Home » Cleaning Tips: ನೀರಿನ ಟ್ಯಾಂಕ್​ ಕೊಳಕಾಗಿದ್ರೆ ಟೆನ್ಷನ್ ಬೇಡ! ಕ್ಲೀನ್ ಮಾಡಲು ಇಲ್ಲಿದೆ ಸುಲಭ ಉಪಾಯ!

Cleaning Tips: ನೀರಿನ ಟ್ಯಾಂಕ್​ ಕೊಳಕಾಗಿದ್ರೆ ಟೆನ್ಷನ್ ಬೇಡ! ಕ್ಲೀನ್ ಮಾಡಲು ಇಲ್ಲಿದೆ ಸುಲಭ ಉಪಾಯ!

0 comments
Cleaning Tips

Cleaning Tips: ಪ್ರತೀ ಮನೆಯಲ್ಲಿ ನೀರನ್ನು ಸಂಗ್ರಹಿಸಿಡುವ ಉದ್ದೇಶದಿಂದ ವಾಟರ್ ಟ್ಯಾಂಕ್ ಅನ್ನು ಮನೆಯ ಟೇರಸ್ ಮೇಲೆ ಇಟ್ಟಿರುತ್ತಾರೆ. ಇನ್ನು ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಕೊರತೆ ಎದುರಾಗೋದು ಮಾಮೂಲು. ಸದ್ಯ ನೀರಿಲ್ಲದ ಸಮಯದಲ್ಲಿ ವಾಟರ್ ಟ್ಯಾಂಕ್ ಬಹಳಷ್ಟು ಸಹಕಾರಿಯಾಗುತ್ತದೆ.

ಆದರೆ ವಾಟರ್ ಟ್ಯಾಂಕ್ ನೀರು ಶುದ್ಧವಾಗಿದ್ದರೂ ಅದನ್ನು ಸಂಗ್ರಹಿಸುವ ಟ್ಯಾಂಕ್ ಶುದ್ಧವಾಗಿಲ್ಲದಿದ್ದರೆ, ಅದರಿಂದ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ವರ್ಷಕ್ಕೊಮ್ಮೆಯಾದರೂ ಸೋಂಕು ನಿವಾರಕವನ್ನು ಅಥವಾ ಬ್ಲೀಚಿಂಗ್ ಪೌಡರ್ ಬಳಸಿ ಸರಿಯಾದ ರೀತಿಯಲ್ಲಿ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿದರೆ ಸುರಕ್ಷಿತವಾಗಿ ನೀರನ್ನು ಕುಡಿಯಬಹುದು. ಆದರೆ ಎಷ್ಟೋ ಮಂದಿ ಟ್ಯಾಂಕ್ ಸ್ವಚ್ಛಗೊಳಿಸಲು ಹರಸಾಹಸ ಪಡುತ್ತಾರೆ. ಆದರೆ ಇಲ್ಲಿ ಟ್ಯಾಂಕ್ (water Tank)ಕ್ಲೀನ್ ಮಾಡುವ (Cleaning Tips) ಸುಲಭ ವಿಧಾನ ತಿಳಿಸಲಾಗಿದೆ.

ಟ್ಯಾಂಕ್ನಲ್ಲಿರುವ ನೀರನ್ನು ಮೊದಲು ಸಂಪೂರ್ಣವಾಗಿ ಖಾಲಿ ಮಾಡಿ. ನಂತರ ಕೆಳಗೆ ಉಳಿದಿರುವ ನೀರನ್ನು ಮಗ್ನಿಂದ ಹಿಡಿದು ಹೊರಗೆ ಚೆಲ್ಲುವ ಮೂಲಕ ಖಾಲಿ ಮಾಡಿ. ನೀರು ಖಾಲಿ ಮಾಡಿದ ನಂತರ ಟ್ಯಾಂಕ್ನ ಒಳಭಾಗವನ್ನು ಒಣ ಬಟ್ಟೆಯಿಂದ ಸಂಪೂರ್ಣವಾಗಿ ಒರೆಸಿ. ಇನ್ನು ಟ್ಯಾಂಕ್ನ ಗಾತ್ರ ಚಿಕ್ಕದಾಗಿದ್ದರೆ ಅದನ್ನು ತಲೆಕೆಳಗಾಗಿ ಹಾಕಿದರೆ ನೀರು ಸಂಪೂರ್ಣವಾಗಿ ಖಾಲಿಯಾಗುತ್ತದೆ. ನಂತರ ಟ್ಯಾಂಕ್ ಒಣಗಲು ಸ್ವಲ್ಪ ಸಮಯದವರೆಗೆ ಮುಚ್ಚಳ ಹಾಕಿ ಬಿಡಿ.

ಟ್ಯಾಂಕ್ನ ಗಾತ್ರಕ್ಕೆ ಅನುಗುಣವಾಗಿ ಬಿಸಿ ನೀರು ಅಥವಾ ಡಿಟರ್ಜೆಂಟ್ ಪುಡಿಯಿಂದ ಸ್ವಚ್ಛಗೊಳಿಸಬಹುದು. ಮೊದಲು ಲಿಕ್ವಿಡ್ ಡಿಟರ್ಜೆಂಟ್ನಲ್ಲಿ ನೈಲಾನ್ ಬ್ರಷ್ ಅಥವಾ ಸ್ಪಂಜಿನೊಂದಿಗೆ ಟ್ಯಾಂಕ್ನ ಒಳಭಾಗವನ್ನು ಚೆನ್ನಾಗಿ ಸ್ಕ್ರಬ್ ಮಾಡಿ. ಬ್ರಷ್ನಿಂದ ಅಡ್ಡಲಾಗಿ ಚೆನ್ನಾಗಿ ಉಜ್ಜಿ.

