Home » Goa New Rules: ಗೋವಾಕ್ಕೆ ಹೋಗಬೇಕು ಅಂತ ಪ್ಲಾನ್ ಮಾಡಿದ್ದೀರಾ? ಈ ನ್ಯೂ ರೂಲ್ಸ್ ಗಳ ಬಗ್ಗೆ ಎಚ್ಚರವಿರಲಿ!

Goa New Rules: ಗೋವಾಕ್ಕೆ ಹೋಗಬೇಕು ಅಂತ ಪ್ಲಾನ್ ಮಾಡಿದ್ದೀರಾ? ಈ ನ್ಯೂ ರೂಲ್ಸ್ ಗಳ ಬಗ್ಗೆ ಎಚ್ಚರವಿರಲಿ!

1 comment
Goa New Rules

Goa New Rules: ಸಿನಿಮಾದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ಗೋವಾಕ್ಕೆ ಹೋಗಬೇಕು ಅಂತ ಬ್ಯಾಚುಲರ್ಸ್ ಅಂದುಕೊಳ್ಳುವುದು ಸಹಜ. ಕೇರಳದ ಜತೆಗೆ ವಿದೇಶಿ ಪ್ರವಾಸಿಗರೂ ಗೋವಾಕ್ಕೆ ಬರುತ್ತಾರೆ. ಆದರೆ, ಇತ್ತೀಚೆಗಷ್ಟೇ ಗೋವಾ ಸರ್ಕಾರ ಕೈಗೊಂಡಿರುವ ನಿರ್ಧಾರ ಪ್ರವಾಸಿಗರಿಗೆ ಶಾಕ್ ನೀಡುವಂತಿದೆ.

ಇದನ್ನೂ ಓದಿ: HD Kumaraswamy: ವಿಧಾನ ಪರಿಷತ್ ಚುನಾವಣೆಯಲ್ಲೂ ಹಣ, ಗಿಫ್ಟ್ ಹಂಚುತ್ತಿದೆ ಕಾಂಗ್ರೆಸ್: ಹೆಚ್.ಡಿ.ಕುಮಾರಸ್ವಾಮಿ

ಗೋವಾ ಸರ್ಕಾರವು ಜಲಪಾತಗಳು, ನದಿಗಳು ಮತ್ತು ಇತರ ಜಲಮೂಲಗಳಲ್ಲಿ ಈಜುವುದನ್ನು ನಿಷೇಧಿಸಿದೆ. ಮುಂಗಾರು ಆರಂಭಕ್ಕೂ ಮುನ್ನ ಜಲಮೂಲಗಳಲ್ಲಿ ಈಜುವುದನ್ನು ಸರ್ಕಾರ ನಿಷೇಧಿಸಿದೆ. ಹೀಗಾಗಿ ಯಾವುದೇ ಪ್ರವಾಸಿಗರು ಗೋವಾಕ್ಕೆ ಹೋದರೆ ಅಲ್ಲಿ ಈಜಲು ಬಿಡುವುದಿಲ್ಲ. ತಪ್ಪಿ ಈಜಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇದನ್ನೂ ಓದಿ: Bengaluru: ಒಂದು ಸಮುದಾಯಯವನ್ನು ಮಾತ್ರ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ್: ಅಶ್ವಥ್ ನಾರಾಯಣ್

ಉತ್ತರ ಮತ್ತು ದಕ್ಷಿಣ ಗೋವಾದ ಜಿಲ್ಲಾಧಿಕಾರಿಗಳು ಭಾನುವಾರ ಹೊರಡಿಸಿದ ಸುತ್ತೋಲೆಯಲ್ಲಿ, ಆದೇಶವನ್ನು ಪಾಲಿಸದಿದ್ದರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಉಲ್ಲಂಘನೆಯಾಗುತ್ತದೆ. ಸೆಕ್ಷನ್ 188 ಎನ್ನುವುದು ಮಾನವನ ಜೀವನ, ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ವಿಷಯಗಳೊಂದಿಗೆ ವ್ಯವಹರಿಸುವ ವಿಭಾಗವಾಗಿದೆ.

ಗೋವಾ ಸರ್ಕಾರವು ಈ ನಿರ್ಧಾರವನ್ನು ಏಕೆ ತೆಗೆದುಕೊಂಡಿದೆ ಅಂದರೆ ಜಲಪಾತಗಳು, ಕೈಬಿಟ್ಟ ಕಲ್ಲುಗಣಿಗಳು, ನದಿಗಳು, ಸರೋವರಗಳು ಮತ್ತು ಇತರ ಜಲಮೂಲಗಳಲ್ಲಿ ಜನರು ಕೊಚ್ಚಿಕೊಂಡು ಹೋಗುತ್ತಿರುವ ಅನೇಕ ವರದಿಗಳಿವೆ ಹಾಗಾಗಿ ಇಂತಹ ಜಲಮೂಲಗಳಲ್ಲಿ ಈಜುವುದು ಸುರಕ್ಷಿತವಲ್ಲ ಎನ್ನುತ್ತಾರೆ ಅಧಿಕಾರಿಗಳು.

ಸುತ್ತೋಲೆಯಲ್ಲಿ, ಮಾನವ ಜೀವ ಮತ್ತು ಸಾರ್ವಜನಿಕ ಸುರಕ್ಷತೆಗೆ ಯಾವುದೇ ಅಪಾಯವನ್ನು ತಪ್ಪಿಸಲು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಹಾಗಾಗಿ ನಮ್ಮಂತೆ ಬೇರೆ ರಾಜ್ಯದವರು ಮೋಜಿಗಾಗಿ ಗೋವಾಕ್ಕೆ ಹೋಗುತ್ತಾರೆ. ಈಜುವುದನ್ನು ಮರೆಯಬೇಡಿ. ಇದ್ದರೆ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.

You may also like

Leave a Comment