Home » Aadhaar Card Link: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರು ಈ ಕೆಲಸ ಮಾಡಿ! ಕೇಂದ್ರದಿಂದ ಪ್ಯಾನ್ ಕಾರ್ಡ್ ರದ್ದು ಮಾಡಲು ಆದೇಶ!

Aadhaar Card Link: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರು ಈ ಕೆಲಸ ಮಾಡಿ! ಕೇಂದ್ರದಿಂದ ಪ್ಯಾನ್ ಕಾರ್ಡ್ ರದ್ದು ಮಾಡಲು ಆದೇಶ!

0 comments
Aadhaar Card Link

Aadhaar Card Link: ಇದುವರೆಗೆ ಪ್ಯಾನ್ ಕಾರ್ಡ್‌ಗೆ ಆಧಾರ್‌ನಂಬರ್ ಲಿಂಕ್ (Aadhaar Card Link) ಮಾಡದವರಿಗೆ ಎರಡು ದಿನಗಳ ಅವಕಾಶ ಇದೆ. ಎರಡು ದಿನದಲ್ಲಿ ಅವಧಿಯಲ್ಲಿ ಆಧಾರ್ ಲಿಂಕ್ ಮಾಡದೇ ಇದ್ದಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌ಗಳ ಸೇವೆ ನಿಷ್ಕ್ರಿಯವಾಗಲಿವೆ.

ಇದನ್ನೂ ಓದಿ: Women Topless Dress: ಇನ್ಮುಂದೆ ಪಬ್ಲಿಕ್ ಪ್ಲೇಸ್ ನಲ್ಲೂ ಮಹಿಳೆಯರು ಪುರುಷರಂತೆ ‘ಟಾಪ್‌ಲೆಸ್’ ಆಗಲು ಅನುಮತಿ!

ಮಾಹಿತಿ ಪ್ರಕಾರ, ಇನ್ನೂ ಕೂಡ 11 ಕೋಟಿ ಪ್ಯಾನ್‌ ಕಾರ್ಡ್ ಬಳಕೆದಾರರು ಆಧಾರ್ ಲಿಂಕ್ ಮಾಡದೇ ಇದ್ದು, ಅವರ ಪ್ಯಾನ್ ಕಾರ್ಡ್ ರದ್ದಾಗಲಿದೆ ಎಂದು ಕೇಂದ್ರ ಸರ್ಕಾರದಿಂದ ಮುನ್ಸೂಚನೆ ನೀಡಲಾಗಿದೆ.

ಹೌದು, ದೇಶದಲ್ಲಿ ಪ್ರತಿಯೊಬ್ಬ ಪ್ಯಾನ್ ಕಾರ್ಡ್‌ ಹೋಲ್ಡರ್‌ಗಳು ಕಡ್ಡಾಯವಾಗಿ ತಮ್ಮ ಪ್ಯಾನ್‌ಗೆ ಆಧಾರ್ ಕಾರ್ಡ್‌ ನಂಬರ್ ಲಿಂಕ್ ಮಾಡಬೇಕು ಎಂದು 2023ರ ಜೂ.30ರವರೆಗೆ ಗಡುವು ನೀಡಲಾಗಿತ್ತು. ಆಗ ಉಚಿತವಾಗಿಯೇ ಎಲ್ಲರೂ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳಬಹುದಿತ್ತು. ಇದಾದ ನಂತರ ಪ್ರತಿ ಪ್ಯಾನ್ ಮತ್ತು ಅಧಾರ್ ಕಾರ್ಡ್ ಲಿಂಕ್‌ಗೆ 1,000 ರೂ. ದಂಡವನ್ನು ವಿಧಿಸಲಾಗುತ್ತಿದೆ.

ಇದನ್ನೂ ಓದಿ: K S Eshwarappa: ಬಂಡಾಯ ಸ್ಪರ್ಧೆ ಆಯ್ತು, ಈಗ ಮತ್ತೊಂದು ವಿಚಾರದಲ್ಲಿ ಬಿಜೆಪಿಗೆ ಮಗ್ಗಲು ಮುಳ್ಳಾಗಲು ರೆಡಿಯಾದ ಈಶ್ವರಪ್ಪ !!

ಹೀಗೆ ಲಿಂಕ್ ಮಾಡುವ ಅವಧಿ ಕೂಡ ಇದೇ ಮೇ 31ಕ್ಕೆ ಕೊನೆಗೊಳ್ಳಲಿದೆ. ಅಂದರೆ, ಇನ್ನು ಎರಡು ದಿನಗಳು ಮಾತ್ರ ಬಾಕಿಯಿದೆ. ಒಟ್ಟಿನಲ್ಲಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದವರ ಪ್ಯಾನ್ ಕಾರ್ಡ್ ಜೂ.1ರಿಂದ ನಿಷ್ಕ್ರಿಯಗೊಳ್ಳಲಿವೆ.

