Home » Mandya: ಓವರ್‌ಟೇಕ್‌ ಗಲಾಟೆ; ಮುಸ್ಲಿಂ ಯುವಕರ ಗುಂಪಿನಿಂದ ಹಿಂದೂ ಯುವಕನಿಗೆ ತೀವ್ರ ಹಲ್ಲೆ

Mandya: ಓವರ್‌ಟೇಕ್‌ ಗಲಾಟೆ; ಮುಸ್ಲಿಂ ಯುವಕರ ಗುಂಪಿನಿಂದ ಹಿಂದೂ ಯುವಕನಿಗೆ ತೀವ್ರ ಹಲ್ಲೆ

2 comments
Mandya

Mandya: ಓವರ್‌ಟೇಕ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಮುಸ್ಲಿಂ ಯುವಕರ ಗುಂಪೊಂದು ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: Panchayat Season 3 Released: ‘ಪಂಚಾಯತ್ ಸೀಸನ್‌ 3’ ಇಂದು ಬಿಡುಗಡೆ; ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?

ಓವರ್‌ಟೇಕ್‌ ಮಾಡಲು ಹೋಗಿ ಬೈಕ್‌ಗೆ ಟಚ್‌ ಆಗಿರುವುದಕ್ಕೆ ಅಭಿಲಾಷ್‌ ಎಂಬಾತ ಮುಸ್ಲಿಂ ಯುವಕರನ್ನು ಪ್ರಶ್ನೆ ಮಾಡಿದ್ದಾರೆ. ಆಮೇಲೆ ಇದೇ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮುಸ್ಲಿಂ ಯುವಕರ ಗುಂಪು ಅಭಿಲಾಷ್‌ ಮೇಲೆ ತೀವ್ರವಾದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅಭಿಲಾಷ್‌ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Congress Guarantees : ಪಂಚ ಗ್ಯಾರಂಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ !!

ಬೆಳ್ಳೂರಿನ ಸಂತೆ ಬೀದಿಯಲ್ಲಿ ಮುಸ್ಲಿಂ ಯುವಕರ ಗುಂಪು ಅತಿವೇಗದಲ್ಲಿ ಕಾರು ಓಡಿಸಿಕೊಂಡು ಹೋಗಿದೆ. ಅಲ್ಲದೆ ಓವರ್‌ಟೇಕ್‌ ಮಾಡುವಾಗ ಬೈಕ್‌ಗೆ ಟಚ್‌ ಆಗಿದೆ. ಇನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್‌ ಹಾಗೂ ಆತನ ಜೊತೆಗಾರ ನಾಗೇಶ್‌ ಎಂಬುವವರು ಪ್ರಶ್ನೆ ಮಾಡಿದ್ದಾರೆ. ಆವಾಗ ಮಾತಿನ ಚಕಮಕಿ ನಡೆದಿದ್ದು, ಅದೇ ದ್ವೇಷದಿಂದ ಮತ್ತೊಮ್ಮೆ ಗುಂಪು ಕಟ್ಟಿಕೊಂಡು ಬಂದು ಅಭಿಲಾಷ್‌ಗೆ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ.

ಇನ್ನೊಂದು ಕಡೆ ಸ್ಥಳೀಯ ಮುಸ್ಲಿಂ ಯುವಕರ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಳ್ಳೂರು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಯರೂ ಸೇರಿ ಪೊಲೀಸ್‌ ಠಾಣೆಯಲ್ಲಿ ಜಮಾವಣೆಗೊಂಡಿದ್ದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

You may also like

Leave a Comment