ಡಿಟರ್ಜೆಂಟ್ ನೀರಿನಿಂದ ಟ್ಯಾಂಕ್ನ ಗೋಡೆಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ, ಟ್ಯಾಂಕ್ನ ಗೋಡೆಗಳ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ ಮತ್ತು ಬ್ರಷ್ನಿಂದ ಸ್ಕ್ರಬ್ ಮಾಡಿ. ಈ ಮೂಲಕ ಟ್ಯಾಂಕ್ ಅನ್ನು ಚೆನ್ನಾಗಿ ಕ್ಲೀನ್ ಮಾಡಬಹುದು.

ಟ್ಯಾಂಕ್ನ ಒಳಗಿನ ಕೊಳೆಯನ್ನು ಟ್ಯಾಪ್ ನೀರಿನಿಂದ ತೊಳೆಯಿರಿ. ಇದರಿಂದ ನಿಮಗೆ ಎಲ್ಲೆಲ್ಲಾ ಕೊಳೆ ಇದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Beauty Tips: ಚಿನ್ನದಂತ ತ್ವಚೆ ಪಡೆಯಲು ಮುಖಕ್ಕೆ ಬಾದಾಮಿಯನ್ನು ಹೀಗೆ ಹಚ್ಚಿದರೆ ಸಾಕು!

ಶುಚಿಗೊಳಿಸಿದ ನಂತರ ಟ್ಯಾಂಕ್ ಅನ್ನು ಕ್ರಿಮಿನಾಶಕಗೊಳಿಸಲು, ಮೊದಲು ಮುಕ್ಕಾಲು ಭಾಗದಷ್ಟು ಶುದ್ಧ ನೀರಿನಿಂದ ತುಂಬಿಸಿ. ನಂತರ ಅದಕ್ಕೆ ಸಾಕಷ್ಟು ಕ್ಲೋರಿನ್ ಬ್ಲೀಚ್ ಸೇರಿಸಿ. ಇದನ್ನು ಹಾಕಲು ನಿರ್ದಿಷ್ಟ ಪ್ರಮಾಣವಿದೆ. 250 ಗ್ಯಾಲನ್ ಟ್ಯಾಂಕ್ಗೆ 4 ಕಪ್ ಬ್ಲೀಚ್, 500 ಗ್ಯಾಲನ್ ಟ್ಯಾಂಕ್ಗೆ ಅರ್ಧ ಗ್ಯಾಲನ್ ಬ್ಲೀಚ್, 750 ಗ್ಯಾಲನ್ ಟ್ಯಾಂಕ್ಗೆ ಕಾಲು ಗ್ಯಾಲನ್ ಬ್ಲೀಚ್, 1000 ಗ್ಯಾಲನ್ ಟ್ಯಾಂಕ್ಗೆ ಒಂದು ಪೂರ್ಣ ಗ್ಯಾಲನ್ ಬ್ಲೀಚ್. ಬ್ಲೀಚ್ ಅನ್ನು ಸುರಿದ ನಂತರ, ಟ್ಯಾಂಕ್ನ ಉಳಿದ ಭಾಗವನ್ನು ನೀರಿನಿಂದ ತುಂಬಿಸಿ, ನಂತರ ಬ್ಲೀಚ್ ಅನ್ನು ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ 24 ಗಂಟೆಗಳ ಕಾಲ ಟ್ಯಾಂಕ್ ಅನ್ನು ಬಿಡಿ. ನಂತರ ಮತ್ತೆ ಮೊದಲು ಮಾಡಿದಂತೆ ನೀರು ಟ್ಯಾಂಕ್ನಿಂದ ಖಾಲಿ ಮಾಡಿ, ಬಟ್ಟೆಯಿಂದ ಒರೆಸಿ, ಮತ್ತೆ ಟ್ಯಾಂಕ್ ಒಣಗಿಸಿ. ಹೀಗೆ ಚೆನ್ನಾಗಿ ಟ್ಯಾಂಕ್ ಒಣಗಿಸಿ ನೀರು ಹಾಕಿದರೆ ವಾಸನೆ ಬರುವುದಿಲ್ಲ. ಅಲ್ಲದೇ ಟ್ಯಾಂಕ್ ಅನ್ನು 7-8 ಗಂಟೆಗಳ ಕಾಲ ಖಾಲಿ ಬಿಡುವುದು ಉತ್ತಮ. ಹೀಗೆ ಮಾಡಿದಲ್ಲಿ ನಿಮ್ಮ ನೀರಿನ ಟ್ಯಾಂಕ್ ನಿಂದ ಯಾವುದೇ ಆರೋಗ್ಯ ತೊಂದರೆ ಇರುವುದಿಲ್ಲ.

ಇದನ್ನೂ ಓದಿ: Chikkamagaluru: ಸ್ನಾನ ಮಾಡಿ, ಬಟ್ಟೆ ಒಣಹಾಕಲೆಂದು ಹಿಂಬದಿ ಬಾಗಿಲು ತೆರೆಯುತ್ತಿದ್ದಂತೆ ಬುಸ್‌ ಎನ್ನುತ್ತಾ ಮನೆಗೆ ನುಗ್ಗಿದ 12 ಅಡಿಯ ಕಾಳಿಂಗ ಸರ್ಪ

You may also like

Leave a Comment