Home » Kasaragod: ನಾಪತ್ತೆಯಾಗಿದ್ದ ಶಿಕ್ಷಕಿ ಅನ್ಯಕೋಮಿನ ಯುವಕನ ಜೊತೆ ವಿವಾಹವಾಗಿ ಪತ್ತೆ; ಲವ್‌ಜಿಹಾದ್‌ ಆರೋಪ

Kasaragod: ನಾಪತ್ತೆಯಾಗಿದ್ದ ಶಿಕ್ಷಕಿ ಅನ್ಯಕೋಮಿನ ಯುವಕನ ಜೊತೆ ವಿವಾಹವಾಗಿ ಪತ್ತೆ; ಲವ್‌ಜಿಹಾದ್‌ ಆರೋಪ

0 comments
Kasaragod

Kasaragod: ಕಾಸರಗೋಡು ಶಾಲೆಯ ಶಿಕ್ಷಕಿಯೊಬ್ಬರು ಕೆಲ ದಿನಗಳ ಹಿಂದೆ ನಾಪತ್ತೆಯಾಗಿರುವ ಘಟನೆಯೊಂದು ನಡೆದಿತ್ತು. ಇದೀಗ ಶಿಕ್ಷಕಿ ಅನ್ಯಕೋಮಿನ ಯುವಕನ ಜೊತೆ ಪತ್ತೆಯಾಗಿದ್ದಾರೆ. ಈ ಘಟನೆಯಿಂದ ಹಿಂದೂ ಸಂಘಟನೆಗಳು ಇದೊಂದು ಲವ್‌ಜಿಹಾದ್‌ ಘಟನೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: HSRP Number Plate: ಕೆಲವೇ ದಿನಗಳು ಬಾಕಿ; ‘HSRP’ ನಂಬ‌ರ್ ಪ್ಲೇಟ್ ಹಾಕಿಸದಿದ್ರೆ ದಂಡ ಫಿಕ್ಸ್ ! ವಾಹನ ಸವಾರರೇ ಎಚ್ಚರ!

ಶಾಲಾ ಶಿಕ್ಷಕಿ ಮೇ.23 ರಂದು ಮನೆಯಿಂದ ನಾಪತ್ತೆಯಾಗಿದ್ದರು. ಅನಂತರ ಈ ಕುರಿತು ಬದಿಯಡ್ಕ ಠಾಣೆಯಲ್ಲಿ ಯುವತಿಯ ತಂದೆ ದೂರನ್ನು ದಾಖಲು ಮಾಡಿದ್ದರು. ಇದೀಗ ಯುವತಿ ಅನ್ಯಕೋಮಿನ ಯುವಕನ ಜೊತೆ ಪತ್ತೆಯಾಗಿದ್ದು, ಇಬ್ಬರೂ ವಿವಾಹ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Madhyapradesh: ಹೆಂಡತಿ ಜೊತೆ ಜಗಳ; ಕೋಪದಲ್ಲಿ ಕುಟುಂಬದ 8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ವ್ಯಕ್ತಿ

ಇಬ್ಬರ ಭಾವಚಿತ್ರವು ಬದಿಯಡ್ಕ ರಿಜಿಸ್ಟ್ರಾರ್‌ ಆಫೀಸ್‌ನಲ್ಲಿ ಕಾಣಸಿಕ್ಕಿದೆ. ರಿಜಿಸ್ಟ್ರಾರ್‌ ವಿವಾಹವಾಗಿ ಮೇ.27 ರಂದು ಬದಿಯಡ್ಕ ಪೊಲೀಸ್‌ ಠಾಣೆಗೆ ಈ ಜೋಡಿ ಬಂದಿದ್ದಾರೆ.

ಹಿಂದೂ ಪರ ಸಂಘಟನೆಗಳು ಇದೊಂದು ಲವ್‌ ಜಿಹಾದ್‌ ಪ್ರಕರಣ ಎಂದು ಹೇಳಿದ್ದು, ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡುತ್ತಿದೆ.

ರಿಜಿಸ್ಟರ್‌ ಕಚೇರಿಯಲ್ಲಿ ನೇಹಾ ಮತ್ತು ಮಿರ್ಶಾದ್‌ ಮದುವೆಯಾಗಿರುವುದು ತಿಳಿದು ಬಂದಿತ್ತು. ಯುವತಿ ಕಾಸರಗೋಡಿನ ಖಾಸಗಿ ಸಂಸ್ಥೆಯೊಂದರ ಶಿಕ್ಷಕಿ ಎನ್ನಲಾಗಿದೆ. ಪೊಲೀಸರು ಕಾಸರಗೋಡು ನ್ಯಾಯಾಲಯಕ್ಕೆ ಆಕೆಯನ್ನು ಹಾಜರುಪಡಿಸಿದ್ದು, ಸ್ವಇಚ್ಛೆಯಂತೆ ಯುವಕನ ಜೊತೆ ತೆರಳಿದ್ದಾರೆ.

ಈ ಲವ್‌ಜಿಹಾದ್‌ ಪ್ರಕರಣಕ್ಕೆ ಕೇರಳದ ಮುಸ್ಲಿಂ ಲೀಗ್‌ ನೇತಾರನೋರ್ವ ಷಡ್ಯಂತ್ರು ರೂಪಿಸಿದ್ದಾನೆ, ಈ ಮೂಲಕ ಪ್ರೇಮಾಂಕುರವಾಗುವಂತ ಮಾಡಿದ್ದಾನೆ ಎಂದು ವಿಶ್ವಹಿಂದೂ ಪರಿಷತ್‌ ಆರೋಪ ಮಾಡಿದೆ.

You may also like

Leave a Comment