Home » New Delhi: ನೋಡುತ್ತಿದ್ದಂತೆ ಬೆಂಕಿ ಹೊತ್ತಿ ಧಗ ಧಗಿಸಿದ ರೈಲುಗಳು !!

New Delhi: ನೋಡುತ್ತಿದ್ದಂತೆ ಬೆಂಕಿ ಹೊತ್ತಿ ಧಗ ಧಗಿಸಿದ ರೈಲುಗಳು !!

0 comments
New Delhi

New Delhi: ನೋಡ ನೋಡುತ್ತಿದ್ದಂತೆಯೇ ರೈಲೊಂದು ಹೊತ್ತಿ ಉರಿದು, ಪಕ್ಕದ ರೈಲಿಗೂ ಬೆಂಕಿ ತಗುಲಿ ಅದೂ ಕೂಡ ಹೊತ್ತಿ ಉರಿದ ಘಟನೆ ನವದೆಹಲಿ(New Delhi)ಯಲ್ಲಿ ನಡೆದಿದೆ.

https://x.com/HateDetectors/status/1797593089281778007?t=_VjSq45umRdxTWbu8gNvPw&s=08

ಹೌದು, ದಕ್ಷಿಣ ದೆಹಲಿಯ ತುಘಲಕಾಬಾದ್ ರೈಲು ನಿಲ್ದಾಣದ(Tugalakabad Railway Station)ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲಿ ಪಕ್ಕದಲ್ಲಿದ್ದ ಮತ್ತೊಂದು ರೈಲಿಗೂ ಬೆಂಕಿ ತಗುಲಿ ಅದೂ ಹೊತ್ತಿ ಉರಿದಿದೆ.

ನಂತರ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿದ್ದು ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಇನ್ನು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲವಾದರೂ ಇದು ಯಾರದಾದರೂ ಕುಕೃತ್ಯವೇ ಅಥವಾ ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿಯೇ ಎಂಬುದು ತನಿಖೆಯ ನಂತರ ತಿಳಿಯಬೇಕಿದೆ.

You may also like

Leave a Comment