Home » Tulsi Plant: ಈ ಮೂರು ಗಿಡಗಳನ್ನು ತುಳಸಿ ಗಿಡದ ಪಕ್ಕದಲ್ಲಿ ನೆಟ್ಟರೆ ಸಾಕು! ಅದೃಷ್ಟ ನಿಮ್ಮ ಕೈ ಸೇರುತ್ತೆ!

Tulsi Plant: ಈ ಮೂರು ಗಿಡಗಳನ್ನು ತುಳಸಿ ಗಿಡದ ಪಕ್ಕದಲ್ಲಿ ನೆಟ್ಟರೆ ಸಾಕು! ಅದೃಷ್ಟ ನಿಮ್ಮ ಕೈ ಸೇರುತ್ತೆ!

0 comments

Tulsi Plant: ತುಳಸಿ ಗಿಡ ಹಿಂದೂ ಧರ್ಮದ ಪ್ರತೀ ಮನೆಗಳಲ್ಲಿ ಕಾಣಬಹುದು, ಏಕೆಂದರೆ ಇದನ್ನು ಹಿಂದೂಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ. ಸಾಕ್ಷಾತ್​ ಲಕ್ಷ್ಮೀ ಸ್ವರೂಪ ಆಗಿದೆ. ತುಳಸಿ ಎಲೆಯು ವಿಷ್ಣುವಿಗೆ ಅತ್ಯಂತ ಪ್ರಿಯವಾದುದು. ದೇವರಿಗೆ ನೈವೇದ್ಯವನ್ನು ಅರ್ಪಿಸುವಾಗ ಅಥವಾ ನೀರನ್ನು ಅರ್ಪಿಸುವಾಗ ಅದರಲ್ಲಿ ತುಳಸಿ ಎಲೆಯನ್ನು ಇಡುವುದು ಅವಶ್ಯಕ. ತುಳಸಿ ಎಲೆಗಳೊಂದಿಗೆ ದೇವರಿಗೆ ಅರ್ಪಿಸಿದ ಆಹಾರವನ್ನು ದೇವರು ತಕ್ಷಣವೇ ಸ್ವೀಕರಿಸುತ್ತಾನೆ. ಇನ್ನು ತುಳಸಿ ಕಟ್ಟೆಯಿರುವ ಸ್ಥಳ ಪೂಜನೀಯ ಸ್ಥಳವೇ ಸರಿ. ಅದಕ್ಕಾಗಿ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಸದಾಕಾಲ ಇರಬೇಕೆಂದು ನೀವು ಬಯಸಿದರೆ, ತುಳಸಿ ಗಿಡದ ಬಳಿ ಈ ಮೂರು ಗಿಡಗಳಲ್ಲಿ (Tulsi Plant) ಒಂದನ್ನು ನೆಟ್ಟರೆ ಸಾಕು. ಅದೃಷ್ಟ ನಿಮ್ಮ ಕೈ ಸೇರಲಿದೆ.

ಇದನ್ನೂ ಓದಿ: How To Lizard Keep Away: ನಿಮಗೂ ಹಲ್ಲಿಗಳ ಭಯವಿದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ; ಮತ್ತೆ ವಾಪಸ್‌ ಹಲ್ಲಿ ಬರುವುದಿಲ್ಲ

ಚಂಪಾ ಗಿಡ:
ಚಂಪಾ ಹೂವನ್ನು ಹೆಚ್ಚಾಗಿ ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಹಾಗೂ ದೇವಾಲಯದ ಆವರಣವನ್ನು ಶುದ್ಧೀಕರಿಸಲು ಚಂಪಾ ಗಿಡವನ್ನು ನೆಡಲಾಗುತ್ತದೆ. ತುಳಸಿ ಗಿಡದ ಬಳಿ ಚಂಪಾ ಗಿಡ ನೆಟ್ಟರೆ ಅದು ಹೆಚ್ಚು ಸುರಕ್ಷಿತವಾಗಿರುತ್ತದೆ. ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ, ಚಂಪಾ ಗಿಡದ ಬಳಿ ತುಳಸಿ ಗಿಡವನ್ನು ನೆಟ್ಟರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಶಮಿ ಗಿಡ:
ತುಳಸಿ ಗಿಡದ ಬಳಿ ಶಮಿ ಗಿಡವನ್ನು ನೆಡುವುದರಿಂದ ಅದು ನಿಮಗೆ ದುಪ್ಪಟ್ಟು ಲಾಭವನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ. ತುಳಸಿಯೊಂದಿಗೆ ಶಮಿಯನ್ನು ಪೂಜಿಸುವುದರಿಂದ ಶನಿ ದೋಷವು ದೂರಾಗುತ್ತದೆ.

ಬಾಳೆ ಗಿಡ:
ಯಾರ ಮನೆಯ ಅಂಗಳದಲ್ಲಿ ಬಾಳೆಗಿಡವನ್ನು ನೆಟ್ಟಿರುತ್ತಾರೋ, ಅಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ. ತುಳಸಿ ಬಳಿ ಬಾಳೆ ಗಿಡವನ್ನು ನೆಟ್ಟರೆ ತುಳಸಿ ಗಿಡವನ್ನು ರಕ್ಷಿಸುವುದಲ್ಲದೆ ಅದರ ಶಕ್ತಿಯಿಂದ ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದರಿಂದ ಮನೆಯಲ್ಲಿ ಹಣದ ಸಮಸ್ಯೆಗಳು ದೂರವಾಗಿ ಸುಖ ಮತ್ತು ಶಾಂತಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.

ತುಳಸಿ ಗಿಡದ ಬಳಿ ಈ ಮೇಲಿನ 3 ಗಿಡಗಳನ್ನು ನೆಡುವುದರಿಂದ ತುಳಸಿ ಗಿಡ ಚೆನ್ನಾಗಿ ಬೆಳೆಯುವುದು ಮಾತ್ರವಲ್ಲ, ಅದು ನಿಮ್ಮ ಮನೆಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ: ಕರಡಿ ಮಾಂಸ ತಿಂದ ಕುಟುಂಬದ ಸದಸ್ಯರ ಮೆದುಳಿನಲ್ಲಿ ಹುಳ

You may also like

Leave a Comment