Home » Prajwal Revanna: ವಿಡಿಯೋ ಮೂಲಕ ಪ್ರತ್ಯಕ್ಷ ಆಗಿ ಮೇ 31 ಕ್ಕೆ ಬಂದು ಸೆರೆಂಡರ್ ಆಗುವೆ ಎಂದ ಪ್ರಜ್ವಲ್ ರೇವಣ್ಣ !!

Prajwal Revanna: ವಿಡಿಯೋ ಮೂಲಕ ಪ್ರತ್ಯಕ್ಷ ಆಗಿ ಮೇ 31 ಕ್ಕೆ ಬಂದು ಸೆರೆಂಡರ್ ಆಗುವೆ ಎಂದ ಪ್ರಜ್ವಲ್ ರೇವಣ್ಣ !!

by ಹೊಸಕನ್ನಡ
0 comments

 

Prajwal Revanna: ಅಶ್ಲೀಲ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಕೇಸಿನಲ್ಲಿ ಸಿಲುಕಿ, ದೇಶಾದ್ಯಂತ ಸಂಚಲನ ಸೃಷ್ಟಿಸಿ, ವಿದೇಶಕ್ಕೆ ಹಾರಿದ್ದ, ಯಾರ ಕೈಗೂ ಸಿಗದೆ, ಸಾಕಷ್ಟು ದಿನಗಳಿಂದ ಸತಾಯಿಸುತ್ತಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಕೊನೆಗೂ ಪ್ರತ್ಯಕ್ಷವಾಗಿದ್ದಾರೆ.

 

ಹೌದು, ಪೆನ್ ಡ್ರೈವ್(Pendrive) ಕೇಸ್ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದಲೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ನನ್ನ ತಾತ, ತನ್ನ ಕುಮಾರಣ್ಣ, ನನ್ನ ಕಾರ್ಯಕರ್ತರು, ನನ್ನ ನಾಡಿನ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನಾನು ಮೇ 31 ಶುಕ್ರವಾರ ಭಾರತಕ್ಕೆ ಬಂದು ಸೆರೆಂಡರ್ ಆಗುತ್ತೇನೆ ಎಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಹಾಗಿದ್ದರೆ ಪ್ರಜ್ವಲ್ ಹರಿಬಿಟ್ಟ ಆ ವಿಡಿಯೋದಲ್ಲಿ ಇನ್ನೂ ಏನೇನಿದೆ? ಸಂಸದ ಮಹಾನ್ ಭಾವರು ಹೇಳಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

 

ಪ್ರಜ್ವಲ್ ಹೇಳಿದ್ದೇನು?

ಎಲ್ಲರಿಗೂ ನಮಸ್ಕಾರ ಎಂದು ವಿಡಿಯೋ ಶುರುಮಾಡುವ ಪ್ರಜ್ವಲ್, ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ನನ್ನ ನನ್ನ ತಾತ, ತನ್ನ ಕುಮಾರಣ್ಣ, ನನ್ನ ಕಾರ್ಯಕರ್ತರು, ನನ್ನ ನಾಡಿನ ಜನರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದಾಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ಚುನಾವಣೆ ಮುಗಿದ ಬಳಿಕ ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ವಿದೇಶಕ್ಕೆ ಹೋಗುವಾಗಲೂ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ಅಲ್ಲಿಗೆ ಹೋಗಿ ಒಂದೆರಡು ದಿನ ಆದ ಬಳಿಕ ಯೂಟ್ಯೂಬ್‌ ಹಾಗೂ ನ್ಯೂಸ್‌ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಕೊಂಡೆ. ಇದಾದ ನಂತರ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಬಳಿಕ ಎಸ್‌ಐಟಿ ನೋಟಿಸ್‌ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ಅಲ್ಲದೆ ನಾನು ಫಾರಿನ್‌ನಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಎಸ್‌ಯಟಿ ನೋಟಿಸ್‌ಗೆ ಎಕ್ಸ್‌ ಖಾತೆ ಮತ್ತು ನಮ್ಮ ಲಾಯರ್ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆನು. ಈ ಏಳು ದಿನ ಸಮಯಾವಕಾಶ ಕೇಳಿದ ನಂತರ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ನಾನು ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆನು. ಇದರಿಂದಾಗಿ ನಿಮ್ಮೆಲ್ಲರ ಮುಂದೆ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

 

ಅಲ್ಲದೆ ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಈ ಸುಳ್ಳು ಪ್ರಕರಣದಿಂದ ನಾನು ಹೊರ ಬರುತ್ತೇನೆ. ಬಂದ ಮೇಲೆ ಎಲ್ಲರಿಗೂ ಉತ್ತರ ನೀಡುತ್ತೇನೆ. ಈ ಘಟನೆಯಿಂದ ಯಾರೂ ಕೂಡ ಅನ್ಯಥಾ ಭಾವಿಸುವುದು ಬೇಡ. ನಾನೇ ಸ್ವತಃ ಶುಕ್ರವಾರ ಮೇ 31ರಂದು ಎಸ್‌ಯಟಿ ಮುಂದೆ ಬಂದು ಸಂಪೂರ್ಣವಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ನನ್ನ ಮೇಲೆ ದಾಖಲಾಗಿರುವಂತಹ ಸುಳ್ಳು ಪ್ರಕರಣಗಳಿಂದ ಮುಕ್ತವಾಗಿ ಹೊರಗೆ ಬರುವ ವಿಶ್ವಾಸವಿದೆ. ನನ್ನ ಮೇಲೆ ದೇವರು, ಜನರು ಹಾಗೂ ಕುಟುಂಬದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.

https://youtu.be/0-YTE_WdvLo?si=K6FpS6eRqlyxA0rL

You may also like

Leave a Comment