆಗೊಳಗಾದ ಮಹಿಳೆ( Torcherd woman) ಐದು ದಿನಗಳ ಕಾಲ ನೋವನ್ನು ಸಹಿಸಿಕೊಂಡಿದ್ದಾಳೆ. ಆದರೆ, ನೋವು ತಾಳಲಾರದೆ ಪ್ರಜ್ಞೆ ತಪ್ಪುವಂತಾದಾಗ, ಕೊನೆಗೆ ಅತ್ತಿಗೆಗೆ ಕರೆ ಮಾಡಿ ನಡೆದ ಘಟನೆಯನ್ನೆಲ್ಲಾ ಹೇಳಿದ್ದಾಳೆ. ನಂತರ ಚಿಂಚವಾಡಗಾಂವ್‌ನಲ್ಲಿರುವ ಸಂತ್ರಸ್ತೆಯ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಕುಟುಂಬಸ್ಥರು ಕುಟುಂಬಸ್ಥರು ಆಕೆಗೆ ನೆರವಾಗಿದ್ದಾರೆ.

ಸಂತ್ರಸ್ತೆಯ ಸಂಬಂಧಿಕರು ಮತ್ತು ಇತರ ಸಂಬಂಧಿಕರು ವಾಕಾಡ್‌ಗೆ ಆಗಮಿಸಿ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಯಶವಂತರಾವ್‌ ಚವಾಣ್ ಸ್ಮಾರಕ ಆಸ್ಪತ್ರೆಗೆ (ವೈಸಿಎಂಹೆಚ್) ದಾಖಲಿಸಿದ್ದಾರೆ. ಈ ಅಮಾನವೀಯ ಕೃತ್ಯದಿಂದ ಬೆಚ್ಚಿಬಿದ್ದ ಆಸ್ಪತ್ರೆಯ ವೈದ್ಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಿಂದ(Hospital)ವರದಿ ಸ್ವೀಕರಿಸಿದ ಹಿಂಜೆವಾಡಿ ಪೊಲೀಸರು ಕ್ಷಿಪ್ರವಾಗಿ ಸ್ಪಂದಿಸಿದ್ದು, ವೈದ್ಯರಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು(Police) ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ವಾಕಾಡ್‌ ಪೊಲೀಸರಿಗೆ ಒಪ್ಪಿಸಿದ್ದಾರೆ.

ವೈಸಿಎಂಎಚ್‌ನ ವೈದ್ಯರು(Doctor)ನಗರದ ಹಿರಿಯ ವೈದ್ಯರನ್ನು ಸಂಪರ್ಕಿಸಿ ಶುಕ್ರವಾರ ಮಧ್ಯಾಹ್ನ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ದೇಹದಿಂದ ಬೀಗ ಮತ್ತು ಮೊಳೆಗಳನ್ನು ತೆಗೆದುಹಾಕಿದರು. ಸದ್ಯ ಆಕೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ(ICU)ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇದನ್ನೂ ಓದಿ: ‘ಮೋದಿಗೆ ಕನ್ನಡ ಬರುತ್ತಾ? ಮೊದಲು ನೋಡ್ಕೊಳಿ’ ಎಂದ ಮಧು ಬಂಗಾರಪ್ಪ

ದಂಪತಿಯ ಮೂವರು ಮಕ್ಕಳನ್ನು ಮಹಿಳೆಯ ಸಂಬಂಧಿಕರ ಆರೈಕೆಯಲ್ಲಿ ಇರಿಸಲಾಗಿದ್ದು, ಪತಿಯನ್ನು ಪೊಲೀಸ್ ಕಸ್ಟಡಿಗೆ(Police Custadi) ತೆಗೆದುಕೊಳ್ಳಲಾಗಿದೆ. ಘಟನೆ ಕುರಿತು ವಾಕಾಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಕಾಡ್ ಪೊಲೀಸ್‌ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್‌( Police inspector) ಕೊಲ್ಲಟ್ಕರ್ ಪ್ರಕರಣ ಕುರಿತು ಮಾತನಾಡಿ, “ಈ ಘಟನೆಯು ಮೇ 11 ರಂದು ವಕಾಡ್‌ ಪ್ರದೇಶದಲ್ಲಿ ಸಂಭವಿಸಿದೆ. ಮೇ 16 ರಂದು ಪತ್ನಿ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ನಂತರ ಸಂಪೂರ್ಣ ಘಟನೆ ಬೆಳಕಿಗೆ ಬಂದಿದ್ದು, ಪತಿಯನ್ನು ಬಂಧಿಸಲಾಗಿದೆ(Arrested) ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Sullia : ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಸಿಬಂದಿಗೆ ಗಾಯ

You may also like

Leave a Comment