ಪ್ಯಾನ್‌ಗೆ ಆಧಾರ್ ಲಿಂಕ್ ಮಾಡದಿದ್ದಲ್ಲಿ ಆಧಾರ್ ಲಿಂಕ್ ಆಗದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯಗೊಳ್ಳುತ್ತದೆ.

ಅಲ್ಲದೇ ವಾರ್ಷಿಕ ವರಮಾನದಲ್ಲಿ ಸಾಮಾನ್ಯಕ್ಕಿಂತ ದುಪ್ಪಟ್ಟು ಪ್ರಮಾಣದ (ಶೇ.20) ಟಿಡಿಎಸ್‌ ಕಡಿತಗೊಳ್ಳಲಿದೆ. ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ ಬಳಕೆದಾರರ ಐಟಿ ರಿಟರ್ನ್ಸ್ ರಿಪೋರ್ಟ್ (ಐಟಿಆರ್) ತಿರಸ್ಕೃತಗೊಳ್ಳಲಿದೆ.

ಸರ್ಕಾರ ವಿಧಿಸುವ ದುಬಾರಿ ದಂಡ ಪಾವತಿಸಿ ಪ್ಯಾನ್ ಸಕ್ರಿಯ ಮಾಡಿಕೊಳ್ಳಬೇಕಾಗುತ್ತದೆ. ಪ್ಯಾನ್‌ಗೆ ಆಧಾರ್ ಲಿಂಕ್ ಮಾಡಿಸದ ಜನರು ಬ್ಯಾಂಕ್‌ನಲ್ಲಿ 1 ಲಕ್ಷ ರೂ. ವರ್ಗಾವಣೆ ಮಾಡಿದರೆ 20,000 ರೂ. ಹಣ ತೆರಿಗೆ ರೂಪದಲ್ಲಿ ಕಡಿತವಾಗಲಿದೆ.

ಸದ್ಯ ಇನ್ನೂ ಪ್ಯಾನ್ ಕಾರ್ಡ್‌ಗೆ ಆಧಾರ್ ನಂಬರ್ ಲಿಂಕ್ ಮಾಡುವ ವಿಧಾನ ಇಲ್ಲಿದೆ :

ನೀವು ಮೊದಲು ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in/ಗೆ ಭೇಟಿ ನೀಡಿ.

ಅಲ್ಲಿ ತೋರಿಸುವ ‘ಕ್ವಿಕ್ ಲಿಂಕ್ಸ್’ (Quick Links) ಅಡಿಯಲ್ಲಿ ಇರುವ ‘ಲಿಂಕ್‌ ಆಧಾರ್‌’ (Link Aadhaar) ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್ ಮೇಲಿರುವ ಸಂಖ್ಯೆಗಳನ್ನು ನಮೂದಿಸಿ. ಪ್ರಸ್ತುತ ಮೇ 31ರೊಳಗೆ ದಂಡ ಪಾವತಿಸಲು ‘Continue to Pay Through e-Pay Tax’ ಎಂಬುದನ್ನು ಕ್ಲಿಕ್‌ ಮಾಡಿ. ಮುಂದೆ ಕಾಣಿಸುವ ಪೇಜ್‌ನಲ್ಲಿ ನಿಮ್ಮ ಪ್ಯಾನ್‌ ಸಂಖ್ಯೆ ನಮೂದಿಸಿ, ಅದನ್ನು ಖಚಿತಪಡಿಸಿಕೊಂಡು ಒಟಿಪಿ ಪಡೆಯುವ ಮೊಬೈಲ್ ನಂಬರ್ ನಮೂದಿಸಿ. ಮೊಬೈಲ್‌ಗೆ ಬಂದ ಒಟಿಪಿ ಪರಿಶೀಲನೆಯ ನಂತರ, ತೋರಿಸುವ ಇ-ಪೇ ಟ್ಯಾಕ್ಸ್‌ ಪೇಜ್‌ (e-Pay Tax) ಪುಟ ತೆರೆದುಕೊಳ್ಳುತ್ತದೆ. ಆಗ ಇನ್‌ಕಂ ಟ್ಯಾಕ್ಸ್‌ (Income Tax) ಪೇಜ್‌ನ ಮೇಲಿರುವ ಪ್ರೊಸೀಡ್‌ (Proceed) ಆಪ್ಸನ್ ಮೇಲೆ ಕ್ಲಿಕ್‌ ಮಾಡಿ. ನಂತರ ತೋರಿಸುವ ಹಣದ ಮೊತ್ತವನ್ನು ಪಾವತಿಸಿ.

You may also like

Leave a Comment