Home » Prajwal Revanna: ಪ್ರಜ್ವಲ್‌ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

Prajwal Revanna: ಪ್ರಜ್ವಲ್‌ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

0 comments

Prajwal Revanna: ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಜೂನ್‌ 6 ರವರೆಗೆ ಎಸ್‌ಐಟಿ ಕಸ್ಟಡಿ ನೀಡಲಾಗಿದೆ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಹೊತ್ತಿರುವ ಪ್ರಜ್ವಲ್‌ ರೇವಣ್ಣ ಅವರು ಈ ಸಂದರ್ಭದಲ್ಲಿ ಮಾಧ್ಯಮಗಳ ಟ್ರಯಲ್‌ಗೆ ನಿರ್ಬಂಧ ವಿಧಿಸಲು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾರೆ. ಆದರೆ ವಕೀಲರನ್ನು ಭೇಟಿ ಮಾಡಲು ಜಡ್ಜ್‌ ಸೂಚನೆ ನೀಡಿದ್ದಾರೆ.

ಬೆಳಗ್ಗೆ 9.30 ರಿಂದ 10.30 ರವರೆಗೆ ವಕೀಲರ ಭೇಟಿಗೆ ಅವಕಾಶ. ವೈದ್ಯಕೀಯ ಚಿಕಿತ್ಸೆಗೆ ಅವಕಾಶ, ಇದರ ಜೊತೆಗೆ ಕಸ್ಟಡಿ ಅವಧಿಯಲ್ಲಿರುವಾಗ ಯಾವುದೇ ಕಿರುಕುಳ ನೀಡದಂತೆ ತನಿಖಾಧಿಕಾರಿಗಳಿಗೆ ಕೋರ್ಟ್‌ ಸೂಚನೆ ನೀಡಿದೆ.

ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌ಐಟಿ ಅವರು ನಿನ್ನೆ ಮಧ್ಯರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಬಂಧನ ಮಾಡಿದ್ದು, ನಂತರ ವೈದ್ಯಕೀಯ ತಪಾಸಣೆ ಬಳಿಕ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಮನವಿ ಮಾಡಿತು. ಕೋರ್ಟ್‌ ಇದೀಗ ಪ್ರಜ್ವಲ್‌ ರೇವಣ್ಣರನ್ನು ಆರು ದಿನ ಕಸ್ಟಡಿಗೆ ನೀಡಿದೆ.

ಇದನ್ನೂ ಓದಿ:Harish Poonja: ಭಯೋತ್ಪಾದಕರನ್ನು ಹಿಡಿದು ತಂದಾಗಲೂ ಪೊಲೀಸ್‌ ಠಾಣೆಗೆ ನುಗ್ತೀರಾ ಎಂದು ಹೈಕೋರ್ಟ್ ಪ್ರಶ್ನೆ! ಹರೀಶ್ ಪೂಂಜಾ ಪ್ರತಿಕ್ರಿಯೆ ಹೀಗಿತ್ತು!

You may also like

Leave a Comment