Home » Hit & Run: ರಸ್ತೆ ದಾಟುತ್ತಿದ್ದ ವೃದ್ಧರಿಗೆ ಕಾರು ಡಿಕ್ಕಿ; ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ವೃದ್ಧ ಸ್ಥಳದಲ್ಲೇ ಸಾವು

Hit & Run: ರಸ್ತೆ ದಾಟುತ್ತಿದ್ದ ವೃದ್ಧರಿಗೆ ಕಾರು ಡಿಕ್ಕಿ; ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ವೃದ್ಧ ಸ್ಥಳದಲ್ಲೇ ಸಾವು

0 comments
Hit & Run

Hit & Run: ಪುಣೆಯಲ್ಲಿ ನಡೆದ ಪೋರ್ಶೆ ಕಾರು ಅಪಘಾತದ ಪ್ರಕರಣ ಈಗಲೂ ಜನರ ಮನಸ್ಸಿನಿಂದ ಅಳಿಸಿ ಹೋಗಿಲ್ಲ. ಆಗಲೇ ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಮೆ.26 (ಭಾನುವಾರ)ರ ಮುಂಜಾನೆ ನಡೆದಿದೆ.

ದುಬಾರಿ ಆಡಿ ಕಾರೊಂದು ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಹೊಂದಿದ್ದಾರೆ.

ನೋಯ್ಡಾದ ಸೆಕ್ಟರ್‌ 24 ಪ್ರದೇಶದ ಕಾಂಚನಜುಂಗಾ ಅಪಾರ್ಟ್‌ಮೆಂಟ್‌ ಬಳಿ ಬೆಳಗ್ಗೆ 6.30 ಕ್ಕೆ ಜನಕ್‌ ದೇವ್‌ ಶಾ ಎಂಬುವವರು ರಸ್ತೆ ದಾಟುತ್ತಿದ್ದಾಗ ಈ ಭೀಕರ ಘಟನೆ ನಡೆದಿದೆ. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.


ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ. ನೋಯ್ಡಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಿಟಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment